ಹಿಂದಿನ ಸಂಚಿಕೆಯಿಂದ…
ದಂಪತಿಗಳ ನೆರವಿಗೆ ಬಂದ ಆತ್ಮ ಒಂಟಿಮನೆಯ ದುರಂತ ಕಥೆ ಯನ್ನು ಹೇಳತೊಡಗಿದಾಗ ದಂಪತಿಗಳು ಭಾವಪರಾಶರಾಗುತ್ತಾರೆ.
ಆತ್ಮವು ತನ್ನ ಶಕ್ತಿಯಿಂದ ಆ ಬಳಿಗಳನ್ನೆಲ್ಲ ಬಾಗಿಲಿನಿಂದ ತೆಗೆದು ಎಸೆಯಿತು. ಮುಂದೆ…
ಹೀಗೆ ಮತ್ತೆ ಮತ್ತೆ ಬಾಗಿಲು ಬಡಿದಾಗ ಒಳಗಿನಿಂದ ಬರುವ ಸದ್ದನ್ನು ಪದೇ ಪದೇ ಆಲಿಸಿ ಬೇಜಾರದ ಆತ್ಮವು, ಕೊನೆಗೆ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ಆ ಕೊನೆಯ ಬಾಗಿಲನ್ನು ಜೋರಾಗಿ ತಳ್ಳುತ್ತಲೆ ಆ ಬಾಗಿಲು ಪಕ್ಕದ ಗೋಡೆಗೆ ಬಡಿದುಕೊಂಡು ಏನೋ ಸಿಡಿದ ಹಾಗೆ ಭಾಸವಾಯಿತು. ಅವನು ಬಂದು ಒಳಗೆ ನೋಡುತ್ತಲೇ ಅವನ ಹಳೆಯ ಶತ್ರುಗಳ ಆತ್ಮವು ದಂಪತಿಗಳ ಮಕ್ಕಳ ಕಾವಲಾಗಿದ್ದವು. ಇವನನ್ನು ನೋಡುತ್ತಲೇ ಅಲ್ಲಿಂದ ಮರೆಯಾಗಿ ಅಷ್ಟ ದಿಗ್ಬಂಧನದ ತಮ್ಮ ಸ್ಥಳವನ್ನು ಪ್ರವೇಶಿಸಿ , ಅದೇ ಜಾಗದೊಳಗೆ ಅವಿತುಕೊಂಡವು. ಅವನು ಆ ಮಕ್ಕಳನ್ನು ನೋಡಿದ. ಮೊದಲು ಅಲ್ಲಿದ್ದ ಆತ್ಮಗಳಿಗಿಂತ ಶಕ್ತಿಶಾಲಿಯಾದ ಆತ್ಮ ತಮ್ಮನ್ನು ಕೊಲ್ಲುವನೆಂದು ಭಯಭೀತರಾಗಿ ಮಂಚದ ಹಿಂದೆ ಕಾಣದಂತೆ ಅವಿತುಕೊಳ್ಳುವ ಪ್ರಯತ್ನ ಮಾಡಿದರು. ಇದನ್ನು ಗಮನಿಸಿದ ಅವನು ತಾನು ತಮ್ಮ ರಕ್ಷಣೆಗಾಗಿ ಬಂದವನು, ಅವರ ತಂದೆ ತಾಯಿಗಳು ಅವನ ಸಹಾಯ ಪಡೆದು ಹೊರಗೆ ಇರುವರೆಂದು ಅಲ್ಲಿಂದ ಅವರನ್ನು ಕರೆದೊಯ್ಯುವ ಸಲುವಾಗಿ ಬಂದವನೆಂದು ಹೇಳಿ ಧೈರ್ಯ ತುಂಬಿ ಅಲ್ಲಿಂದ ಹೊರಡಲು ಸೂಚಿಸಿದನು. ಅವನ ಸೂಚನೆಯಂತೆ ಆ ಮಕ್ಕಳು ಅಲ್ಲಿಂದ ನಡೆದರು. ಕೋಣೆಯಿಂದ ಹೊರಗಡೆ ನಡೆಯುತ್ತಿದ್ದಂತೆ ಅಲ್ಲಿದ್ದ ಬಳ್ಳಿಗಳು,ಭೂತದ ಮನೆಯಂತೆ ಕಾಣುತ್ತಿದ್ದ ಭಯಾನಕ ದೃಶ್ಯಗಳನ್ನು ಕಂಡು ಒಂದು ಕಣ್ಮುಚ್ಚಿ ಒಬ್ಬರ ಕೈಯನ್ನು ಮತ್ತೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಮೆಲ್ಲನೆ ಹೆಜ್ಜೆ ಹಾಕುತ್ತ ಹೊರನಡೆದರು. ಆ ಒಂಟಿ ಮನೆಯಿಂದ ಹೊರಬರುತ್ತಿದ್ದಂತೆ ಅಲ್ಲಿ ಹೊರಗಡೆ ಅದಕ್ಕಿಂತಲೂ ಭಯಾನಕ ದೃಶ್ಯಗಳು ಅವರ ಕಣ್ಣಿಗೆ ಬೀಳುತ್ತ ಒಂದು ಕ್ಷಣ ಭಯದಿಂದ ಬೆಚ್ಚಿ ಬಿದ್ದರು.ತಕ್ಷಣ ಸ್ವಲ್ಪ ದೂರದಲ್ಲಿ ನಿಂತಿದ್ದ ತಮ್ಮ ತಂದೆ ತಾಯಿಗಳನ್ನು ನೋಡುತ್ತಲೇ ಖುಷಿಯಿಂದ ಓಡಿ ಹೋಗಿ ಅವರನ್ನು ತಬ್ಬಿ ಕೊಂಡರು. ಮಕ್ಕಳು ಅವರನ್ನು ನೋಡುತ್ತ ಕಣ್ಣೀರಿಡುತ್ತಿದ್ದರೆ ಆ ದಂಪತಿಗಳು ಅವರನ್ನು ಕಂಡು ಪ್ರೀತಿಯಿಂದ ಮುದ್ದಿಸುತ್ತಾ ಅವರ ಕಣ್ಣಲ್ಲೂ ನೀರು ತುಂಬಿ ಕೊಂಡಿತ್ತು. ಇದನ್ನು ನೋಡುತ್ತಾ ಅಲ್ಲಿದ್ದ ಆ ಪುರುಷನ ಆತ್ಮದ ಕಣ್ಣಲ್ಲೂ ನೀರು ತುಂಬಿಕೊಂಡಿತ್ತು, ಅವನಿಗೆ ತನ್ನ ತಂದೆತಾಯಿ, ಅವನ ಹೆಂಡತಿ ಮತ್ತು ಮಕ್ಕಳ ನೆನಪಾಗಿ ಅವನ ಕಂಗಳೂ ಕಣ್ಣೀರಿನಿಂದ ತುಂಬಿ ಹೋಗಿದ್ದವು.
ತಮ್ಮ ಭಾವನೆಗಳನ್ನು ನಿಯಂತ್ರಿಸಿ ಆ ಅಷ್ಟ ದಿಗ್ಬಂಧನದ ಸಮಸ್ಯೆಯಿಂದ ಹೊರಬರಲು ಮುಂದಿನ ದಾರಿ ತೋರುವಂತೆ ಅವನಲ್ಲಿ ಮೊರೆಯಿಟ್ಟರು. ಉಳಿದ ಏಳು ಮನೆಯ ಆತ್ಮಗಳನ್ನು ಒಟ್ಟಾಗಿ ಸೇರಿಸಬೇಕಾದರೆ ಅಲ್ಲೇ ಒಂದು ಜಾಗದಲ್ಲಿ ಶಿವಲಿಂಗದ ಕೆಳಗೆ ಅವಿತಿಟ್ಟಿರುವ ಅಷ್ಟ ಆದಿ ಬಂಧನದ ತಾಮ್ರದ ಶಿಲೆಯನ್ನು ಹುಡುಕಿ, ಅದನ್ನು ಅದರಿಂದ ತೆಗೆದು ಅದಕ್ಕೆ ಪೂಜೆ ಸಲ್ಲಿಸಿದರೆ ಅಲ್ಲಿರುವ ಅಷ್ಟ ಮನೆಗಳ ಶಕ್ತಿಯೂ ಒಂದೇ ಮನೆಯಲ್ಲಿ ಏಕೀಕರಣವಾಗಿ ಅದರಲ್ಲಿರುವ ಎಲ್ಲಾ ಆತ್ಮಗಳು ಒಂದೇ ಮನೆಗೆ ಸೇರಿಕೊಳ್ಳುತ್ತವೆ. ಆಗ ಆ ಆತ್ಮಗಳ ಜೊತೆ ಹೋರಾಡಿ ಅವುಗಳನ್ನು ನಾಶಗೊಳಿಸಿದರೆ ಒಂಟಿ ಮನೆಗೆ ಆ ಆತ್ಮಗಳಿಂದ ಮತ್ತು ತನಗೂ ಈ ದಿಗ್ಬಂಧನದಿಂದ ಮುಕ್ತಿ ಸಿಗುವುದೆಂದು ಹೇಳಿದನು. ಆದರೆ ಆ ದಿಗ್ಬಂಧನದಿಂದ ತಾವು ಹೊರ ಬರದಂತೆ ಅವರ ಮಕ್ಕಳೇ ಆ ತಾಮ್ರದ ಶಿಲೆಯನ್ನು ಹುಡುಕಬೇಕು ಮತ್ತು ಆ ನಾಲ್ಕು ಜನಗಳು ಸೇರಿ ಆ ಪೂಜೆಯನ್ನು ಮಾಡಿ ಆ ಎಲ್ಲ ಮನೆಗಳನ್ನು ಒಗ್ಗೂಡಿಸಿದಾಗ ಮಾತ್ರ ತಾನು ಅವರೊಂದಿಗೆ ಅವುಗಳ ನಾಶಕ್ಕೆ ಸಹಾಯ ಮಾಡಬಹುದೆಂದು ಹೇಳಿದನು.ಅದನ್ನು ಆಲಿಸಿದ ದಂಪತಿಗಳು ತಮ್ಮ ಮಕ್ಕಳಿಗೆ ಆ ಶಿಲೆಯನ್ನು ಹುಡುಕುವಂತೆ ಹೇಳಿದರು. ತಮ್ಮ ತಂದೆ ತಾಯಿಯ ಮಾತಿನಂತೆ ಆ ಮಕ್ಕಳು ಅದನ್ನು ಹುಡುಕಲು ಹೊರಟರು. ಆ ಒಂಟಿ ಮನೆಯ ಹೊರಗಿನ ಪ್ರತಿ ಮೂಲೆ ಮೂಲೆಯಲ್ಲಿ ಹುಡುಕುತ್ತಾ ಹೊರಟರು ಎಷ್ಟು ಹೊತ್ತಾದರೂ ಅದು ಅವರ ಕಣ್ಣಿಗೆ ಕಾಣದೆ ಹೋಯಿತು.ಅವರು ತಮ್ಮ ತಂದೆಯ ಹತ್ತಿರ ಬಂದು ಎಷ್ಟೇ ಹುಡುಕಿದರೂ ಆ ಶಿಲೆ ತಮಗೆ ದೊರೆಯಲಿಲ್ಲ ಎಂದು ಹೇಳಿದರು. ಅದನ್ನು ಆಲಿಸಿದ ಆತ್ಮದ ಆ ಮನುಷ್ಯ ಹೇಳಿದ ಅವರು ಶಿವಲಿಂಗ ಹುಡುಕಿದರೆ ಅದರ ಕೆಳಗೆ ಅದು ತಮಗೆ ದೊರೆಯುವುದು ಎಂದು. ಇದನ್ನು ಅರಿತ ಮಕ್ಕಳು ಶಿವಲಿಂಗ ಹುಡುಕುತ್ತಾ ಹೊರಟರು. ಮನೆಯ ಹಿಂದೆ ಕೆಸರು ಮಣ್ಣು ಪಸರಿಸಿದ ಜಾಗ, ಆ ಮಣ್ಣಿನಲ್ಲಿ ಒಂದು ಕರಿಯ ಕಲ್ಲು ಗೋಚರವಾದಂತೆ ಕಾಣುತ್ತಿತ್ತು. ಅದನ್ನು ನೋಡುತ್ತ ಅದರ ಸುತ್ತಮುತ್ತಲಿನ ಮಣ್ಣನ್ನು ತೆಗೆಯ ತೊಡಗಿದರು. ಆ ಮಣ್ಣು ಜಾರಿದಂತೆಲ್ಲ ಶಿವಲಿಂಗದ ಗೋಚರವಾಯಿತು. ಸಂಪೂರ್ಣವಾಗಿ ಅದರ ಮೇಲಿದ್ದ ಮಣ್ಣನ್ನು ತೆರೆದರು.ಅದನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಆ ಆತ್ಮ ಹೇಳಿದಂತೆ ಆ ಶಿವಲಿಂಗದ ಕೆಳಗೆ ಒಂದು ತಾಯತದಿಂದ ಕಟ್ಟಿದ್ದ ಒಂದು ತಾಮ್ರದ ಶಿಲೆ ಕಂಡಿತು. ಆ ಹುಡುಗ ಶಿವಲಿಂಗವನ್ನು ತನ್ನ ಅಕ್ಕನ ಸಹಾಯದಿಂದ ತನ್ನ ಹೆಗಲ ಮೇಲೆ ಹೊತ್ತು. ಹೀಗೆ ಆ ಶಿವಲಿಂಗದ ಜೊತೆ ಆ ತಾಮ್ರದ ಶಿಲೆಯನ್ನು ಸಹ ಆ ಮಕ್ಕಳು ತನ್ನ ತಂದೆ ತಾಯಿ ಇದ್ದ ಕಡೆಗೆ ತೆಗೆದುಕೊಂಡು ಹೊರಟರು.
ಶಿವಲಿಂಗವನ್ನು ಹುಡುಗ ತನ್ನ ತಾಯಿಯ ಮುಂದೆ ಇರಿಸಿದನು. ಅವನ ಅಕ್ಕ ತನ್ನ ತಂದೆಯ ಕೈಗೆ ತನಗೆ ದೊರಕಿದ ಆ ತಾಮ್ರದ ಶಿಲೆಯನ್ನು ಕೊಟ್ಟಳು. ತಕ್ಷಣ ಆತ್ಮವು ಆ ಶಿಲೆಯನ್ನು ಮೊದಲ ಮನೆಯಲ್ಲಿರಿಸಿ ಪೂಜೆಗೆ ಸಿದ್ದ ಗೊಳಿಸುವಂತೆ ಹೇಳಿದನು. ಅದರ ಜೊತೆ ಶಿವಲಿಂಗವನ್ನು ಸಹ ಅದರ ಜೊತೆ ಇಡಲಾಯಿತು. ಆ ಶಿಲೆಗೆ ಕಟ್ಟಿದ ತಾಯತವನ್ನು ತೆಗೆದು ಆ ತಾಮ್ರದ ಶಿಲೆಯ ಹಾಳೆಯನ್ನು ಬಿಚ್ಚಿದರು.ಅದನ್ನು ಸಂಪೂರ್ಣವಾಗಿ ಬಿಚ್ಚಿ ಶಿವಲಿಂಗದ ಮುಂದೆ ಇಟ್ಟರು. ಆತ್ಮನು ಹೇಳಿದಂತೆ ಮನೆಯೊಳಗೆ ಹೋಗಿ ಪೂಜಾ ಕೊಠಡಿಯಲ್ಲಿದ್ದ ಪೂಜಾ ಸಾಮಗ್ರಿಗಳನ್ನು ತಂದು ಲಿಂಗದ ಮುಂದೆ ಇರಿಸಿದರು. ಆ ದಂಪತಿಗಳು ಪೂಜಾ ಸಾಮಾಗ್ರಿಗಳನ್ನು ಬಳಸಿ ಪೂಜೆಗೆ ಸಿದ್ಧಗೊಳಿಸಿದರು. ಮಣ್ಣು ಮೆಟ್ಟಿದ ಆ ತಾಮ್ರದ ಶಿಲೆಯ ಹಾಳೆ ಮತ್ತು ಶಿವಲಿಂಗವನ್ನು ತೊಳೆಯಲು ಮಕ್ಕಳಿಗೆ ನೀರು ತರುವಂತೆ ಸೂಚಿಸಿ ನೀರನ್ನು ಪಡೆದರು. ಮಕ್ಕಳು ತಂದ ಆ ನೀರಿನಿಂದ ತಾಮ್ರದ ಶಿಲೆಯ ಹಾಳೆಯನ್ನು ತೊಳೆಯುತ್ತಲೆ ಅದರಲ್ಲಿ ಸಣ್ಣ ಸಣ್ಣ ಆತ್ಮಗಳ ಚಿತ್ರದೊಂದಿಗೆ ಕೆಲ ಶ್ಲೋಕಗಳನ್ನು ಬರೆಯುವುದು ತೋರುತ್ತಿತ್ತು. ಅದನ್ನು ಬದಿಗಿರಿಸಿ ಶಿವಲಿಂಗಕ್ಕೆ ಹತ್ತಿದ್ದ ಮಣ್ಣನ್ನು ಸಹ ಸಂಪೂರ್ಣವಾಗಿ ತೊಳೆದರು. ನಂತರ ಶಿವಲಿಂಗಕ್ಕೆ ಮತ್ತು ಶಿಲೆಯ ಹಾಳೆಗೆ ಅರಿಶಿನ, ಕುಂಕುಮ ಹಚ್ಚಿ ಮುಗಿಸಿದರು. ಮುಂದೆ ಆ ಆತ್ಮನನ್ನು ಏನು ಮಾಡುವುದೆಂದು ಕೇಳಿದಾಗ; ಆ ನಾಲ್ಕು ಜನರು ಮೊದಲನೆಯ ಮನೆಯಲ್ಲಿ ಕೂತು ತಾಮ್ರದ ಶಿಲೆಗೆ ನಮಸ್ಕರಿಸಿ ತಾನು ಹೇಳಿ ಕೊಡುವ ಮಂತ್ರ ಪಠಿಸುತ್ತಾ ಪ್ರಾರ್ಥನೆ ಮಾಡಿದಾಗ ಉಳಿದ ಏಳು ಮನೆಗಳು ಒಗ್ಗೂಡುವುದಾಗಿ ಹೇಳಿದನು. ಆಗ ಒಂದು ಭಾಗದಲ್ಲಿ ತಾವು , ಇನ್ನೊಂದು ಭಾಗದಲ್ಲಿ ದುಷ್ಟ ಆತ್ಮ ಶಕ್ತಿಗಳು ಕಾಣಿಸಿಕೊಂಡು ಅದರೊಡನೆ ನಮ್ಮ ಸೇನಾಸಾಟವೆಂದು ವಿವರಿಸಿದ. ಇದನ್ನು ಕೇಳಿ ಧೈರ್ಯದಿಂದ ಆ ನಾಲ್ಕು ಜನ ಕಣ್ಮುಚ್ಚಿಕೊಂಡು ತಾಮ್ರದ ಶಿಲೆಯ ನಮಸ್ಕರಿಸಿ ಮಂತ್ರ ಪಠಿಸುತ್ತಾ ಪ್ರಾರ್ಥನೆ ಪ್ರಾರಂಭಿಸಿದರು. ಸ್ವಲ್ಪ ಸಮಯದಲ್ಲೇ ಮಂತ್ರ ಪಠಣ ಕೇಳುತ್ತಿದ್ದಂತೆ ತಾಮ್ರ ಶಿಲಾ ಹಾಳೆಯಿಂದ ಕಿರಣಗಳು ಸೂಸಿ ಅದು ಮೊದಲನೇ ಮನೆಯ ಜೊತೆ ಉಳಿದ ಏಳು ಮನೆಯ ಮೇಲೆ ಬಿದ್ದಿತು. ನಂತರ ಕಿರಣಗಳು ಜನರಿದ್ದ ಮೊದಲನೇ ಮನೆ ಹೊರತು ಪಡಿಸಿ ಖಾಲಿಯಿದ್ದ ಉಳಿದ ಏಳು ಮನೆಗಳನ್ನು ಒಂದೆಡೆ ಸರಿಸುತ್ತಾ, ಸೇರಿಸುತ್ತಾ ಸಾಗಿದವು. ಹೀಗೆ ಸರಿದು ಆ ಏಳು ಮನೆಗಳು ಒಂದೇ ಮನೆಯಾಗಿ ಮಾರ್ಪಟ್ಟು ಅದರಿಂದ ತಕ್ಷಣವೇ ಕೆಲ ಬಿಳಿಯ ಕಿರಣಗಳು ಕಾಣಿಸಿಕೊಂಡು ಅದರಿಂದ ವಿಚಿತ್ರವಾದ ಧ್ವನಿಗಳು ಕೇಳತೊಡಗಿದವು.ಅದನ್ನೆಲ್ಲ ಕೇಳುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದ ನಾಲ್ಕು ಜನ ಕಣ್ಬಿಟ್ಟು ನೋಡಿದಾಗ ಎಲ್ಲಾ ಮನೆಗಳು ಒಂದಾಗಿ ಅದರಲ್ಲಿನ ಆತ್ಮಗಳ ಆರ್ಭಟ ಅವರಿಗೆ ಕೇಳತೊಡಗಿತ್ತು.ಆದರೆ ಅದರಲ್ಲಿ ಯಾವುದೇ ಆಕಾರವು ಕಾಣುತ್ತಿರಲಿಲ್ಲ.
ಅ