ಕಣ್ಣೋಟದ ಸವಿಸತ್ಯ

ಕಣ್ಣೋಟದ ಸವಿಸತ್ಯ

ನೋಡುವಾ ನೋಟವು ತಿಳಿಯಾಗಿರೆ
ಮನಸಲಿ ಒಂದು ಸಂಚಲನ !
ನೋಟದಿ ಕುಹಕವೇ ತುಂಬಿರೆ
ಅಂತರಂಗದಲಿ ನಿತ್ಯ ಕದನ !!

ಪ್ರಕೃತಿಯಲಿ ಕಾಣುವಾ ಸೊಬಗು
ಕೋಟಿ ಕೊಟ್ಟರೂ ನಿಲುಕದು!
ಕಂಗಳಲಿ ಕಾಡುವ ಮೆರುಗು
ಮನದಲಿ ಸಂತಸವಿರೆ ದೊರೆವುದು !!

ದೂರದ ಬೆಟ್ಟವು ನುಣ್ಣಗೆಂಬ ನುಡಿ
ಲೋಕದಿ ಆಗಿರಲು ಕಹಿಸತ್ಯ!
ಕಣ್ಣಂಚಲಿ ತುಂಬಿದ ನೋವು
ಕಣ್ಣೀರಾಗಿ ಹರಿದಾಗಲೇ ಬಾಳು ಸವಿಪಥ್ಯ!!

ಹಸಿರ ಕಾನನವು ಬೆಸೆದಂತೆ
ಜನಜೀವನದಲಿ ಒಂದು ನಂಟು!
ಹೆಣ್ಣಿನ ಕಂಗಳಲಡಗಿದ ಭಾವವು
ಎಂದೂ ಬಿಡಿಸಲಾರದ ಬ್ರಹ್ಮಗಂಟು!!

ಸುಮನಾ ರಮಾನಂದ
ಕೊಯಮತ್ತೂರು

Related post