ಏನಾಗಲಿ ಮುಂದೆ ಸಾಗು ನೀ….
ಮನುಷ್ಯನ ಜೀವನ ಭಗವಂತನ ಅಧ್ಭುತ ಸೃಷ್ಟಿ. ಹುಟ್ಟು ಸಾವು ಎಂಬುದು ಈ ಸೃಷ್ಟಿಯ ನಿಯಮ. ಅವೆರಡರ ನಡುವಲ್ಲಿ ಅನುಭವಿಸುವುದೇ ಜೀವನ. ಜೀವನವೆಂಬುದು ಸುಖ ದುಖಃ ಸಿಹಿ ಕಹಿ ನೋವು ನಲಿವು ಗಳ ಮಿಶ್ರಣ ಆದರೆ ಇಂತಹ ಜೀವನವು ನಾವು ಏಣಿಸಿದಂತೆ ಇರುವುದಿಲ್ಲ, ಅಂದುಕೊಂಡತೇನೂ ಸಾಗುವುದಿಲ್ಲ. ಬದುಕು ಹೂವಿನ ಹಾಸಿಗೆನೂ ಅಲ್ಲ ಹಾಗಂತ ಮುಳ್ಳಿನ ಹಾಸಿಗೆನೂ ಅಲ್ಲ.
ಎಲ್ಲಾರ ಬದುಕು ಒಂದೇ ರೀತಿ ಇರುವುದಿಲ್ಲ ಆದರೆ ಎಲ್ಲಾರ ಬದುಕಲ್ಲಿ ಒಂದಲ್ಲ ಒಂದು ರೀತಿಯಾದ ದುಖಃ ನೋವುಗಳು ಇದ್ದೇ ಇರುತ್ತದೆ. ಮನುಷ್ಯನ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸುವುದು ಸಂಬಂಧಗಳು ಬದುಕು ಚೆನ್ನಾಗಿ ಸಾಗುವಾಗ ಅನೀರಿಕ್ಷಿತವಾಗಿ ತನ್ನವರ ಸಾವು ನೋವುಗಳು ಸಂಭವಿಸಬಹುದು. ಅನ್ಯರ ದುರಪಯೋಗದಿಂದ ಬದುಕಲ್ಲಿ ಹಾನಿ ಆಗಬಹುದು. ನಮ್ಮವರೇ ನಮಗೆ ಮೋಸ ಮಾಡಬಹುದು. ತಪ್ಪು ಮಾಡದೇ ಶಿಕ್ಷೆ ಆಗಬಹುದು ಅವಮಾನ ಹಿಂಸೆಗಳಾಗಬಹುದು. ಇಂತಹ ಸಂದರ್ಭಗಳಲ್ಲಿ ಹೇಗೆ ಬದುಕನ್ನ ಸಂಭಾಳಿಸಿತ್ತವಲ್ಲ ಅದು ತುಂಬಾ ಮುಖ್ಯ. ತುಂಬಾ ಜನರು ತನ್ನವರನ್ನ ಕಳೆದುಕೊಂಡರೇ ಕೊಡಲೇ ಯಾರಿಗೆ ಬೇಕು ಈ ಲೋಕ ಅಂತಾ ಆತ್ಮಹತ್ಯೆಗೆ ಶರಣಾಗುತ್ತಾರೆ. ಕಷ್ಟ ನೋವುಗಳು ಆದರೂ ಕೆರೆ ಬಾವೀನ ನೋಡಿಕೊಳ್ಳುತ್ತಾರೆ ಇಲ್ಲ ಅನ್ಯ ಮಾರ್ಗವನ್ನ ಅರಿಸುತ್ತಾರೆ.
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ
ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಕಲ್ಲು ಸಕ್ಕರೆ ಕೊಳ್ಳಿರೋ…
ಪುರಂದರದಾಸರ ಈ ಕೀರ್ತನೆಯಲ್ಲಿ ಬದುಕಿನ ಬಗ್ಗೆ ಹೇಳುತ್ತಾರೆ, ಕಲ್ಲು ಸಕ್ಕರೆ ತಿಂದವರಿಗೆ ಮಾತ್ರ ರುಚಿ ತಿಳಿಯುವುದಕ್ಕೆ ಸಾಧ್ಯ ಹಾಗೆಯೇ ಬದುಕನ್ನ ಅನುಭವಿಸಿದಾಗ ಮಾತ್ರ ಬದುಕು ಎಂದರೆ ಏನು ಅದರಲ್ಲಿ ಇರುವ ಕಷ್ಟ ಸುಖ ನಾವು ಎದುರಿಸುವ ಸಾವಲುಗಳೇನು ಎಂದು ತಿಳಿಯಲು ಸಾಧ್ಯ.
ಜೀವನವನ್ನು ಯಾವುದೇ ಕಷ್ಟ ಸಾವಾಲುಗಳಿಲ್ಲದೇ ಕಳೆಯುತ್ತೇವೆ ಎಂದರೆ ಅದು ಯಾರಿಗೂ ಸಾಧ್ಯವಿಲ್ಲ. ಬದುಕಲ್ಲಿ ಏನೇ ಆದರೂ ಮುಂದೆ ಸಾಗುತ್ತಿರಬೇಕು ಸಾವಲನ್ನ ನೋವುಗಳನ್ನ ಅವಮಾನಗಳನ್ನ ಎದುರಿಸಲಾರದೇ ಬೆನ್ನು ಹಾಕಿ ಓಡುವುದು ಜೀವನವಲ್ಲ. ಎಲ್ಲಾವೂ ಸಾಧ್ಯವಿದೆ ಛಲಬಿಡದ ತ್ರಿವಿಕ್ರಮನಂತೆ ಬದುಕು ದುಸ್ತರವಾದರೂ ಜೀವನದ ಎಲ್ಲಾ ಕಷ್ಟ ನೋವುಗಳನ್ನ ನುಂಗಿ ಜೀವನದ ಹೋರಾಟಕ್ಕಿಳಿಯಬೇಕು. ಜೀವನ ಬಂದಂತೆ ಸ್ವೀಕರಿಸಬೇಕು ಏನೇ ಸಂಭವಿಸಿದರು ಎಲ್ಲಾವನ್ನೂ ಧೈರ್ಯವಾಗಿ ಎದುರಿಸಬೇಕು ನಮ್ಮ ಜೀವನವನ್ನೂ ಹೂವಿನ ಹಾಸಿಗೆ ತರ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೇ. ಬದುಕು ಸಾವಾಲುಗಳ ಆಗರ ಪ್ರತಿಯೊಂದು ಸಾವಾಲುಗಳೂ ಜಗತ್ತು ಎಂದರೆ ಏನೆಂಬುದನ್ನು ತಿಳಿಸುತ್ತದೆ. ಜೀವನದ ಪ್ರತಿಕ್ಷಣವನ್ನು ಹೊಸದೆಂಬಂತೆ ಬಂದದ್ದೆಲ್ಲ ಬರಲಿ ಎಂದು ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ತಿಳಿದು ನಮಗಿಷ್ಟವಾದುದನ್ನು ಮಾಡುತ್ತ ಸಂತೋಷವಾಗಿ ಬದುಕನ್ನು ಬದುಕುವುದು.
ಬಂದಿದೆಲ್ಲವೂ ಬರಲಿ ಬಾಳಲ್ಲಿ ಆ ಭಗವಂತನ ದಯೆ ಒಂದು ಇರಲಿ ಅಂತಾ ಮುನ್ನಡೆಯುತ್ತಿರಬೇಕು ಆವಾಗಲೇ ಬದುಕು ಸಾರ್ಥಕವಾಗುವುದು.
ರೇಷ್ಮಾ