ಚಿತ್ತರಂಗ – ತೆರೆಮರೆಯ ಅಂತರಂಗ

ಚಿತ್ತರಂಗ – ತೆರೆಮರೆಯ ಅಂತರಂಗ

ಪುಸ್ತಕದ ಹೆಸರು: ಚಿತ್ತರಂಗ
ಪ್ರಕಾರ: ಕಾದಂಬರಿ
ಲೇಖಕರು: ಆಶಾ ರಘು
ಮುದ್ರಣ: 1
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್ಸ್
ಪುಟಗಳು: 308
ಬೆಲೆ: 370/-
ಮೊಬೈಲ್: 9008122991

‘ಚಿತ್ತರಂಗ’ ಕನ್ನಡ ಚಿತ್ರರಂಗದ ಕಾಲ್ಪನಿಕ ಕಲಾವಿದರ ಮನೋಲೋಕದ ಚಿತ್ರಣವಿರುವ ಕಾದಂಬರಿ. ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಈ ಕಾದಂಬರಿ ಹೊಂದಿದೆ. ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಹಾಗೂ ಸನ್ನಿವೇಶಗಳೂ ಕೇವಲ ಕಾಲ್ಪನಿಕವಾಗಿದ್ದು, ಯಾರದೇ ನಿಜ ಬದುಕು ಅಥವಾ ಘಟನೆಗಳಿಗೆ ಸಂಬಂಧ ಪಟ್ಟುದಲ್ಲವೆಂಬುದು ಲೇಖಕಿಯ ಅರಿಕೆ.

ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ ಕಲಾವಿದೆಯರ ಬದುಕಿನ ತೆರೆಮರೆಯ ಅಂತರಂಗವೇ ‘ಚಿತ್ತರಂಗ’. ಕೇವಲ ತಾಂತ್ರಿಕ ಅಥವಾ ಮನೋಧರ್ಮದ ದೃಷ್ಟಿಯಿಂದ ಇದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಉಳ್ಳದ್ದಾಗಿದೆಯೆಂದು ಉಲ್ಲೇಖಿಸಿದ್ದರೂ, ಇದು ಯಾವ ಕಾಲಘಟ್ಟದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳಬಹುದಾದ ಕಥೆಯೇ ಆಗಿದೆ.

ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.

ಸಾಹಿತ್ಯಮೈತ್ರಿ ತಂಡ

Related post