ಟೇಬಲ್ಲು ಹಾಗು ಪರ್ವತ
ನೇನು – ದೇಪು – ಸಂಘರ್ಷ….
ಅವತ್ತು ಎಂದಿನಂತೆ ಅದೇ ಟೇಬಲ್ಲು
ನಾವು ಮೂರ್ವರು
ಎದುರಗಡೆ ಹೊಸ ಪರ್ವತ ಮೂವರು ಕಣ್ಣು ಪಿಳ ಪಿಳ, ಹೊಸ ಪರ್ವತವೊಂದು ಗೋಚರಿಸಿದೆ ಅದು ನಮ್ಮ ಟೇಬಲಲ್ಲೇ!
ಪರ್ವತ ಪೂರ್ತಿ ಅಕ್ರಮಿಸಿದ್ದರಿಂದ ಬೇರೆ ಜಾಗವಿಲ್ಲದೆ ನಾವ್ ಮೊರ್ವರು ಅಂಟಿಕ್ಕೊಂಡು ಗುಟ್ಟಾಗಿ ಪಿಸುಗೊಂಡೆವು
ಅದೊಂದು ತಜ್ಞರ ಸಮಾಲೋಚನೆ👍
ಸಂಘರ್ಷ: ಅಲ್ನೋಡು ಟೇಬಲ್ಲು ಪರ್ವತದ ಹೊಟ್ಟೆಯ ಮೇಲೆ ಬಿದಿದ್ದೆ,
ನೇನು: ಇಲ್ಲಾ ಕಣೋ ಟೇಬಲ್ನನ್ನೇ ಪರ್ವತದ ಮೇಲೆ ಕೂರಿಸಿದ್ದಾರೆ,
ದೇಪು: ಲೊ ಈ ಪರ್ವತ ಮಲೆನಾಡು ಸೀಮೆಯದು ಅದಕ್ಕೆ ಮರದ ಟೇಬಲನ್ನೇ ಈ ಪರ್ವತದ ಮೇಲಿಟ್ಟಿದ್ದಾರೆ,
ನೇನು: ಅದ್ಸರಿ ಈ ಪರ್ವತ ಯಾವಾಗ ಸ್ಫೋಟಗೊಳ್ಳಬಹುದು,
ಸಂಘರ್ಷ: ಸುಮ್ನೆ ಯಾಕೆ ಟರ್ಕಿ ಸಿರಿಯಾ ಜ್ಞಾಪಿಸ್ತೀರ ಭಯ ಆಯ್ತದೆ,
ದೇಪು: ಲೊ ಅದು ಭೂಕಂಪ ಕಣೋ,
ಸಂಘರ್ಷ: ಮುಚ್ಚು (ಮೆಲುದನಿಯಿಂದ) ಎಲ್ಲಾ ಒಂದೇ ಮಗ ಒಟ್ಟು ಅದ್ಎಂಗೆ ಏಳುತ್ತೆ ಅದು ಇಂಪಾರ್ಟೆಂಟ್,
ನೇನು: ಲೊ ಬಿಲ್ಲು ಬಂದು ಸೆಟ್ಟಲ್ ಆಯಿತು, ಯಾವ್ದುಕ್ಕು ನಿಮ್ಮ ನಿಮ್ಮ ಲೋಟ ಜೋಪಾನ,
ಸಂಘರ್ಷ: (ಮೇಲುದನಿಯಲ್ಲಿ) ಲೊ ಯಾರ್ದಾರ್ದು ಫೋನ್ ಕ್ಯಾಮೆರಾ ಆನ್ ಮಾಡ್ರೋ,
ದೇಪು: ನಿನ್ ದೇ ಮಾಡು ಕ್ರೆಡಿಟ್ ಮಾತ್ರ ನೀ ತಕ್ಕಳೋದ!
ನೇನು: ಲೊ ಪರ್ವತ ಗುಟ್ರು ಹಾಕ್ತಾಯ್ತೆ ಯಾವ್ದಕ್ಕು ಎಲ್ಲಾ ನಮ್ಮ ನಮ್ಮ ಲೋಟ ಎತ್ತಿ ಕೈಲಿಟ್ಟುಕೊಳ್ಳೋಣ
ಮತ್ತೆ ಗುಟುರು,
ಪರ್ವತ ಒಮ್ಮೆ ನಮ್ಮೆಲರನ್ನು ನೋಡಿ ನಕ್ಕಿತ್ತು,
ಒಮ್ಮೆಲೇ ಗುಡುಗು ಶಬ್ದ ಅಲ್ಲೋಲ ಕಲ್ಲೋಲ್ಲ, ಧಿಗ್ ಬ್ರಾಂತಿ,
ನಮ್ಮೆಲ್ಲರ ಕೈಲಿದಿದ್ದು ನಮ್ಮ ತಲೆ ಮುಖ ಎಲ್ಲಾ,
ತಜ್ಞರೆಲ್ಲರೂ ಮನೆಗೆ ಹೋಗಿ ಮತ್ತೆ ಸ್ನಾನ ಮಾಡಿದೆವು😄😄
ಕು ಶಿ ಚಂದ್ರಶೇಖರ್
1 Comment
Soo nice