ಚೀತಾ ಅಥವಾ ಸೀವಂಗಿ ಬೆಕ್ಕಿನ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸಸ್ತನಿ, ಇದರ ಹೋಲಿಕೆ ಸಾಧಾರಣವಾಗಿ ಚಿರತೆಯದ್ದು, ಮೈ ಮೇಲೆ ಚಿಕ್ಕ ಕಲೆಗಳಿವೆ, ಇವು ಬೊಟ್ಟು ಇಟ್ಟಂತೆ ಕಪ್ಪಾಗಿವೆ, ಉದ್ದ ಕಾಲು,ಎತ್ತರ ಸೊಂಟ ತೆಳು ಶರೀರ ವೇಗದ ಓಟಕ್ಕೆ ಹೇಳಿ ಮಾಡಿಸಿದಂತಿವೆ.
ಇದು ಜಗತ್ತಿನಲ್ಲೇ ಅತೀ ವೇಗದ ಪ್ರಾಣಿ ತಾಸಿಗೆ 100 ಕಿ,ಮೀ ವೇಗದಲ್ಲಿ ಓಡಬಲ್ಲದು.
ಚೀತಾ ನ ಕಣ್ಣುಗಳ ಒಳ ಭಾಗದ ಅಂಚಿನಿಂದ ಬಾಯಿಯವರೆಗೆ ಎದ್ದು ಕಾಣುವ ಎರಡುಗೆರೆಗಳಿಂದಾಗಿ ನೋಡಲು ಸ್ವಲ್ಪ ಅಳು ಮುಖದ ಪ್ರಾಣಿಯಂತೆ ಕಾಣುತ್ತದೆ, ಇದರ ಕೂದಲು ಚಿರತೆಯಂತೆ ನಯವಲ್ಲ, ಸ್ವಲ್ಪ ಒರಟು.ಬೆಕ್ಕಿನಂತೆ ಗುರುಗುಟ್ಟುವ ಸ್ವಭಾವ,ಗರ್ಜನೆಯ ಧ್ವನಿ ಇಲ್ಲ. ಮರಿಗಳನ್ನು ಕರೆಯುವಾಗ or ಮರಿಗಳಿಗೆ ಅಪಾಯವಿದ್ದಾಗ ಬೇರೆ ಬೇರೆ ಧ್ವನಿಯನ್ನು ಹೊರಡಿಸುತ್ತವೆ.
ಆಂಗ್ಲದಲ್ಲಿ ಇದಕ್ಕೆ ಚೀತಾ ಅಥವಾ ಹಂಟಿಂಗ್ ಲೆಪರ್ಡ್ ಎನ್ನುವರು , ನಮ್ಮಲ್ಲಿ ಬೇಟೆ ಚಿರತೆ ಎನ್ನುತ್ತಾರೆ. ಚೀತಾ ಈ ಹೆಸರು ನಮ್ಮ ದೇಶದ್ದು ಚೀತಾ ಎಂದರೆ ಕಲೆಯುಳ್ಳ ಎಂದು ಅರ್ಥ
40-70 Kg ಭಾರವಿರುವ ಇದರ ಜೀವಿತಾವಧಿ ಸುಮಾರು 15 ವರ್ಷಗಳು, ಹೆಣ್ಣಿಗಿಂತ ಗಂಡು ದೊಡ್ಡದು, ಮರ ಏರಬಲ್ಲದು ಆದರೆ ಇಳಿಯುವಾಗ ಹಾರುತ್ತದೆ ಕಾರಣ ಇದಕ್ಕೆ ಬೆಕ್ಕುಗಳಂತೆ ಉಗುರುಗಳು ಇರುವುದಿಲ್ಲ!!!
ಹೌದು ಬೆಕ್ಕಿನ ಬಳಗದ ಎಲ್ಲಾ ಪ್ರಾಣಿಗಳ ಉಗುರುಗಳು ಓಡಾಡುವಾಗ ಒಳಗೆ ಮುಚ್ಚಿಕೊಂಡಿರುತ್ತವೆ, ಆದರೆ ಚೀತಾದ ಉಗುರುಗಳು ಯಾವಾಗಲು ಹೊರಗೆ ಚಾಚಿಕೊಂಡಿರುತ್ತವೆ ಒಳಕ್ಕೆ ಮಡಚುವುದಿಲ್ಲ.
ಹೆಣ್ಣು ಚೀತಾಗಳು 2 ವರ್ಷದ ನಂತರ ಬೆದೆಗೆ ಬರುತ್ತವೆ, ಗರ್ಭಾವಧಿ 90-92 ದಿನಗಳು , ಒಂದು ಸೂಲದಲ್ಲಿ 1-6 ಮರಿ ಹಾಕುತ್ತವೆ. ಮರಿಗಳು 10 ದಿನಗಳ ನಂತರ ಕಣ್ಣು ತೆರೆಯುತ್ತವೆ.
ಬೇಟೆಯ ತಂತ್ರ
ಚೀತಾ ವೇಗದ ಪ್ರಾಣಿಯಾದರೂ ಬೇಟೆಯನ್ನು ಹಿಡಿಯುವಾಗ ಬಹಳ ದೂರ ಓಡುವುದಿಲ್ಲ. ಗಂಟೆಗೆ 100 ಕಿಮೀ ವೇಗದಲ್ಲಿ Guzzle(ಚಿಂಕಾರ ) ಗಳನ್ನು ಬೆನ್ನಟ್ಟಿದಾಗ ದೇಹದ ಉಷ್ಣತೆ ಏರುತ್ತದೆ , ಹೃದಯ ಬಡಿತ ಗರಿಷ್ಠ ವೇಗ ತಲುಪುತ್ತದೆ ಹಾಗಾಗಿ ಕೆಲವೇ ಸೆಕೆಂಡುಗಳ ಒಳಗೆ ಬಲಿ ಪ್ರಾಣಿ ಹಿಡಿಯಬೇಕು ಇಲ್ಲವೆ ಬೆನ್ನಟ್ಟುವುದನ್ನು ನಿಲ್ಲಿಸಬೇಕು, ಹೀಗೆ ಮಾಡದಿದ್ದರೆ ಚೀತಾದ ಹಾರ್ಟ್ failure ಆಗಬಹುದು or muscle collapse ಆಗಬಹುದು. ಹಾಗಾಗಿ ಬೇಟೆಯನ್ನು 20 ಸೆಕೆಂಡ್ ಗಳಿಂದ ಸುಮಾರು ಒಂದು ನಿಮಿಷದ ಒಳಗಾಗಿ ಹಿಡಿಯುವ ವೀಡಿಯೋಗಳನ್ನು ನೋಡುತ್ತೇವೆ.
ಚೀತಾ ಅಪಾಯಕಾರಿಯಲ್ಲ
ಹೌದು ಚಿರತೆ (leopard) ಗಳು ಮನುಷ್ಯನ ಮೇಲೆರಗಿ ಕೊಂದ ಘಟನೆಗಳು ಬಹಳಷ್ಟಿವೆ, ಆದರೆ ಚೀತಾ ಮನುಷ್ಯರಿಗೆ ಹಾನಿ ಮಾಡಿದ ಯಾವುದೇ ದಾಖಲೆಗಳು ಇಲ್ಲ. ಮಹಾರಾಜರ ಕಾಲದಲ್ಲಿ ಇವುಗಳನ್ನ ಸಾಕಿ ಪಳಗಿಸಿ ಬೇಟೆಗೆ ಬಳಸುತ್ತಿದ್ದರು.
ನಮ್ಮ ದೇಶದಲ್ಲಿಯೂ ಚೀತಾ ಇತ್ತು
ಈಗ ಚೀತಾ ಗಳು ಆಫ್ರಿಕಾದಲ್ಲಿವೆ ಆದರೆ ಹಿಂದೊಮ್ಮೆ Asiatic ಚೀತಾ ನಮ್ಮ ದೇಶದಲ್ಲೂ ಇತ್ತು. ನಮ್ಮ ದೇಶದ ಪ್ರಬೇಧವನ್ನು Acinonyx jubatus venticus ಎಂದು ಕರೆಯುತ್ತಾರೆ, 1900-1950 ಇಸವಿಯ ನಡುವೆ ನಡೆದ ಅಮಾನುಷ ಹತ್ಯೆಗಳು ಇವುಗಳನ್ನು ವಿನಾಶದತ್ತ ತಂದವು ವಿನೋದಕ್ಕಾಗಿ ನಡೆದ ಕೃತ್ಯಗಳು, trophy Hunting ಇನ್ನಿಲ್ಲದಂತೆ ನಡೆದವು.ನಮ್ಮ ದೇಶದಲ್ಲಿ ಇವುಗಳ ಕೊನೆಯ ಅಧಿಕೃತ ದಾಖಲೆ ಎಂದರೆ ಮದ್ಯ ಪ್ರದೇಶದ ಬಸ್ತಾರ ಜಿಲ್ಲೆಯಲ್ಲಿ 3 ಗಂಡು ಚೀತಾಗಳನ್ನು ಗುಂಡಿಕ್ಕಿ ಕೊಂದದ್ದು. ಆ ನಂತರ ಇವುಗಳನ್ನು ನೋಡಿದ ದಾಖಲೆ ಇಲ್ಲ.ಇರಾನಿನ ಕೆಲವು ಭಾಗದಲ್ಲಿ ಈಗಲೂ ಏಷಿಯಾಟಿಕ್ ಚೀತಾ ಬೆರಳೆಣಿಕೆಯಷ್ಟಿವೆ(Critically endangered) ಅವುಗಳು ಕೂಡ ವಿನಾಶದಂಚಿನಲ್ಲಿವೆ.
ನಮ್ಮ ದೇಶದಲ್ಲಿ ಚೀತಾ ಅಳಿದು ಹೋದ ಪ್ರಾಣಿಗಳ ಪಟ್ಟಿಯಲ್ಲಿ ಶಾಶ್ವತ ಸ್ಥಾನ ಪಡೆದಿದೆ.
ನಮ್ಮಲ್ಲಿರುವ ಕೃಷ್ಣಮೃಗ, ಚಿಂಕಾರಗಳನ್ನು ಬೆನ್ನಟ್ಟಿ ಹಿಡಿಯುವುದು ಚೀತಾಗೆ ಮಾತ್ರ ಸಾಧ್ಯ.ಆದರೆ ಚೀತಾ ನಮ್ಮಲ್ಲಿ ಇಲ್ಲ.
ಇತ್ತೀಚಿಗೆ ಭಾರತದಲ್ಲಿ ಚೀತಾವನ್ನು ಮರು ಪರಿಚಯಿಸುವ (reintroduce) ಯೋಜನೆಯೊಂದು ಸುದ್ದಿ ಮಾಡಿತ್ತು, ಅದಕ್ಕೆ ಕೋರ್ಟ್ ಕೂಡ ಅಸ್ತು ಎಂದಿತ್ತು. ಚೀತಾಗಳು ಬೇಟೆಯನ್ನು ಓಡಿಸಿ ಹಿಡಿಯುವುದರಿಂದ ಅವುಗಳಿಗೆ ಕೃಷ್ಣಮೃಗ, ಚಿಂಕಾರ, ಜಿಂಕೆಗಳಿರುವ ವಿಶಾಲ ಬಯಲುಗಳ ಕುರುಚಲು ಕಾಡಿನ ಅಗತ್ಯ ಇದೆ, ಈ ಬಯಲುಗಳು 800 – 1000 ಚದುರ ಕಿಮೀ ವಿಶಾಲವಾಗಿರಬೇಕು ಹಾಗು ಮಾನವನ ಹಸ್ತಕ್ಷೇಪ ಇರಬಾರದು, ಇಂತಹ ಕಾಡುಗಳು ನಮ್ಮಲ್ಲಿ ಇಲ್ಲದಿರುವುದರಿಂದ ಈ ಯೋಜನೆ ಕಾರ್ಯ ಸಾದುವಲ್ಲ ಎನ್ನಬಹುದು.
ಅನ್ಯಗ್ರಹಗಳಲ್ಲಿ ಜೀವಿಗಳು ಇವೆಯೇ ಎಂದು ದೂರದರ್ಶಕ ಹಿಡಿದು ಕೂರುವ ನಾವು ನಮ್ಮಲ್ಲಿರುವ ಭೂ ಗ್ರಹ ಹಾಳು ಮಾಡಿ , ಇಲ್ಲಿನ ಜೀವಿಗಳ ನಾಶಕ್ಕೆ ಕಾರಣರಾಗಿ ಅನ್ಯಗ್ರಹ ಜೀವಿಗಳ ಸಂಶೋದನೆಯಲ್ಲಿ ತೊಡಗಿರುವುದು ದುರಂತವೇ ಸರಿ.
ನಾಗರಾಜ್ ಬೆಳ್ಳೂರ್
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್