ಜನುಮದ ಜೋಡಿ
ಪ್ರೀತಿಸಿದೆನು ಒಲವಿನ ಗೆಳತಿ ನಿನ್ನನು
ಮರೆತು ದೂರವಾದೆ ನೀನು ನನ್ನನು
ನೀಡಿದೆ ಪ್ರೀತಿಯ ಸಂಕೇತವಾಗಿ ಉಂಗುರವನು
ನದಿಯಲಿ ಎಸೆದೆ ಒಲವಿನ ಉಡುಗೊರೆಯನು
ಯಾರಿಲ್ಲದ ಊರಲ್ಲಿ ಪ್ರೇಮ ಲೋಕದಲಿ
ವಾರೆಗಣ್ಣಿನ ನೋಟದಲ್ಲಿ ಸೆಳೆದೆ ಕಣ್ಣಲಿ
ಮುಂಗುರುಳು ಸರಿಸುತ ಮಂದಹಾಸದಲಿ
ಒಪ್ಪಿಸಿ ಬಿಟ್ಟೆ ಪ್ರೀತಿಯನ್ನು ಸಾಯಂಕಾಲದಲಿ
ಪ್ರತಿವರ್ಷದ ಜನ್ಮದಿನಕ್ಕೆ ನಿನಗಾಗಿ
ಸಂಭ್ರಮದ ಆಚರಣೆ ಏರ್ಪಡಿಸಿದೆ ಪ್ರೀತಿಗಾಗಿ
ಮುತ್ತು ನೀಡಿ ಸಿಹಿಯ ತಿನಿಸಿದೆ ಗೆಳತಿಗಾಗಿ
ಕೊಂಚ ಬಿಡುವು ಮಾಡಿಕೋ ರೂಪಸಿ ನನಗಾಗಿ
ನನ್ನ ನಿಷ್ಕಲ್ಮಶ ಪ್ರೀತಿಗೆ ಮೋಸ ಮಾಡಿ
ಹೋದೆಯಾ ಗೆಳತಿ ತಿರುಗಿ ನೋಡಿ
ಒಪ್ಪಿಸಲೆ ಮತ್ತೆ ಪ್ರೀತಿಯನ್ನು ನಿನ್ನ ಕಾಡಿ
ಎಲ್ಲೇ ಇದ್ದರೂ ನೀ ನನ್ನ ಜನುಮದ ಜೋಡಿ
ಪ್ರೀತಿಗಾಗಿ ಮುಕ್ಕೋಟಿ ದೇವತೆಗಳ ಪ್ರಾರ್ಥಿಸಿ
ಮತ್ತೆ ಬರೆದೆನು ಪ್ರೇಮ ಪತ್ರವ ನಿನ್ನ ನೆನೆಸಿ
ದಯಮಾಡಿ ಪ್ರೀತಿಸು ಗೆಳತಿ ನನ್ನ ಕ್ಷಮಿಸಿ
ಮಡಿಯುವೆ ಪ್ರೀತಿಸದಿದ್ದರೂ ನಾ ನಿನ್ನ ಪೂಜಿಸಿ
ಮುತ್ತು . ಯ. ವಡ್ಡರ
ಶಿಕ್ಷಕರು ಬಾಗಲಕೋಟ
ಮೊಬೈಲ್ – 9845568484
2 Comments
ಸೂಪರ್ 🙏manijkarnika ಪೊಯಮ್ ಅವ್ರು jhansibai ಒಂದೇನಾ?
ಸೂಪರ್ ಅವಕಾಶ ನಮಗೂ ನೀಡಿ