ಹೆಜ್ಜೆ ಗುರುತು
ಎಂದಾದರೂ ಒಮ್ಮೆ ಹಿಂತಿರುಗಿ
ನಿಮ್ಮ ಹೆಜ್ಜೆ ಗುರುತುಗಳನ್ನು ನೋಡಿಕೊಂಡಿದ್ದೀರಾ?
ಅಲ್ಲಿರುವ ನೋವು, ಕಷ್ಟ, ಅಳು, ನಗು
ಪರದಾಟ, ಹೊಡೆದಾಟ, ಹಸಿವು, ಬೆವರು
ಎಲ್ಲವೂ ಅಲ್ಲೇ ಅಡಗಿರುವಾಗ
ಸುಮ್ಮನೆ ಮುಂದೆ ಹೋಗುವುದು ಸರಿಯೇ?
ಅವಕಾಶಗಳಿಗೇನು ಕಮ್ಮಿ
ನಿಜ ಪ್ರತಿಭೆಗೆ ಅಭಿವ್ಯಕ್ತಿಸುವ ಚಾತುರ್ಯವಿದ್ದಮೇಲೆ
ಕಲಿಯುವಾಗ ಬೇಕು
ಚಿಕ್ಕಪುಟ್ಟ ಹೆಜ್ಜೆಗಳು ಸವಾಲಿನ ರೂಪದಲ್ಲಿ
ಸತತ ಪರಿಶ್ರಮದ ಜೊತೆಗೆ
ಸಮಯ ಹೊಂದಾಣಿಕೆಯೇ ಗೆಲುವು
ಕಲಿಯಲು ಹಂಬಲಿಸು
ಹಪಾಹಪಿಸು ನಿನ್ನನ್ನೇ ನೀನು ಕೆಳಗಿಳಿಸು
ಸೊನ್ನೆ ಎಂದರೆ ಅಂತ್ಯವಲ್ಲ
ಅದು ಆದಿಯೆಂದು ತಿದ್ದಿ ತಿಳಿಸು
ಕಾಣು, ಸದಾ ಜೀವಿಸುವ ದೊಡ್ಡ ದೊಡ್ಡ ಕನಸುಗಳ
ನಿನ್ನದೇ ದಾರಿಯಲ್ಲಿ, ಪೋಷಿಸು ಅವುಗಳ
ಎಲ್ಲದನ್ನು ರುಚಿ ನೋಡಿ, ಒಂದನ್ನು ಬುತ್ತಿ ಕಟ್ಟು
ಕಣ್ಣಿಗೆ, ಮನಸ್ಸಿಗೆ ಒಂದು ಸಂಬಂಧ ಕಲ್ಪಿಸು
ಅವುಗಳ ಜಾಗೃತಿಗೆ ನಿನ್ನನ್ನೇ ಇರಿಸು
ಸಮಯ, ಸಾಮರ್ಥ್ಯಕ್ಕೆ ತಕ್ಕಂತೆ
ನೀ ಜಗದೊಳು ವರ್ತಿಸು
ಅನಂತ್ ಕುಣಿಗಲ್
(ಎದೆಯ ದನಿ ಕೇಳಿರೋ ಕವನ ಸಂಕಲನದಿಂದ)
3 Comments
ತುಂಬಾ ಸೊಗಸಾದ ಕವಿತೆ..
ಅವಕಾಶಗಳಿಗೇನು ಕಮ್ಮಿ
ಸಮಯ ಹೊಂದಾಣಿಕೆಯೇ ಗೆಲುವು😍
ಹಿಂತಿರುಗಿ ನೋಡಿದಾಗ ಕಳೆದ ಘಟನೆ ನೆನಪು
ಕಾಣಿಸುತ್ತೆ . ಸಕಲ ಭಾವನೆ ಸಮಗ್ರ ಗಂಟು .
ಮರೆಯುವ ನೆನೆಯುವ ಆಗರ . ಕೆಲವು ಅನುಕರಣೀಯ ಕೆಲವು ಅನುಭವ .
ನಿಮ್ಮ ಬರವಣಿಗೆ ಸರಾಗ ಓದುಗರಿಗೆ
ಶುಭಾಶಯ ಅನಂತ್. 👍👍🙌🙌
ಅರ್ಥ ಪೂರ್ಣವಾಗಿದೆ
ಜೀವನದ ಹೆಜ್ಜೆ ಗುರುತು👍