ಜಗದ ಸೂತ್ರಧಾರಿ
ನೀ ಜಗದ ಸೂತ್ರಧಾರಿಯಾಗಿ
ಲೋಕವನೆ ನಿನ್ನಾಣತಿಯಂತೆ ನಡೆಸುವೆ!
ನಾವು ಕ್ಷಣಿಕದ ಪಾತ್ರಧಾರಿಗಳಾಗಿ..
ನಟನೆ ಮುಗಿಯಲು ಪರದೆಯೆಳೆಯುವೆವು!!
ಚದುರಂಗದ ತೆರದಿ ಬಾಳಲಿ
ಸೋತ ನಂತರವೇ ಗೆಲುವು!
ಸಾಗುತಿಹ ಜೀವನವೆಂಬ ಆಟದಿ..
ನೀ ಮುನ್ನಡೆಸಿದಂತೆ ನಮ್ಮ ನಲಿವು!!
ಬಾಳಬಂಡಿ ಸರಾಗದಿ ಸಾಗಲು
ಸೊಗದ ಜೋಡೆತ್ತಿನ ನಡೆಯಿರಬೇಕು!
ಬದುಕಿನ ದಾರಿ ನೆಮ್ಮದಿಯಲಿರಲು..
ಕಾಣದ ಆ ದೈವದ ಕೃಪೆಯಿರಬೇಕು!!
ಅಂದದ ಬದುಕು ಕೊಟ್ಟ ದೇವನ
ನೆನೆದು ಪರಹಿತವೇ ಧ್ಯೇಯವಾಗಬೇಕು!
ಬಾಳಲಿ ಉಳಿದೆಲ್ಲವೂ ನಶ್ವರವೆಂಬ..
ಕಟುಸತ್ಯವ ನಾವೆಂದಿಗೂ ಅರಿತಿರಬೇಕು
ಸುಮನಾ ರಮಾನಂದ