ಅವಳಿ – ಜವಳಿ
ಸಮೀರ್ ನಿಗೆ ಒಂದು ವಾಟ್ಸ್ ಆಪ್ ಮೇಸಜ್ ನಲ್ಲಿ ತಂಗಿ ಸುಮಯ್ಯ ಒಂದು ಹುಡುಗಿಯ ಫೋಟೋ ಕಳಿಸುತ್ತಾಳೆ. ಓಪನ್ ಮಾಡಿ ನೋಡಿದ ಸಮೀರ್ ನಿಗೆ ಸನಾ ಒಂದೇ ನೋಟಕ್ಕೆ ಇಷ್ಟವಾದಳು ಫೋನ್ ಮಾಡಿ ಸುಮಯ್ಯ ಳಿಗೆ ನನಗೆ ಹುಡುಗಿ ಒಪ್ಪಿಗೆ ಬರುವ ವಾರವೇ ಊರಿಗೆ ಬರುತ್ತಿದ್ದೇನೆ ಒಂದು ತಿಂಗಳು ರಜೆ ಇದೆ ಮದುವೆ ಆಗಿಯೇ ಬರುತ್ತೇನೆ ಎಂದು ಫೋನ್ ಕಟ್ ಮಾಡಿದ.
ಸನಾ ತುಸು ಉತ್ಸಾಹ ದಿಂದಲೇ ಕನ್ನಡಿಯ ಮುಂದೆ ನಿಂತು ಅಲಂಕಾರ ಗೊಳ್ಳುತ್ತಿದಾಳೆ, ಇಂದು ಅವಳನ್ನು ನೋಡಲು ಗಂಡಿನ ಕಡೆಯವರು ಬರುತ್ತಿದಾರೆ ಜೊತೆಗೆ ಗಂಡು ಸಮೀರ್ ಕೂಡ.
ಫೋಟೋ ದಲ್ಲಿ ನೋಡ್ದಿದ್ದ ಸನಾ ಳಿಗೆ ಸಮೀರ್ ತುಂಬಾ ಇಷ್ಟವಾಗಿದ್ದ, ಫೋಟೋ ನೋಡಿದ ದಿನದಿಂದಲೇ ಸಮೀರ್ ಬಗ್ಗೆ ಕನಸು ಕಾಣುತಿದ್ದಳು. ಎಂದಿಗಿಂತ ತುಸು ಹೆಚ್ಚೇ ಅಲಂಕಾರ ಗೊಂಡು ಕನ್ನಡಿ ನೋಡಿ ತನ್ನ ಸೌಂದರ್ಯಕ್ಕೆ ತಾನೇ ಮೆಚ್ಚುಗೆ ವ್ಯಕ್ತ ಪಡಿಸಿದಳು.
ಗಂಡಿನ ಕಡೆಯವರು ಬಂದು ಸನಾ ಳನ್ನು ನೋಡಿದರು ಸಮೀರ್ ಕೂಡ ಸನಾ ಳನ್ನು ನೋಡಿ ಒಪ್ಪಿಗೆ ಸೂಚಿಸಿದ. ಸನಾಳ ಸಂತೋಷಕ್ಕೆ ಪಾರವೇ ಇಲ್ಲ ಅಷ್ಟರಲ್ಲಿ ಹೊರಗಿನಿಂದ ಗುಸುಗುಸು ಮಾತು ಕೇಳಿ ಬರುತಿತ್ತು. ಹುಡುಗಿ ಅವಳಿ ಜವಳಿ ಸನಾ ಮತ್ತು ನಿಶಾ, ಸಮೀರ್ ನ ತಾಯಿ ಒಳ ಬಂದು ಸನ ಳ ತಾಯಿ ಯೊಡನೆ ಸಮೀರ್ ಗೆ ಅವಳಿ ಜವಳಿ ಇಷ್ಟವಿಲ್ಲ ಎಂದು ಹೇಳಿದಳು. ಇದನ್ನು ಕೇಳಿದ ಸನಾ ಳಿಗೆ ಕೋಪ ಬೇಸರ ಎಲ್ಲ ಒಮ್ಮೆಲೇ ಆಯಿತು, ಕೊನೆಗೂ ಆ ಸಂಬಂಧ ಅವಳಿ – ಜವಳಿ ಎಂಬ ಕಾರಣಕ್ಕೆ ಮುರಿದು ಬಿತ್ತು.
ಸಮೀರ್ ದುಬೈ ನಿಂದ ಮದುವೆ ಆಗಿ ಹೋಗಲೆಂದು ಬಂದಿದ್ದ. ಕೊನೆಗೂ ಒಂದು ಹುಡುಗಿ ನೋಡಿ ಮದುವೆ ಆಗಿ ದುಬೈ ಗೆ ಮರಳಿ ಹೋದ, ಇತ್ತ ಸಮೀರ್ ಹೆಂಡತಿ ಗರ್ಭವತಿ ಯಾದಳು.
ಎಂದಿನಂತೆ ಸಮೀರ್ ಬೆಳಗ್ಗೆ ಆಫೀಸ್ ಗೆ ಹೋಗಿ ಕೆಲಸ ಮಾಡುತ್ತಿದ್ದಾಗ ಊರಿನಿಂದ ಕರೆ ಬಂತು ಅತ್ತ ಕಡೆಯಿಂದ ಸಮೀರ್ ನ ತಾಯಿ ನಿನ್ನ ಹೆಂಡತಿಗೆ ಹೆರಿಗೆಯಾಯಿತು ಎರಡು ಅವಳಿ ಜವಳಿ ಹೆಣ್ಣು ಮಕ್ಕಳು ಎಂದು ಕರೆ ಕಟ್ ಮಾಡಿದರು. ಇದನ್ನು ಕೇಳಿದ ಸಮೀರ್ ನಿಗೆ ಅಂದು ಅವಳಿ ಜವಳಿ ಹುಡುಗಿ ಎಂದು ಬಿಟ್ಟು ಬಂದಿದ್ದ ಸನಾ ಳ ನೆನಪಾಯಿತು. ಇಂದು ನನಗೆ ಅವಳಿ ಜವಳಿ ಹೆಣ್ಣು ಮಕ್ಕಳು.
( ಸತ್ಯ ಆಧಾರಿತ ಕಥೆ)
ಫೌಝಿಯಾ ಹರ್ಷದ್