ಆಮೇಜಾನ್ ಕಾಡಿನ ಜಾಗ್ವಾರ್

ಆಮೇಜಾನ್ ಕಾಡಿನ ಜಾಗ್ವಾರ್

ಅಘ್ರ ಪರಭಕ್ಷಕ ವನ್ಯಜೀವಿಗಳಲ್ಲಿ ಧೈಹಿಕ ಶಕ್ತಿ ಸಾಮರ್ಥ್ಯ‌, ಭೇಟೆಯಾಡುವ ಕುಶಲತೆ ಮತ್ತು ಯಾವ ಪ್ರದೇಶದಲ್ಲಿ ಭೇಟೆಯಾಡುತ್ತಿದೆಯೋ ಆ ಪ್ರದೇಶಕ್ಕೆ ತಕ್ಕಂತೆ ಹೊಂದಿಕೊಂಡು ಭೇಟೆಯಾಡಲು ಸಹಕರಿಸುವ ಅವುಗಳ ದೇಹದ ಗುಣಲಕ್ಷಣಗಳು ಸಹ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

ಬೆಕ್ಕಿನ ಕುಲದ ( Cat family) ಅಘ್ರಪರಭಕ್ಷಕ ಪಟ್ಟಿಗೆ ಬಂದಾಗ ಹುಲಿ ಸಿಂಹಗಳು ನಿಸ್ಸಂದೇಹವಾಗಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತವೆ ಎನ್ನುವುದು ನಿಜ.

ಈ ಕ್ಯಾಟ್ ಪ್ಯಾಮಿಲಿಯ ಹೆಚ್ಚಿನವು ನೀರಿನಲ್ಲಿ ಆರಾಮವಾಗಿ ಈಜಬಲ್ಲವಾದರೂ ಹೆಚ್ಚಾಗಿ ನೀರಿನಿಂದ ದೂರವೇ ಉಳಿಯ ಬಯಸುತ್ತವೆ ಅಲ್ಲದೇ ಭೂಮಿಯ ಮೇಲಿನಂತೆಯೇ ಸಮರ್ಥವಾಗಿ ಹರಿಯುವ ನದಿ ಸರೋವರ ಕೊಳ್ಳಗಳಲ್ಲಿ ಭೇಟೆಯಾಡಲಾರವು. ನೀರಿನಲ್ಲಿ ಭೇಟೆಯಾಡುವಾಗ ಅವುಗಳ ಶಕ್ತಿ ಸಾಮರ್ಥ್ಯ ಭೂಮಿಯ ಮೇಲಿನಂತಿರದೇ ತುಸು ಮಟ್ಟಿಗೆ ಕುಂಠಿತವೆನಿಸುತ್ತದೆ.

ಆದರೇ ಅಮೇಜಾನ್ ಕಾಡಿನ ಜಗ್ವಾರ್ ಗಳು ಹಾಗಲ್ಲ .ಇವು ಭೂಮಿಯ ಮೇಲಿನಂತೆಯೇ ನೀರಿನಾಳದಲ್ಲಿಯೂ ಈಜುತ್ತ ಅನಾಯಾಸವಾಗಿ ನಿಪುಣವಾಗಿ ಸಮರ್ಥವಾಗಿ ಭೇಟೆಯಾಡಬಲ್ಲ ಸಮಯಾನುವರ್ತಿಯ ಅಘ್ರಪರಭಕ್ಷಕಗಳು (Opportunistic top predators). ಜಾಗ್ವಾರ್ ಗಳು ನೀರಿನಾಳದಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಗಳ ವರೆಗೂ ಆರಾಮವಾಗಿ ಉಸಿರು ಬಿಗಿಹಿಡಿದುಕೊಂಡು ಇರಬಲ್ಲವು.

ಭೂಮಿಯ ಮೇಲೆ ಗಂಟೆಗೆ 80 ಕಿಮೀ ವೇಗದಲ್ಲಿ ಓಡಬಲ್ಲವಾದರೂ ಇವು ಹುಲಿ ಸಿಂಹ ಚಿರತೆ ಚೀತಾಗಳಂತೆ ಓಡಿ ಭೇಟೆ ಪ್ರಾಣಿಯ ಬೆನ್ನು ಹತ್ತಿ ಭೇಟೆಯಾಡುವುದು ತುಸು ಕಡಿಮೆ. ಹೆಚ್ಚಾಗಿ ಪೊದೆಗಳ ಕೆಳಗೆ ಹಿಂದೆ ಅಕ್ಕಪಕ್ಕ ಅಡುಗುವ ಇವು ಭೇಟೆಪ್ರಾಣಿ ಸಮೀಪಿಸಿದಾಗ ಮಾತ್ರ ತಕ್ಷಣವೇ ಮಿಂಚಿನ ವೇಗದಲ್ಲಿ ಅವುಗಳ ಮೇಲೆರುಗುತ್ತವೆ. ತೀರಾ ಕೆಲವೇ ಕೆಲವು ಸಂಧರ್ಭಗಳಲ್ಲಿ ಮಾತ್ರವೇ ಭೇಟೆಪ್ರಾಣಿಯ ಹಿಂದೆ ಬೆನ್ನತ್ತಿ ಒಡುತ್ತವೆ.

ಜಿಂಕೆ, ಕಾಡುಮಂಗ, ಮೀನು, ಮೊಸಳೆ, ಹೆಬ್ಬಾವು, ಮರಿ ಅನಕೊಂಡಾ, ಇಗ್ವಾನಾ, ಕಾಪಿಬರಾ, ಹದ್ದುಗಳ ಜೊತೆಗೆ ಆಮೆಗಳನ್ನು ಸಹ ಭೇಟೆಯಾಡಿ ಭಕ್ಷಿಸುತ್ತವೆ. ಇವುಗಳ ದವಡೆಗೆ ಸಿಕ್ಕಿಬಿಳುವ ಮೊಸಳೆಗಳಂತೂ ವಿಲವಿಲನೆ ಒದ್ದಾಡುತ್ತವೆ. ಹೆಚ್ಚಿನ ಭೇಟೆಪ್ರಾಣಿಗಳ ದವಡೆ ಹಲ್ಲುಗಳಿಗೆ ಅಭೇಧ್ಯ ಎಂದೆನಿಸುವ ಆಮೆಯ ಬೆನ್ನಿನ ಚಿಪ್ಪನ್ನ ಇವು ಆರಾಮವಾಗಿ “ಕಟ್” ಎಂದು ತುಂಡರಿಸಿ ಭಕ್ಷಿಸಬಲ್ಲವು. ಹೆಬ್ಬಾವು ಗಾತ್ರದಲ್ಲಿ ತಮಗಿಂತ ಚಿಕ್ಕದಾದ ಅನಕೊಂಡಾ ಗಳನ್ನ ಸಹ ಅನಾಯಾಸವಾಗಿ ಭೇಟೆಯಾಡಬಲ್ಲವು. ಅನಕೊಂಡಾ ಗಳ ಶಕ್ತಿಶಾಲಿ ಸ್ನಾಯುಭರಿತ ಬಲಿಷ್ಠ ದೇಹ ದಿಗ್ಬಂದನಕ್ಕೆ ಸಿಲುಕಿಕೊಂಡಾಗ ಉಸಿರುಗಟ್ಟುವ ಮುನ್ನವೇ ಅನಕೊಂಡಾದ ದೇಹದ ಸಿಕ್ಕ ಸಿಕ್ಕಲೆಲ್ಲ ತಮ್ಮ ಬಲಿಷ್ಠವಾದ ಮುಂದವಡೆ ಹಿಂದವಡೆಯಿಂದ ಕಚ್ಚಿ ಗಾಯಗೊಳಿಸಿ ತಪ್ಪಿಸಿಕೊಳ್ಳುತ್ತವೆ ಈ ಜಾಗ್ವಾರ್ ಗಳು.

ಸರಿಸುಮಾರು 120 ರಿಂದ 130 kg ತೂಗುವ ಜಗ್ವಾರ್ ಗಳು ಹುಲಿ ಸಿಂಹ ಗಳಂತೆಯೇ ಗರ್ಜಿಸಬಲ್ಲವು. ಗರ್ಭದಾರಣೆಯ ಅವದಿ 14 ವಾರಗಳ ಕಾಲ.

ಮೃತ್ಯುಂಜಯ ನ. ರಾ.

Related post