ಗರಿಕೆಯ ಚಿಗುರು
ನಿನ್ನ ಗೋರಿಯ
ಮೇಲಿನ
ಚೆಲುವ ಹೆಚ್ಚಿಸಿದೆ
ನೋಡು ನಿನ್ನಷ್ಟಲ್ಲದಿದ್ದರೂ..
ಗರಿಕೆಯಷ್ಟೇ ಚೆಲುವಿದೆ..!!
ಪೂರ್ಣ ಬೆತ್ತಲಾಗಿ ಮಲಗಿರುವೆ ನೀನಲ್ಲಿ
ನಿನ್ನ ಗೋರಿ ಮುಚ್ಚಲು ಒಂದೊಂದು ಗರಿಕೆಯೂ ಪೈಪೋಟಿಗೆ
ನಿಂತಿವೆ ಇಲ್ಲಿ..!!
ನಾ ನಿನ್ನ ಪ್ರೀತಿಸಿದೆ
ನಾ ನಿನ್ನ ಪ್ರೇಮಿಯಾಗಿದ್ದಾಕ್ಕಾಗಿ
ಈ ಗೋರಿ ನನಗಿಂತ
ಹೆಚ್ಚಾಗೇ ಪ್ರೀತಿಸುತ್ತಿದೆಯಾ ನಿನ್ನ ಪ್ರೇಮಿಯಾಗಿ ಪಡೆದುದ್ದಾಕ್ಕಾಗಿ…??
ನೀನಾಗಲೇ ಹೋಗಿರುವೆ ಬಂಧಿಸಲ್ಪಟ್ಟ
ಬಂಧನದಿಂದ
ನಾ ಇನ್ನೂ ಬಂದೀಖಾನೆಯಲ್ಲೇ
ಬಂಧಿಯಾಗಿರುವೆ
ಬರದಿರುವ
ಪ್ರವಾಹವ ಮರೆತು…!!
ಶಿವು ಅಣ್ಣಿಗೇರಿ