ಅಂಗದ – ರಾಮಾಯಣದ ಕಾದಂಬರಿ
ಪುಸ್ತಕದ ಹೆಸರು: ಅಂಗದ
ಪ್ರಕಾರ: ಕಾದಂಬರಿ
ಲೇಖಕರು: ಪ್ರಣವ್ ಭಾರದ್ವಾಜ್
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 100
ಬೆಲೆ: 180/-
ಮೊಬೈಲ್: 9008122991
’ಅಂಗದ’ ಕಾದಂಬರಿಯು ರಾಮಾಯಣದ ಅತ್ಯಂತ ಸಣ್ಣ ಪಾತ್ರವಾದ ವಾಲಿಯ ಮಗ ಅಂಗದನ ಪಾತ್ರವನ್ನು ಕೇಂದ್ರೀಕರಿಸಿದೆ.

ಅಂಗದನ ಪಾತ್ರವು ಇಂತಹ ಹಲವು ಆಯಾಮಗಳನ್ನು ಹೊಂದಿದ್ದು, ಪ್ರಮುಖ ಭೂಮಿಕೆಯಲ್ಲಿಟ್ಟು, ಸುದೀರ್ಘ ಕಾದಂಬರಿಯೊಂದನ್ನು ಬರೆಯಬಹುದಾದ ಘನ ವ್ಯಕ್ತಿತ್ವ ಎಂದು ಸಹಜವಾಗಿ ಯಾರಿಗೂ ಅನ್ನಿಸುವುದೇ ಇಲ್ಲ. ಆದರೆ ಹದಿನೈದು ವರ್ಷದ ಪುಟ್ಟ ಪೋರ ಪ್ರಣವ್ ಭಾರದ್ವಾಜ್ ಈ ಕಾರ್ಯವನ್ನು ಮಾಡಿ ತೋರಿಸಿದ್ದಾನೆ. ಸಣ್ಣ ಪಾತ್ರವನ್ನು ತನ್ನ ಸಂಶೋಧನೆ, ದೃಷ್ಟಿಕೋನ, ವಿವೇಚನೆ, ಕಲ್ಪನೆಗಳಿಂದ ಹಿಗ್ಗಿಸಿ, ಅಂಗದನ ಒಳನೋಟವನ್ನೂ ಮತ್ತು ಹೊರಜಗತ್ತನ್ನೂ ಓದುಗರ ಮುಂದೆ ಕಡೆದು ನಿಲ್ಲಿಸಿದ್ದಾನೆ. ಇದು ವಯಸ್ಸಿಗೆ ಮೀರಿದ ಪ್ರೌಢ ಹಾಗೂ ಅಪ್ರತಿಮ ಸಾಧನೆ! ಈ ಕಾದಂಬರಿಯ ಆರಂಭದಲ್ಲಿ ಕಲೆಗೆ ಪ್ರಾಧಾನ್ಯತೆ ಇದ್ದರೆ, ದ್ವಿತೀಯ ಭಾಗದಲ್ಲಿ ವಿವರಗಳಿಗೆ ಪ್ರಾಧಾನ್ಯತೆ ಇದೆ. ಯುದ್ಧ ವರ್ಣನೆಗಳನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿರುವ ಪ್ರಣವ ಕುಸ್ತಿಪಟುವಲ್ಲ, ಬದಲಿಗೆ ಒಳ್ಳೆಯ ಗಾಯಕ! ಭಾವ ತುಂಬಿ ಹಾಡುವಂತೆಯೇ ಅಂಗದನ ಮನೋವೇದನೆಯನ್ನೂ ಓದುಗರ ಮುಂದೆ ತನ್ನ ಶಕ್ತ್ಯಾನುಸಾರ ನಿರೂಪಿಸಿದ್ದಾನೆ.
ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.
ಸಾಹಿತ್ಯಮೈತ್ರಿ