ಹೃದಯ ಗೀತೆ
ಮಳೆ ಬಂದು ಒಡಲು ನೆನೆದರೇನು !?
ಇಳೆಯ ಕಡಲು ಮೊರೆದರೇನು..!
ಕೆಂಪಾದ ಹಗಲು ಕಪ್ಪಾದ ಮುಗಿಲು
ಏನಿದ್ದರೂ
ನನ್ನಲಿ ನೀನಿಲ್ಲವೇನು!!
ಕಡು ಬೇಸರಿಕೆಯ ಮನವಿರಲಿ
ಮೌನದಲಿ ಮನ ತೂಗುತಿರಲಿ..!
ಎದೆಯ ಭಾವ ಭಾರವಿರಲಿ
ನಿನ್ನೆದೆಯ ಕದ ನನಗಾಗಿ ತೆರೆದಿರಲಿ!!
ಜಗತ್ತೇ ಆಡಿಕೊಂಡು ನಗಲಿ
ಹೊಟ್ಟೆಕಿಚ್ಚಿನಲಿ ಮಚ್ಚು ಮಸೆಯಲಿ..!
ಉಸಿರು ನಿಂತು ಮಸಣಕೊಯ್ದರೂ
ಕೊನೆಯುಸಿರು ಮಾತ್ರ ನಿನ್ನದೇ ತೋಳಿನಲಿ!!
ಜನ್ಮಗಳು ಸಾವಿರ ಕಳೆದು
ಯೌವ್ವನವು ಮುಪ್ಪಿನತ್ತ ಸಾಗೆ..!
ಆಸೆ ನಿರಾಸೆಗಳಲಿ ಜೀವ ಬಳಲಿದರೂ
ಕೊನೆಯ ಗಳಿಗೆ ಎಂದೂ ನಿನ್ನ ಜೊತೆಗೆ!!
ಸುಮನಾ ರಮಾನಂದ