ಕುಮಾರಿ ಸೃಷ್ಟಿ ಸ್ವಾಮಿ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿಗೆ ತನ್ನ ಪ್ರತಿಭೆಯಿಂದ ಕಲಾದೇವಿಯನ್ನು ವಶಪಡಿಸಿಕೊಂಡಿದ್ದಾಳೆ.
ಗುರುಸಿದ್ದಯ್ಯ ದಂಪತಿಗಳು ಪುತ್ರಿಯ ಕಲಾ ಪ್ರತಿಭೆಗೆ ಪ್ರೀತಿಯೆಂಬ ಖನಿಜಯುಕ್ತ ನೀರನ್ನು ಪೋಷಿಸಿ ಬೆಳೆಸುತಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟದ ಮಂಗರೂಳೆ ಪ್ರಶಾಲೆಯಲ್ಲಿ ಓದುತ್ತಿರುವ ಕುಮಾರಿ ಸೃಷ್ಟಿ ಬರೆದ ಅಮಿತಾಭ್ ಬಚ್ಚನ್ ಚಿತ್ರವನ್ನು ಸ್ವತಃ ಅಮಿತಾಭ್ ಮೆಚ್ಚಿ ಅಭಿನಂದಿಸಿದ್ದಾರೆ ಹಾಗೆಯೇ ಸುಧಾ ಮೂರ್ತಿಯವರು ಸಹ ಚಿತ್ರಗಳನ್ನು ಕಂಡು ಸಂತಸದಿಂದ ತಮ್ಮ ವೈಯಕ್ತಿಕ ಮೆಚ್ಚುಗೆಯನ್ನು ಹೇಳಿ ಹಾರೈಸಿದ್ದಾರೆ.
ಇಂತಃ ಕಲಾ ಚಿಗುರೂಗಳನ್ನು ಗುರುತಿಸಿ ಪೋಷಿಸಿದರೆ ಮುಂದೆ ಫಲ ಬಿಡುವ ಹೆಮ್ಮರವಾಗಿ ತನ್ನ ಅಸ್ಮಿತೆಯನ್ನು ಹೊಂದುತ್ತದೆ. ಆ ನಿಟ್ಟಿನಲ್ಲಿ ಸಾಹಿತ್ಯಮೈತ್ರಿ ಪತ್ರಿಕೆಯು ಕುಮಾರಿ ಸೃಷ್ಟಿ ಸ್ವಾಮಿಯ ಪ್ರತಿಭೆಯನ್ನು ಅಭಿನಂದನೆಗಳೊಂದಿಗೆ ಹಾರೈಸುತ್ತದೆ.
ಸಾಹಿತ್ಯಮೈತ್ರಿ ತಂಡ
4 Comments
Super srushti👌🙏👍
Superb Shrusti Sister 👌👌👍
Fantastic work!
Tq