ಗಮನ ನಿಮ್ಮ ಮೇಲೆ ಕೇಂದ್ರೀಕರಿಸಿ
ನಾವು ಯಾವಾಗಲು ಬೇರೆಯವರು ನಮ್ಮ ಬಗ್ಗೆ ಒಳ್ಳೆಯ ಯೋಚನೆ ಮಾಡಲಿ, ನಮ್ಮ ಬಗ್ಗೆ ಎಲ್ಲಾರೂ ಹೊಗಳಲಿ, ನಾವು ತುಂಬಾ ಒಳ್ಳೆಯವರು ಎಂದುಕೊಳ್ಳಲಿ ಎಂದು ನಿರೀಕ್ಷಿಸುತ್ತೇವೆ. ಈ ನಿರೀಕ್ಷೆ ಖಂಡಿತಾ ಸಾಧ್ಯವಿಲ್ಲ. ನಾವು ಏನೇ ಮಾಡಿದರು ಯಾರು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೋ ಯಾವಾಗಲು ಅವರು ಜನರೇ ಆಗಿರುತ್ತಾರೆ.
ನೀವು ಶಿವ ಹಾಗು ಪಾರ್ವತಿಯ ಈ ಕಥೆ ಕೇಳಿರಬಹುದು, ಒಮ್ಮೆ ಶಿವ ಪಾರ್ವತಿಯೊಂದಿಗೆ, “ನಡೆ, ನಾವು ಮೃತ್ಯುಲೋಕಕ್ಕೆ ವಾಯುವಿಹಾರಕ್ಕೆ ಹೋಗೋಣ ಎನ್ನುತ್ತಾರೆ. ಪಾರ್ವತಿ ಸರಿ ಸ್ವಾಮಿ, ನಿಮ್ಮ ಆಶಯದಂತೆ ಆಗಲಿ ಎಂದು ನಂದಿಯನ್ನು ಕರೆದುಕೊಂಡು ಹೊರಡುತ್ತಾರೆ. ಅವರು ಬಂದು ಒಂದು ಗ್ರಾಮದಲ್ಲಿ ಬಂದು ಇಳಿಯುತ್ತಾರೆ. ಗ್ರಾಮದ ಜನರು ಇವರನ್ನು ಯಾರೆಂದು ಗುರುತಿಸುವುದಿಲ್ಲ. ಮೂರೂ ಜನರು ತಮ್ಮ ವಾಯುವಿಹಾರವನ್ನು ಜೊತೆಗೂಡಿ ಮುಂದುವರಿಸುತ್ತಾರೆ. ಒಂದು ಕಡೆ ಜನರು ಒಟ್ಟಾಗಿ, “ನೋಡಿದಿರಾ ಅವರ ಬುದ್ದಿವಂತಿಕೆಯನ್ನು ಅವರು ಗೂಳಿಯ ಮೇಲೆ ಕುಳಿತು ಹೋಗುವ ಬದಲು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ. ಏನು ಹೇಳುವುದು ಇವರುಗಳ ಮೂರ್ಖತನಕ್ಕೆ ಎಂದು ಇವರ ಬಗ್ಗೆ ಆಡಿಕೊಳ್ಳುತ್ತಾರೆ.
ಆಗ ಶಿವ ಪಾರ್ವತಿಗೆ ಹೇಳುತ್ತಾರೆ ಕೇಳಿದೆಯಾ ಪಾರ್ವತಿ ಜನರು ಮಾತಾಡಿಕೊಳ್ಳುವ ಬಗ್ಗೆ, ಒಂದು ಕೆಲಸ ಮಾಡುವ ನಾವಿಬ್ಬರು ಗೂಳಿಯ ಮೇಲೆ ಕುಳಿತು ಹೋಗುವ ಎಂದು ಹೇಳಿ ಗೂಳಿಯ ಮೇಲೆ ಕುಳಿತು ಹೋಗುತ್ತಿರುವಾಗ ಗುಂಪೊಂದು ಕಡೆ ಕುಳಿತು ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತುಕೊಂಡಿದ್ದರು. ಜನರ ಗುಂಪು ಇವರುಗಳನ್ನು ನೋಡಿ, “ಅಯ್ಯೋ ದೇವಾ ಎಂತಹ ಕ್ರೂರ ಮನಸ್ಥಿತಿ ಇವರದ್ದು ಇಬ್ಬರು ಆ ಮೂಕ ಪ್ರಾಣಿಯ ಮೇಲೆ ಕುಳಿತು ಹೋಗುತ್ತಿದ್ದಾರಲ್ಲ ಅವರಿಗೆ ಆ ಪ್ರಾಣಿಯ ಬಗ್ಗೆ ಒಂದು ಚೂರು ದಯೆ ಹಾಗೂ ಕರುಣೆಯೇ ಇಲ್ಲವೇನೋ” ಎಂದು ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಶಿವ ಪಾರ್ವತಿಗೆ, ಪಾರ್ವತೀ ಕೇಳಿಸಿಕೊಂಡೆಯ ಜನರ ಮಾತು ಒಂದು ಕೆಲಸ ಮಾಡುವ ನೀನು ಕೆಳಗೆ ಇಳಿದು ನಡೆದುಕೊಂಡು ಬಾ ನಾನೊಬ್ಬ ಇದರ ಮೇಲೆಯೇ ಬರುತ್ತೇನೆ ಎಂದು ಹೇಳುತ್ತಾರೆ. ಪಾರ್ವತೀ ಸರಿ ನಿಮ್ಮಿಷ್ಟ ಎಂದು ಹೇಳುತ್ತಾರೆ. ಹಾಗೆಯೆ ಅವರ ನಡಿಗೆಯು ಒಂದು ಜನರ ಗುಂಪಿನ ಮುಂದೆ ಹಾದು ಹೋಗುತ್ತಿದ್ದಾಗ, ಅದರಲ್ಲಿ ಕೆಲವರು, ಪತಿ ಗೂಳಿಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರೆ, ಮತ್ತು ಸೂಕ್ಷ್ಮವಾದಂತಹ ಸತಿ ಬರಿ ಕಾಲಿನಲ್ಲಿ ನಡಿಗೆ? ಏನಿದು ಆಶ್ಚ್ಯರ್ಯ? ಮಹಿಳೆಯರು ತಮ್ಮ ಸಮಾನ ಹಕ್ಕಿಗಾಗಿ ಮುಂದೆ ಬಂಡಾಯ ಪತಾಕೆ ಹಾರಿಸುವುದರಲ್ಲಿ ಆಶ್ಚ್ಯರ್ಯವೇನಿಲ್ಲ. ಎಂದು ಮಾತಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿದ ಶಿವ ಪಾರ್ವತಿಗೆ ಕೇಳಿದೆಯಾ ಅವರ ಚರ್ಚೆಯನ್ನು. ಅದಕ್ಕೆ ಪಾರ್ವತಿ ದೇವಿ ಕೇಳಿಸಿಕೊಂಡೆ ಸ್ವಾಮಿ, ನಿಮಗೆ ಕೈಲಾಸದಲ್ಲಿ ಕುಳಿತುಕೊಂಡಿದ್ದರಿಂದ ಇದರ ಬಗ್ಗೆ ನಿಮಗೆ ಅರಿವಿಲ್ಲ. ಆದರೆ, ಈ ಲೋಕದಲ್ಲಿ ಮಹಿಳೆಯರು ಮೊದಲ ಪ್ರಾಧಾನ್ಯತೆ ಪಡೆಯುತ್ತಾರೆ ಎಂದು ಪಾರ್ವತಿ ಶಿವನಿಗೆ ಹೇಳುತ್ತಾರೆ.
ಅದಕ್ಕೆ ಶಿವ ಸರಿ ಹಾಗಾದ್ರೆ ನೀನು ಗೂಳಿಯ ಮೇಲೆ ಕುಳಿತುಕೋ ನಾನು ನಡೆದು ಬರುತ್ತೇನೆ ಎಂದು ಹೇಳುತ್ತಾರೆ. ಹಾಗೆ ಮುಂದೆ ಹೋಗುತ್ತಿದ್ದಾಗ ಇನ್ನೊಂದು ಜನರ ಗುಂಪು ಇದನ್ನು ನೋಡಿ ಇದು ಕಲಿಯುಗ ನೋಡು ಗಂಡ ನಡೆದುಕೊಂಡು ಹೆಂಡತಿ ಗೂಳಿಯ ಮೇಲೆ ಹೋಗುತ್ತಿದ್ದಾರೆ ಎನ್ನುತ್ತಾರೆ. ಇದನ್ನು ನೋಡಿದ ಶಿವ ಸರಿ ಬಿಡು ಪಾರ್ವತಿ ನೀನು ನಾನು ನಡೆದುಕೊಂಡು ಹೋಗೋಣ. ನಂದಿಯನ್ನು ನನ್ನ ತ್ರಿಶೂಲಕ್ಕೆ ಕಟ್ಟಿ ಅದನ್ನು ಎತ್ತಿಕೊಂಡು ಹೋಗೋಣ ಎನ್ನುತ್ತಾರೆ. ಹಾಗೇನೇ ಗೂಳಿಯನ್ನು ಹೊತ್ತೊಕೊಂಡು ಹೋಗುತ್ತಿರುವಾಗ ಆ ಗ್ರಾಮದ ಪಂಚಾಯತಿ ಕಟ್ಟೆಯ ಹತ್ತಿರ ಬರುತ್ತಾರೆ ಅಲ್ಲಿನ ಜನರು ಇವರನ್ನು ನೋಡಿ ಇವರುಗಳು ಅರ್ಧ ಹುಚ್ಚರಲ್ಲ ಪೂರ್ತಿ ಹುಚ್ಚರು ಎಂದು ಇವರನ್ನು ಗೇಲಿ ಮಾಡುತ್ತಾರೆ.
ಆಗ ಶಿವ ಪಾರ್ವತಿಯನ್ನು ಉದ್ದೇಶಿಶಿ ಹೇಳುತ್ತಾರೆ, ನಿನ್ನನು ಇದಕ್ಕಾಗಿಯೇ ನಾನು ಇಲ್ಲಿಗೆ ಕರೆದುಕೊಂಡು ಬಂದೆ, ನಾವು ಏನೇ ಮಾಡಿದರು ಜನರು ಅದರಲ್ಲಿ ಏನಾದರೊಂದು ತಪ್ಪುಗಳನ್ನು ಹುಡುಕುತ್ತಾರೆ. ಜಗತ್ತಿನಲ್ಲಿ ಎರಡೇ ಪಕ್ಷಗಳು ಅದು ಒಳ್ಳೇದು ಮತ್ತು ಕೆಟ್ಟದ್ದು. ನೀನು ಕೆಟ್ಟ ಕಾರ್ಯ ಮಾಡಿದರೆ ಒಳ್ಳೆಯ ಜನರು ಅದನ್ನು ಕೆಟ್ಟದು ಎನ್ನುತ್ತಾರೆ. ಒಂದು ವೇಳೆ ನೀನು ಒಳ್ಳೆಯ ಕಾರ್ಯ ಮಾಡಿದಾಗ ಕೆಟ್ಟ ಜನರು ಅದನ್ನು ಕೆಟ್ಟದ್ದು ಎಂದು ಹೇಳುತ್ತಾರೆ.
ನಾವು ಏನೇ ಮಾಡಿದರು ಜನರು ಆಕ್ಷೇಪ ಮಾಡುತ್ತಲೇ ಇರುತ್ತಾರೆ. ನೀವು ಯಾವುದೇ ಒಂದು ಸಭೆಯಲ್ಲಿ ಮಾತಾಡಲು ಬರದೇ ಸುಮ್ಮನೆ ಕುಳಿತಿದ್ದರೆ, ನಿಮ್ಮನ್ನು ದಡ್ಡ ಎನ್ನುತ್ತಾರೆ. ಒಂದುವೇಳೆ ಜಾಸ್ತಿ ಮಾತಾಡುತ್ತಿದ್ದರೆ ಅವನು ಯಾವಾಗಲು ವಟಗುಟ್ಟುತ್ತ ಇರುತ್ತಾನೆ. ಅವನಿಂದ ಸ್ವಲ್ಪ ದೂರ ಇರಬೇಕು. ಇಲ್ಲ ಅಂದ್ರೆ ತಲೆನೋವು ಬರಿಸುತ್ತಾನೆ ಎನ್ನುತ್ತಾರೆ. ಇದಕ್ಕೆ ಬೇರೆ ಯಾವುದೇ ಪದಗಳಿಲ್ಲ. ನಾವು ಏನೇ ಮಾಡಿದರೂ ಜನರು ಆಕ್ಷೇಪಣೆ ಮಾಡುತ್ತಲೇ ಇರುತ್ತಾರೆ. ಹಾಗಿದ್ದ ಮೇಲೆ ನಮ್ಮನ್ನು ಒಳ್ಳೆಯವರು ಎಂದು ಕರೆಯಲು ನಮ್ಮ ಶಕ್ತಿಯನ್ನು ಯಾಕೆ ವ್ಯರ್ಥಮಾಡಬೇಕು. ತ್ರೇತಾಯುಗದಲ್ಲಿ ಅಂತಹ ಸೀತೆಯ ಮೇಲೆ ಬಂದಂತಹ ಆರೋಪಕ್ಕೆ ಆಕೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಯಿತು. ಇದು ಕಲಿಯುಗ ಹಾಗಿದ್ದ ಮೇಲೆ ನಾವು ಹೇಗೆ ತಾನೇ ಎಲ್ಲರು ನಮಗೆ ಒಳ್ಳೆಯದೇ ಬಯಸುತ್ತಾರೆ ಎಂದು ಯೋಚಿಸಲು ಸಾಧ್ಯ. ಅದು ಅಸಾಧ್ಯವಾದ ಮಾತು. ಹಾಗಾಗಿ ನಾವು ನಾವಾಗಿ ಇರಬೇಕು ಯಾರನ್ನು ಮೆಚ್ಚಿಸುವ ಕೆಲಸ ಮಾಡಬೇಕಾಗಿಲ್ಲ. ನಮ್ಮ ಮನಸಾಕ್ಷಿಗೆ ಯಾವುದು ಸರಿ ಎಂದು ಕಂಡು ಬರುವುದೋ ಅದನ್ನು ನಾವು ಮಾಡಬೇಕು. ನಾವು ನಮ್ಮ ಮನಸಾಕ್ಷಿಗೆ ಎಂದು ಮೋಸ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮೋಸ ಮಾಡಿದರೆ ಸಾಯುವ ವರೆಗೂ ಪ್ರತಿಕ್ಷಣ ನಮ್ಮನ್ನು ಕಾಡುತ್ತಲೇ ಇರುತ್ತದೆ. ಅದಕ್ಕೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾರೆ ನಮ್ಮ ಜೀವನದ ಸಂಗಾತಿ ಬೇರೆ ಯಾರು ಅಲ್ಲ ನಮ್ಮ ದೇಹವೇ ನಮ್ಮ ಸಂಗಾತಿ ಎಂದು. ನಾವು ನಾವಾಗಿ ಬದುಕೋಣ. ನಮ್ಮ ಬಗ್ಗೆ ಬೇರೆಯವರು ಏನೆನ್ನುತ್ತಾರೋ ಎಂಬ ಕಣ್ಣಿಗೆ ಕಟ್ಟಿರುವ ಆ ಪೊರೆಯನ್ನು ಕಿತ್ತು ಹಾಕಿ ಜೀವನವನ್ನು ಸಂತೋಷವಾಗಿಸೋಣ.
ಸೌಮ್ಯ ನಾರಾಯಣ್
1 Comment
ನಿಜ , supper