ಕೊಮಾಡೋ ಡ್ರ್ಯಾಗನ್ಸ್
“ಕೊಮಾಡೋ ಡ್ರ್ಯಾಗನ್” ಎನ್ನುವ ಈ ಮೊಸಳೆ ಗಾತ್ರದ ಹಲ್ಲಿಗಳು ಇಂಡೋನೇಷ್ಯಾದ “ಸುಂದಾ”
ದ್ವೀಪಗಳಲ್ಲಿ ಕಂಡುಬರುತ್ತವೆ . ಲಕ್ಷಾಂತರ ವರ್ಷಗಳಿಂದ ಸುಂದಾ ದ್ವೀಪ ಸಮೂಚ್ಚಯಗಳಲ್ಲಿ ವಿಕಸನ ಹೊಂದಿರುವ ಈ ಹಲ್ಲಿಗಳು ಮಾಂಸಾಹಾರಿಗಳು . “ಸುಂದಾ” ದ್ವೀಪ ಸಮುಚ್ಚಯಯದ ಜೊತೆಗೆ ಇನ್ನೂ ಕೆಲವು ನಡುಗಡ್ಡೆಗಳಲ್ಲಿಯೂ ಕಂಡುಬರುತ್ತವೆ .
ಇವು ಪ್ರಾಣಿಗಳ ಹಿಂದೆ ಬೆನ್ನು ಹತ್ತಿ ಓಡಿಹೋಗಿ ಭೇಟೆಯಾಡುವುದಿಲ್ಲ . ಬದಲಾಗಿ ಭೇಟೆ ಪ್ರಾಣಿಗಳು ಇವುಗಳ ಸಮೀಪಕ್ಕೆ ಸುಳಿದಾಗ ತಟಕ್ಕನೇ ಅವುಗಳ ಕಾಲು, ತೊಡೆ ಅಥವಾ ಹೊಟ್ಟೆಯ ಭಾಗಕ್ಕೆ ತಮ್ಮ ಬಲವಾದ ಮೊನಚಾಗಿ ಹರಿತವಾಗಿರುವ ಹಲ್ಲುಗಳಿಂದ ಒಂದೇ ಒಂದು ಸಾರಿ ಕಚ್ಚಿಬಿಡುತ್ತವೆ.
ಇವುಗಳ ಬಾಯಿಯಲ್ಲಿ ಅತ್ಯಂತ ವಿಷಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ಕೂಡಿದ ಲಾವಾರಸ ಇರುತ್ತವೆ. ಹಲ್ಲು ಮತ್ತು ದವಡೆ ಪ್ರದೇಶದ ದ್ರವದಲ್ಲಿ ಬ್ಯಾಕ್ಟಿರಿಯಾ ಮತ್ತು ವೈರಸ್ ಗಳ ಪ್ರಮಾಣ ಅತ್ಯಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ.
ಎಂತಹ ಬೇಟೆಯೇ ಆಗಿರಲಿ ಇವು ಕಚ್ಚಿದ 24 ರಿಂದ 48 ಗಂಟೆಯೊಳಗಾಗಿ ವಿಷದಿಂದ ಸಾವನ್ನಪ್ಪುತ್ತವೆ .
ಕಚ್ಚಿಸಿಕೊಂಡ ಭೇಟೆ ಪ್ರಾಣಿ ಚಲಿಸಿದ ದಾರಿಯ ಜಾಡು ಹಿಡಿದು ನಿಧಾನವಾಗಿ ಸಾಗುವ ಕೊಮೊಡೋ ಡ್ರ್ಯಾಗನ್ ಭೇಟೆಪ್ರಾಣಿ ವಿಷದಿಂದ ನಿಶ್ಯಕ್ತವಾಗಿ ಸಾವಿನ ಹಂತ ತಲುಪಿದಾಗ ಭಕ್ಷಿಸುತ್ತವೆ. ಚಿಕ್ಕ ಪುಟ್ಟ ಪ್ರಾಣಿಗಳಾದರೇ 12 ಗಂಟೆಯೊಳಗಾಗಿ ಸಾಯುತ್ತವೆ . ಕಾಡುಕೋಣದಂತ ದೊಡ್ಡ ಭೇಟೆಗಳಿಗೆ 24 ರಿಂದ 48 ಸಮಯ ಹಿಡಿಯುತ್ತದೆ .
ಈ ಕೊಮೊಡೋ ಡ್ರ್ಯಾಗನ್ ಗಳು ಸಾಮಾನ್ಯವಾಗಿ ಸತ್ತ ಹಾಗು ಕೊಳೆತ ಮಾಂಸವನ್ನ ಇಷ್ಟಪಡುತ್ತವೆ . ಸತ್ತು ಕೊಳೆತಿರುವ ಭೇಟೆ ಪ್ರಾಣಿಗಳ ದೇಹದಲ್ಲಿ ವಿಷಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಇವುಗಳ ಬಾಯಲ್ಲಿನ ಸಲೈವಾ ದ್ರವದ ವಿಷದ ತೀಕ್ಷ್ಣತೆಯನ್ನ ಹೆಚ್ಚಿಸುತ್ತವೆ. ಸಾಮಾನ್ಯವಾಗಿ ಭೇಟೆ ಪ್ರಾಣಿಯನ್ನ ಬಾಯಿಯಿಂದ ಹರಿದು ಭಕ್ಷಿಸುವ ಈ ಡ್ರ್ಯಾಗನ್ ಗಳು ಕೆಲವೊಮ್ಮೆ ಚಿಕ್ಕ ಬೇಟೆಗಳನ್ನು ಇಡಿಯಾಗಿ ನುಂಗುತ್ತವೆ . ಇವು ಸಾಮಾನ್ಯವಾಗಿ ಮನುಷ್ಯರಿಗೆ ಅಪಾಯ ಮಾಡೋಲ್ಲ, ಆದರೆ ಇದುವರೆಗೂ ಅರಣ್ಯ ಸಿಬ್ಬಂದಿಯ 24 ಜನರ ಮೇಲೆ ದಾಳಿ ಮಾಡಿವೆ .ಅದರಲ್ಲಿ 5 ಜನ ಸಾವನ್ನಪ್ಪಿದ್ದಾರೆ, ಆದರಿಂದ ಅಲ್ಲಿ ವಾಸಿಸುವ ಜನ ಮತ್ತು ಗಾರ್ಡಗಳಿಗೆ ವಿಷನಿರೋಧಕ (Anitivenom) ಇಂಜೆಕ್ಷನ್ ಕೊಟ್ಟಿರುತ್ತಾರೆ. ಹೀಗಾಗಿ ಮನುಷ್ಯರ ಸಾವಿನ ಪ್ರಮಾಣ ಕಡಿಮೆಯಾಗಿದೆ.
ಅಳಿವಿನಂಚಿನಲ್ಲಿರುವ ಈ ಡ್ರ್ಯಾಗನ್ ಗಳಿಗೆ ಸುಂದಾ ದ್ವೀಪ ಸಮುಚ್ಚಯಗಳು ಇವುಗಳ ರಕ್ಷಿತ ಪ್ರದೇಶವಾಗಿದೆ.
ಮೃತ್ಯುಂಜಯ