ಇದು ಎಸ್ ಪಿ ಬಿ ಕನಸು
“ಎದೆ ತುಂಬಿ ಹಾಡುವೆನು” ಕಲರ್ಸ್ ಕನ್ನಡ ಚಾನೆಲ್ ನಲ್ಲಿನ ಪ್ರಸಾರವಾದ ಒಂದು ಜನಪ್ರಿಯ ಕನ್ನಡ ಕಾರ್ಯಕ್ರಮ. ಎಸ್ ಪಿ ಬಾಲಸುಬ್ರಮಣ್ಯಂ ಅವರಿಂದಾಗಿ ಈ ಕಾರ್ಯಕ್ರಮ 8 ವರ್ಷ 700 ರಕ್ಕೂ ಹೆಚ್ಚು ವಾರಂತ್ಯ ಗಳು 500 ರಕ್ಕೂ ಹೆಚ್ಚು ಸಂಚಿಕೆ ಗಳು ಮತ್ತು ಸರಿ ಸುಮಾರು 4000 ಗಾಯಕರನ್ನು ಕರ್ನಾಟಕದ ಜನತೆಗೆ ಪರಿಚಯ ಮಾಡಿಸಿದ ಏಕೈಕ ಸಂಗೀತ ಕಾರ್ಯಕ್ರಮ. ಹಾಡುಗಾರಿಕೆ ಯಲ್ಲಿ ಹೊಸ ಪ್ರತಿಬೆ ಗಳನ್ನು ಗುರುತಿಸಿ ಪ್ರೋತಾಹಿಸು ವುದು ಇದರ ಉದ್ದೇಶ.
ಎಸ್ ಪಿ ಬಾಲಸುಬ್ರಮಣ್ಯಂ ಅಥವಾ ಬಾಲು ಅವರು ನಿಸ್ಸಂಶಯವಾಗಿ ಭಾರತದ ಒಬ್ಬ ಶ್ರೇಷ್ಠ ಗಾಯಕ. ಕನ್ನಡ ಸಿನೆಮಾರಂಗಕ್ಕೆ ಅವರ ಕೊಡುಗೇ ಅಪಾರವಾದದ್ದು, ಒಂದೇ ದಿನದಲ್ಲಿ ಅತಿ ಹೆಚ್ಚು ಪ್ಲೇ ಬ್ಯಾಕ್ ಹಾಡುಗಳನ್ನು ಹಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾರೆ , ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಯೊಂದಿಗೆ ನೂರಾರು ರಾಜ್ಯ ಪ್ರಶಸ್ತಿ ಗಳನ್ನು ಪಡೆದಿದ್ದಾರೆ, ಐದು ದಶಕಗಳಲ್ಲಿ ಮೂರು ತಲೆಮಾರಿನ ನಾಯಕರಿಗೆ ಅನಂತ್ ನಾಗ್ , ಶ್ರೀನಾಥ್ , ವಿಷ್ಣುವರ್ಧನ್ , ಅಂಬರೀಷ್ , ಶಿವರಾಜ್ಕುಮಾರ್ , ರವಿಚಂದ್ರನ್ , ದರ್ಶನ್ , ಪುನೀತ್ ರಾಜಕುಮಾರ್ , ಸುದೀಪ್ , ಯಶ್ ಇನ್ನೂ ಎಷ್ಟೋ ನಟರಿಗೆ ಹಾಡಿನ ಮೂಲಕ ಧ್ವನಿಯಾಗಿ ಸರಿ ಸುಮಾರು 12000 ಹಾಡುಗಳನ್ನು ಹಾಡಿದ್ದಾರೆ.
ಕಳೆದ ವಾರಾಂತ್ಯದಿಂದ ಎದೆ ತುಂಬಿ ಹಾಡುವೆನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಗಿದ್ದು ಇದರ ನೇತೃತ್ವವನ್ನು ಹರಿಕೃಷ್ಣ, ರಾಜೇಶ್, ಮತ್ತು ರಘು ದೀಕ್ಷಿತ್ ರವರು ಜ್ಯೂರಿಗಳಾಗುವುದರ ಮೂಲಕ ವಹಿಸಿಕೊಂಡಿದ್ದಾರೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎದುರು ಹಾಡಿದ 60 ಹಳೆಯ ಗಾಯಕರು ಜ್ಯೂರಿ ರೂಪದಲ್ಲಿ ಆಡಿಷನ್ ಭಾಗವಾಗಿದ್ದಾರೆ.ಮೆಘಾ ಆಡಿಷನ್ ನಲ್ಲಿ 30 ಸ್ಪರ್ದಿಗಳು ಭಗವಹಿಸಲಿದ್ದು ಅದರಲ್ಲಿ ಅತ್ಯುತ್ತಮ 16 ಗಾಯಕರು ಶೋಗೆ ಆಯ್ಕೆಯಾಗಿದ್ದಾರೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ತಂಡ ಮೊದಲ ಸಂಚಿಕೆಯಲ್ಲಿ ಎಸ್ ಪಿ ಬಿ ಯವರ ಪುತ್ರ “ಚರಣ್” ರವರನ್ನು ಕರೆಸಿ ಅವರ ಧ್ವನಿಯಲ್ಲಿ ತಂದೆಯ ಹಾಡುಗಳನ್ನು ಹಾಡಿಸಿ ಕಾರ್ಯಕ್ರಮಕ್ಕೆ ರಂಗು ತಂದಿದ್ದಾರೆ. ಈ ಬಾರಿಯ ಕಾರ್ಯಕ್ರಮದ ಸೆಟ್ ಅದ್ದೂರಿಯಾಗಿದ್ದು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಜೊತೆಗೆ ಸ್ಟೇಜ್ ನಲ್ಲಿ ಎಸ್ ಪಿ ಬಿ ಯವರ ಒಂದು ಪುತ್ಥಳಿಯನ್ನು ಸಹ ಮಾಡಿ ಆಕರ್ಷಿಸಿದ್ದಾರೆ.
Best BCAA Supplement – Amazing Bodybuilding + Pre Workout Results – Pure Branched Chain Amino Acids – L-Leucine + Food Grade Formula for Men and Women – USA Made by Nature Bound buy mesterolone bodybuilding build muscle at home workouts ebookಎಸ್ ಪಿ ಚರಣ್ ಮತ್ತು ರಾಜೇಶ್ ಕೃಷ್ಣ ರವರು ಎಸ್ ಪಿ ಬಿ ಅವರ ಹಾಡುಗಳನ್ನು ಹಾಡುವ ಮೂಲಕ ಸಂಚಿಕೆಯನ್ನು ಆರಂಭಿಸಿದರು. ಕರ್ನಾಟಕದ ಮೂಲೆ ಮೂಲೆ ಗಳಿಂದ, ಸಮಾಜದ ಬೇರೆ ಬೇರೆ ವರ್ಗಗಳಿಂದ, ಬೇರೆ ಬೇರೆ ಹಿನ್ನೆಲೆಯಿಂದ, ಪ್ರತಿಭಾನ್ವೇಷಣೆ ಮಾಡಿ 30 ಸ್ಪರ್ದಿಗಳನು ಆಯ್ಕೆ ಮಾಡಲಾಗಿದೆ.
ಮೈಸೂರಿನ ಸಾಗರ್ ಮೊದಲನೇ ಸ್ಪರ್ದಿಯಾಗಿ ಹಾಡಿ ಮೆಡಲ್ ಗೆದ್ದು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ. ಸ್ವಿಗ್ಗಿ ಡೆಲಿವರಿ ಕೆಲಸ ಮಾಡುತ್ತ ಸಂಗೀತ ಅಭ್ಯಾಸ ಮಾಡಿ ಬಂದ ಮಂಗಳೂರಿನ ಸಂದೇಶ್ ತಮ್ಮ ಗಾಯನ ದಿಂದ ಎಲ್ಲರ ಗಮನ ಸೆಳೆದರು. ಗದಗದ ಶೆಟ್ಟಪ ಮಾದರ ಸ್ವಲ್ಪ ವಿಶೇಷ, ಭಜನಾ ಮಂಡಳಿಯಲ್ಲಿ ಇದ್ದು ದೇವಸ್ಥಾನಗಳಲ್ಲಿ ಮತ್ತು ಸಾವಿನ ಮನೆಗಳಲ್ಲಿ ಭಜನೆಗಳನ್ನು ಹಾಡಿ ಸಂಗೀತವನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಇವರ ತಂಡದ ಭಜನೆ ಯನ್ನು ಕೇಳಿ ಎಲ್ಲಾ ತೀರ್ಪುಗಾರರು ಮತ್ತು ವಾದ್ಯಗಾರರು ಸಂತೋಷದಿಂದ ಭಾವುಕರಾದದ್ದು ಅಚ್ಚರಿಯೇನಲ್ಲ, ಒಬ್ಬ ವಾದ್ಯಗಾರರಂತೂ ತಮ್ಮ ಡೋಲಕ್ ಅನ್ನು ತಂಡಕ್ಕೆ ಉಡುಗೊರೆಯನ್ನಾಗಿ ಕೊಟ್ಟು ಬಿಟ್ಟರು. ಧರ್ಮಸ್ಥಳದ ಪ್ರತಿ ಶೆಟ್ಟಿ, ಬೆಂಗಳೂರಿನ ನಾದಿರಾ ಭಾನು , ಕಾರವಾರದ ಪ್ರಜ್ವಲ್ ನಾಯಕ್ ಮತು ಗೋಕಾಕ್ ನ ಕಾಶೀನಾಥ್ ಮೆಡಲ್ ಗೆದ್ದು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಸಂಗೀತ ಪ್ರಿಯರಿಗೆ , ಮಕ್ಕಳಿಂದ ವೃದ್ಧರವರೆಗೂ, ಕರೋನ ಕಾರಣದಿಂದ ಮನೆಯಲ್ಲಿಯೇ ಇದ್ದು ಬೋರಾದ ಮಹಿಳೆಯರಿಗೆ ಮತ್ತು ಇಡೀ ವಾರ ಕೆಲಸ ಮಾಡಿ ಶನಿವಾರ ಮನೋರಂಜನೆ ಹುಡುಕುವ ಉದ್ಯೋಗಿಗಳಿಗೆ ಒಳ್ಳೆಯ ಮನೋರಂಜನೆ ನೀಡುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಸಾಹಿತ್ಯ ಮೈತ್ರಿ ತಂಡ ಹಾರೈಸುತದೆ.
ಸುನಿಲ್ ಗುಂಡೂರಾವ್
ಚಿತ್ರ ಹಾಗೂ ವಿಡಿಯೋ ಕೃಪೆ : ಕಲರ್ಸ್ ಕನ್ನಡ ವಾಹಿನಿ