ಅಮ್ಮ ಅಂದ್ರೆ ಭೂಮಿ – ಕಥಾ ಸಂಕಲನ
ಪುಸ್ತಕದ ಹೆಸರು: ಅಮ್ಮ ಅಂದ್ರೆ ಭೂಮಿ
ಪ್ರಕಾರ: ಕಥಾ ಸಂಕಲನ
ಲೇಖಕರು: ಸ ಹರೀಶ್
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 138
ಬೆಲೆ: 200/-
ಮೊಬೈಲ್: 9008122991
‘ಅಮ್ಮ ಅಂದ್ರೆ ಭೂಮಿ’ ಸಂಕಲನದ ಎಲ್ಲ ಕಥೆಗಳೆಲ್ಲವು ಒಂದಲ್ಲ ಒಂದು ಆಪ್ತರೀತಿಯಲ್ಲಿ ಓದಿಸಿಕೊಂಡು ಹೋಗುತ್ತವೆ.

ಹರೀಶ್ ಅವರ ಬರವಣಿಗೆಯಲ್ಲಿ ಅಬ್ಬರವಿಲ್ಲದ, ಸೂಕ್ಷ್ಮ ಮನಸ್ಸಿನ ಹಾಗೂ ನವಿರಾಗಿ ಕಥೆಯನ್ನು ಹೇಳುವ ಶೈಲಿ ವಿಶೇಷವಾಗಿದೆ. ಸುಮ್ಮನೆ ಟೈಮ್ ಪಾಸ್ ಗೆ ಓದಿ ಮರೆಯುವಂಥ ಒಂದೇ ಒಂದು ಕಥೆ ಅಥವ ಕಾದಂಬರಿ ಅವರ ಲೇಖನಿಯಿಂದ ಬಂದೇ ಇಲ್ಲ. ಓದುಗನನ್ನು ಓದಿನ ನಂತರವೂ ಮನಸ್ಸಿನಲ್ಲಿ ಉಳಿಸುವ ಹಾಗೂ ಯೋಚನೆಗೆ ಹಚ್ಚುವ ಅಪರೂಪದ ಗುಣ ಹರೀಶರ ಬರವಣಿಗೆಯಲ್ಲಿ ಯಾವತ್ತೂ ಕಾಣುತ್ತದೆ. ಅವರ ಬರವಣಿಗೆಯ ಸ್ಥಿರತೆ, ಗಟ್ಟಿತನ ಹಾಗೂ ಬಂಧ ನನಗೆ ಬೆರಗು ಹುಟ್ಟಿಸುತ್ತದೆ. ಬಹುಶ: ಅವರಿಗೆ ಬರವಣಿಗೆಯ ಮೇಲಿನ ಪ್ರೀತಿ, ವ್ಯಾಮೋಹದಿಂದ ಇದು ಸಾಧ್ಯವಾಗಿದೆ. ಅಲ್ಲದೇ ಟೀವಿ, ಸಿನಿಮಾ ಮಾಧ್ಯಮಗಳಿಗೆ ಬರೆದ ಅವರ ಅನುಭವ, ಅವರ ಸಾಹಿತ್ಯದ ಬರವಣಿಗೆಗೆ ಇನ್ನಷ್ಟು ಹೊಳಪು ನೀಡಿದೆ.
ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.
ಸಾಹಿತ್ಯಮೈತ್ರಿ