ಹೊತ್ತಿಗೆಯ ಮಹತ್ವದ ಹೊತ್ತು

ಹೊತ್ತಿಗೆಯ ಮಹತ್ವದ ಹೊತ್ತು

ರಾಶಿ ಹೂಗಳ ಮಧ್ಯೆಯಲಿ
ಹೊತ್ತಿಗೆಯು ಇದೆ ನಡುವಲಿ!
ಕಂಗಳಿಗಿಂಪು ಪುಷ್ಪಗಳ ನೋಟ..
ಬುಧ್ದಿಗೆ ತಂಪು ಪುಸ್ತಕದ ಪಾಠ!!

ಪ್ರಕೃತಿಯ ಹಸಿರದೆನಿತು ಸುಂದರ
ನೈಸರ್ಗಿಕ ನೆಲೆಯ ಭಂಡಾರ!
ಪುಸ್ತಕದಲಿಹ ಅಮಿತ ಜ್ಞಾನ..
ಚಿರಾಯುವದು ಮಾಡಿದಾಗ ಮನನ!!

ಸುಂದರ ಗಿರಿ ಶಿಖರದೊಳು
ಕಳೆಯುವ ಸಮಯವೇ ಚೆಂದ!
ಹೊತ್ತಿಗೆಯ ನಿತ್ಯ ಓದುತಿರಲು..
ಮನವಿರಲು ಅದರಲಿ,ಬಿಡದೀ ಬಂಧ!!

ಕಣ್ತೆರೆದು ಹೂಬನವ ನೋಡಿದಾಗ
ನಿಸರ್ಗವೆಂದಿಗೂ ಉಲ್ಲಾಸಮಯ!
ಮನತೆರೆದು ಪುಸ್ತಕವ ಓದಿದಾಗ..
ಜೀವನಪಾಠವು ಆನಂದಮಯ!!

ಸುಮನಾ ರಮಾನಂದ
ಮುಂಬೈ

Related post