ಜನನಿ
ನವಮಾಸ ಹೊತ್ತು ನೋವನುಂಡವಳು
ಈ ದೇಹಕ್ಕೆ ಮಾಂಸ ಮಜ್ಜೆ ನೀಡಿದವಳು
ತನಗಿಲ್ಲದಿರೂ ನನಗೆ ಕೊಟ್ಟ ನಿಸ್ವಾರ್ಥಿಯಿವಳು
ರಾತ್ರಿ ಹಗಲೂ ನಿದ್ರೆಗೆಟ್ಟು ಬೆಳೆಸಿದವಳು
ಲಾಲಿಯ ಜೋಗುಳವ ಹಾಡಿದವಳು
ಬಗೆ ಬಗೆಯ ಕಥೆಗಳನು ತಿಳಿಸಿದವಳು
ಅಕ್ಕರದ ಪ್ರೀತಿಯನು ನನ್ನಲ್ಲಿ ತುಂಬಿಹಳು
ಶಾಸ್ತ್ರ ಸಂಪ್ರದಾಯಗಳ ಕಲಿಸಿದವಳು
ಹಳೆಯ ತಲೆಮಾರಿಗೆ ಕೊಂಡಿಯಿವಳು
ಪ್ರೀತಿಯ ಧಾರೆಯ ಮೊಗೆದು ಹರಿಸಿದವಳು
ನನ್ನೆಲ್ಲ ಬೇಕು ಬೇಡಗಳನು ಅರಿತವಳು
ಮನಬಿಚ್ಚಿ ಮಾತಾಡಲು ಜೊತೆಯಿರುವಳು
ತಾಯಲ್ಲವೇ ನಿಜ ಪ್ರೀತಿ ಗೆಳೆಯಳು
ಅಮ್ಮ ಅಮ್ಮ ಅಮ್ಮ ನನ್ನಮ್ಮ
ಸಿ. ಎನ್. ಮಹೇಶ್