ಗುರುಸ್ಮರಣೆ
ಬಾಲ ಭಾಸ್ಕರನ
ಹೊಳೆವ ಹೊಂಗಿರಣ
ಗುರು ಚರಣಕ್ಕೆರಗಲಿ!
ಮಂದ ಮಾರುತದ
ಇಂಪು ಗಾಯನವು
ಗುರು ಗೀತೆ ಭಜಿಸಲಿ!
ಇಳೆಗಿಳಿವ ಮಳೆಯ
ತುಂತುರೆಲ್ಲವೂ ತಾ
ಗುರುವಿಗಭಿಷೇಕ ಮಾಡಲಿ!
ಧರಣಿ ಅರಳಿಸುವ
ಘಮದ ಸುಮವೆಲ್ಲವೂ
ಗುರುವಿನ ಮುಡಿಯೇರಲಿ!
ಅನು ದಿನ ಅನು ಕ್ಷಣ
ನನ್ನ ಮನದ ತುಂಬೆಲ್ಲಾ
ಗುರುನಾಮ ಅನುರಣಿಸಲಿ!!
ಶ್ರೀವಲ್ಲಿ ಮಂಜುನಾಥ