ಅವ್ವ ಪುಸ್ತಕಾಲಯ ಬಳಗದ ಮೂರನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆ
ಹಲವಾರು ಸಾಹಿತ್ಯಕ ಚಟುವಟಿಕೆಗಳಿಂದ ಸಾಹಿತ್ಯಾಸಕ್ತರ ಮನೆಮಾತಾಗಿರುವ ಅವ್ವ ಪುಸ್ತಕಾಲಯ ಬಳಗವು ಮೂರನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಸ್ಪರ್ಧೆ 01 – ಸ್ವರಚಿತ ಕವನ ವಾಚನ :
“ಅವ್ವ” ವಿಷಯಾಧಾರಿತ ಸ್ವರಚಿತ ಕವನವೊಂದನ್ನು 4 ನಿಮಿಷಗಳ ಒಳಗೆ ವಾಚಿಸಿ ನಮಗೆ ಕಳುಹಿಸಬಹುದಾಗಿದೆ.
ಸ್ಪರ್ಧೆ 02 – ಪೂರ್ಣಚಂದ್ರ ತೇಜಸ್ವಿ ಕುರಿತ ಲೇಖನ ಸ್ಪರ್ಧೆ :
ಕನ್ನಡ ಸಾರಸ್ವತ ಲೋಕ ಕಂಡ ಅತ್ಯದ್ಭುತ ಸಾಹಿತಿ, ಅಕ್ಷರ ಲೋಕದ ಮಾಯಾವಿ, ಆಲ್ರೌಂಡರ್ ಪೂರ್ಣಚಂದ್ರ ತೇಜಸ್ವಿಯವರ ವ್ಯಕ್ತಿತ್ವ, ಹವ್ಯಾಸಗಳು, ಕೃತಿಗಳನ್ನು ಕುರಿತಂತೆ 500 ಪದಗಳನ್ನು ಮೀರದ ಲೇಖನವನ್ನು ಬರೆದು ನಮಗೆ ಕಳುಹಿಸಬಹುದಾಗಿದೆ.
ಎರಡೂ ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಾಗಲೀ, ವಯೋಮಿತಿಯಾಗಲಿ ಇಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕವನ ವಾಚನದ ವೀಡಿಯೋ ಮತ್ತು ಲೇಖನವನ್ನು (ಪಿ ಡಿ ಎಫ್ ರೂಪದಲ್ಲಿರಲಿ) 8548948660 ನಂಬರಿನ ವಾಟ್ಸಾಪಿಗೆ ದಿನಾಂಕ 25-12-2022ರ ಒಳಗೆ ಕಳುಹಿಸಬಹುದಾಗಿದೆ.
ಪ್ರತಿ ಸ್ಪರ್ಧೆಯಲ್ಲಿ ಮೂರು ಜನ ವಿಜೇತರನ್ನು ಆಯ್ಕೆ ಮಾಡಿ, ಜನವರಿ ತಿಂಗಳಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರದೊಂದಿಗೆ ಅಭಿನಂದಿಸಲಾಗುತ್ತದೆ.
ಸಾಹಿತ್ಯಮೈತ್ರಿ ತಂಡ
2 Comments
ನಾನೊಬ್ಬ ಕನ್ನಡಿಗ-ಭಾರತೀಯ.
ಸಾಹಿತ್ಯಾಸಕ್ತ.
ಬಿಡುವಿದ್ದಾಗ ಬರಹ ಗಿರಹಗಳ ಗೀಚು
ಆಗೊಮ್ಮೆ ಈಗೊಮ್ಮೆ .
ಸರ್ ನಿಮ್ಮ ಬರಹಗಳನ್ನು 91-83102559489 ಅಥವಾ sahityamaithri@gmail.com ಗೆ ಕಳುಹಿಸಿ. ಜೊತೆಗೆ ಒಂದು ಫೋಟೋ ಸಹ ಕಳುಹಿಸಿ