ಅದೃಶ್ಯ ಬೇರುಗಳು – ಏಳು ಲೇಖಕರ ಖೋ ಕಾದಂಬರಿ

ಅದೃಶ್ಯ ಬೇರುಗಳು – ಏಳು ಲೇಖಕರ ಖೋ ಕಾದಂಬರಿ

ಪುಸ್ತಕದ ಹೆಸರು: ಅದೃಶ್ಯ ಬೇರುಗಳು
ಪ್ರಕಾರ: ಕಾದಂಬರಿ
ಲೇಖಕರು: ಉಷಾ ರಾಣಿ ಟಿ.ಆರ್
ಗಿರಿಜಾ ರಾಜ್ ಎಲ್
ಶಂಕರ ರಾವ್ ಎನ್
ಸಿಂಧು ಹರಿತಸ್
ಗಾಯತ್ರಿ ಮೂರ್ತಿ
ಎಚ್.ವಿ.ಶ್ರೀ ಪ್ರಕಾಶ್
ರಘುರಾಂ ಎನ್ ವಿ
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 188
ಬೆಲೆ: 260/-
ಮೊಬೈಲ್: 9008122991

ಏಳು ಸ್ವರವು ಸೇರಿ ಸಂಗೀತವಾಗುವಂತೆ, ಏಳು ಲೇಖಕರ ಬರವಣಿಗೆಯು ಸೇರಿ ಇಲ್ಲಿ ಒಂದು ಗಂಭೀರವಾದ ಕಾದಂಬರಿಯಾಗಿದೆ.

ಓದುತ್ತಿದ್ದರೆ, ಇದು ಏಳು ಜನರು ಹಂಚಿಕೊಂಡು ಬರೆದ ಕಾದಂಬರಿಯಂತೆ ಕಾಣಿಸದೆ, ಒಬ್ಬರೇ ಸೂತ್ರವಿಡಿದು ಬರೆದಂತೆ ತೋರುತ್ತದೆ ಎಂದರೆ ಈ ಬರಹಗಾರರ ವೇವ್ಲೆಂತ್ ಎಷ್ಟರಮಟ್ಟಿಗೆ ಹೊಂದಿಕೆಯಾಗಿರಬೇಕು ಎಂದು ಊಹಿಸಿಕೊಳ್ಳಬಹುದು! ವೈಜ್ಞಾನಿಕ ವಸ್ತುವನ್ನು ಹೊಂದಿದ್ದರೂ, ಇದು ನಿಂತಿರುವುದು ಭಾವನಾತ್ಮಕತೆಯ ತಳಹದಿಯ ಮೇಲೆ! ಸಿನೆಮಾ ಚಿತ್ರಕಥೆಯ ಧಾಟಿಯಲ್ಲಿ ಲವಲವಿಕೆಯಿಂದ ನಿರೂಪಣೆ ಸಾಗುತ್ತಾ, ಓದುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದೆ. ಹಲವು ಹಿರಿಯ-ಕಿರಿಯ ಸ್ತ್ರೀ-ಪುರುಷ ಸಂಬಂಧಗಳ ಸಾಮರಸ್ಯದ ಹೆಣಿಗೆ ಇಲ್ಲಿದೆ. ಕಥಾ ಎಳೆಯು ಡಾ.ಎಸ್.ಎಲ್.ಭೈರಪ್ಪನವರ ಪ್ರಸಿದ್ಧ ಕಾದಂಬರಿಯಾದ ‘ವಂಶವೃಕ್ಷ’ವನ್ನು ನೆನಪಿಸುತ್ತದೆ.

ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.

ಸಾಹಿತ್ಯಮೈತ್ರಿ

Related post