ಗಾನ ಕೋಗಿಲೆಗೆ ನಮನ

ಗಾನ ಕೋಗಿಲೆಗೆ ನಮನ

ಕೋಗಿಲೆ ಹಾಡಿದೆ ಕೇಳಿದೆಯಾ?
(ಹಿರಿಯ ಗಾಯಕಿ ಎಸ್. ಜಾನಕಿ
ಅವರಿಗೆ ನುಡಿ ನಮನ)

‘ಗಗನವು ಎಲ್ಲೋ, ಭೂಮಿಯು ಎಲ್ಲೋ’
ಹೊತ್ತ ಹರಕೆಯ ಫಲದ ‘ಜೀವ ಹೂವಾಗಿದೆ’
‘ನನ್ನಾಸೆಯ ಹೂವೆ, ಬೆಳದಿಂಗಳಾ ಚೆಲುವೆ’
‘ಹೂವಿಂದ ಹೂವಿಗೆ ಹಾರುವ ದುಂಬಿ’

‘ಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ’
‘ಮೂಡಲ ಮನೆಯ ಮುತ್ತಿನ ನೀರಿನ’ ಧಾರೆ
‘ಚೆಲುವೆಯೇ ನಿಮ್ಮ ನೋಡಲು’ ಬಯಸೆ
‘ಬಂದೆಯಾ ಬಾಳಿನ ಬೆಳಕಾಗಿ’ ‘ಆಲಾರೆ’

‘ನಗುವ ನಯನ’ದ ‘ಚಿನ್ನದ ಮಲ್ಲಿಗೆ ಹೂವೆ’
ಹದಿನೇಳು ಭಾಷೆಗಳ ಸುಂದರ ‘ಬೆಸುಗೆ ಬೆಸುಗೆ’
‘ನೀವು ಮೀಟಿದ ನೆನಪೆಲ್ಲವೂ’ ‘ಒಮ್ಮೆ ನಿಮ್ಮನ್ನು’
ಕರೆಯೆ, ‘ಕೋಗಿಲೆ ಹಾಡಿದೆ ಕೇಳಿದೆಯಾ’

‘ಎಲ್ಲೆಲ್ಲಿ ನೋಡಲಿ.. ನಿಮ್ಮನ್ನೇ ಕಾಣುವೆ..’
‘ಬಾನಲ್ಲೂ ನೀವೇ, ಭುವಿಯಲ್ಲೂ ನೀವೇ’
ಕೀರ್ತಿ ‘ದೋಣಿ ಸಾಗಲಿ ಮುಂದೆ ಹೋಗಲಿ’
‘ಅಂತಿಂಥ ಹೆಣ್ಣು ನೀವಲ್ಲ,’ ‘ಆಕಾಶ ದೀಪವು’

‘ನೀವು ಎಲ್ಲೋ ನಾ ಅಲ್ಲೇ, ಈ ಜೀವ ನಿಮ್ಮಲ್ಲೇ’
‘ನಂಬಿದೆ ನಿಮ್ಮ’ ‘ತನು ನಿಮ್ಮದು’ ಮನ ನಿಮ್ಮದು
‘ನಿಮ್ಮ ದನಿ ಇರಲು ಜೊತೆಯಲಿ’ ಇನ್ನೇನು?
‘ನಗು ಎಂದಿದೆ ಮಂಜಿನಾ ಬಿಂದು’ ಸಾಧ್ಯವೇ?

ತನು ಮನ ‘ಜೊತೆ ಜೊತೆಯಲಿ’
‘ಕರೆದರೂ… ಕೇಳದೆ?

ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259

Related post