ಅಲೆಕ್ಸಾಂಡರ್ ಗ್ರಹಾಂ ಬೆಲ್
ಇತ್ತೀಚಿನ ದಿನಗಳಲ್ಲಿ ದೂರವಾಣಿ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಅಲ್ಲವೇ? ಅದು ನಿಸ್ತಂತು (Landline) ಆಗಿರಬಹುದು ಅಥವಾ ಸಂಚಾರಿ ದೂರವಾಣಿ ಆಗಿರಬಹುದು (ಮೊಬೈಲ್ ಫೋನ್) ಆಗಿರಬಹುದು. ಇವು ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೇ ಕಷ್ಟ! ಅಲ್ಲದೇ ದೂರವಾಣಿ ಅಥವಾ ಈ ಫೋನ್ ಗಳ ಮೂಲಕ ನಾವು ಸುಮಾರು ದೇಶ ಕಾಲದ ಎಲ್ಲೇ ಮೀರಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ದೂರವಾಣಿ ಕ್ಷೇತ್ರದಲ್ಲಿ ಇಷ್ಟೊಂದು ಕ್ರಾಂತಿಗೆ ಕಾರಣರಾದವರು ಒಬ್ಬರು ಇದ್ದಾರೆ. ಅವರೇ “ಅಲೆಗ್ಸಾಂಡರ್ ಗ್ರಾಹಂಬೆಲ್”. ಅಲೆಗ್ಸಾಂಡರ್ ಗ್ರಾಹಂಬೆಲ್ ನ ತಾಯಿ ಮತ್ತು ಹೆಂಡತಿ ಇಬ್ಬರು ಕಿವುಡು ಮತ್ತು ಮೂಗರಾಗಿದ್ದರು ಆದ್ದರಿಂದ ಅವರೊಡನೆ ಮಾತನಾಡಲು ಒಂದು ಸಾಧನ ಬೇಕಿತ್ತು ! ಆಗ ಜನ್ಮ ತಾಳಿದ್ದೆ ಈ ದೂರವಾಣಿ ! ತಾನು ಕಂಡು ಹಿಡಿದ ಸಾಧನ ಮುದೊಂದು ದಿನ ಪ್ರಪಂಚದಲ್ಲಿ ಮಹಾಕ್ರಾಂತಿ ಮಾಡುತ್ತದೆ ಎಂದು ಗ್ರಾಹಂಬೆಲ್ ಸಹ ಉಹಿಸಿರಲಿಲ್ಲವೆಂದು ಕಾಣುತ್ತದೆ.
ಗ್ರಾಹಂಬೆಲ್ ಹುಟ್ಟಿದ್ದು ಮಾರ್ಚ್ 3, 1847 ರಂದು ಸ್ಕಾಟ್ಲ್ಯಾಂಡಿನ ‘ಎಡಿನ್ ಬರ್ಗ್ನ’ ನಲ್ಲಿ. ಮೂವರು ಮಕ್ಕಳಲ್ಲಿ ಮಧ್ಯದವನು ಗ್ರಾಹಂಬೆಲ್. ಇವನ ಅಣ್ಣ ತಮ್ಮ ಇಬ್ಬರು ಕ್ಷಯದಿಂದ ಮರಣ ಹೊಂದಿದರು. ‘ಎಡಿನ್ ಬರ್ಗ್ನ ರಾಯಲ್ ಸ್ಕೂಲ್’ ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದನು. ಅತ್ಯಂತ ಚುರುಕು ಹಾಗೂ ಬುದ್ಧಿವಂತನಾದ ಇವನಿಗೆ 16ನೇ ವಯಸ್ಸಿನಲ್ಲಿಯೇ ವೆಸ್ಟರ್ನ್ ಹೌಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿನಿಲಯದ ಕಾಲೇಜಿನಿಂದ ಪದವಿ ದೊರಕಿತು, ನಂತರ ವಿಜ್ಞಾನ ಕ್ಷೇತ್ರದಲ್ಲಿ ಇವನ ಒಲವು ಹರಿಯುತ್ತಲ್ಲದೇ ತನ್ನ ತಾಯಿಯ ಕಿವುಡುತನವನ್ನು ನಿವಾರಿಸುವ ಮಾರ್ಗೋಪಾಯವನ್ನು ಕಂಡುಹಿಡಿಯಲು ಮುಂದಾದನು.
ಗ್ರಾಹಂಬೆಲ್ ನ ತಂದೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಕಿವುಡು ಮೂಗರಿಗೆ ಸನ್ನೆಗಳ ಮೂಲಕ ಹೇಗೆ ಮಾತನಾಡುವುದು ಎಂಬ ಬಗ್ಗೆ ಪಾಠ ಮಾಡುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಗ್ರಾಹಂಬೆಲ್ ಗೆ ಕಿವುಡು ಹಾಗೂ ಮೂಗರಿಗೆ ಮಾತನಾಡಲು ಉಪಯೋಗವಾಗುವಂತಹ ಸಾಧನೆವೊಂದನ್ನು ಕಂಡುಹಿಡಿಯಬೇಕೆಂದು ಆಸಕ್ತಿ ಬರುತ್ತಿತ್ತು. ಇತನಿಗಿದ್ದ ಸಾಮರ್ಥ್ಯ, ಆಸಕ್ತಿ ಇವನಿಗೆ ‘ಬೂಸ್ಟನ್ ವಿಶ್ವವಿದ್ಯಾಲಯ’ ದಲ್ಲಿ ಪ್ರೊಫೆಸರ್ ವೃತ್ತಿ ಸಿಗುವಂತೆ ಮಾಡಿತು. ಅಲ್ಲಿ ತನ್ಕ ಸಂಶೋದನೆಯನ್ನು ಮುಂದುವರೆಸಿದ ಗ್ರಾಹಂಬೆಲ್ ಕೊನೆಗೆ ದೂರವಾಣಿ ಕಂಡು ಹಿಡಿಯಲು ನಾಂದಿ ಹಾಡಿತು.
ಈ ದೂರವಾಣಿ ಸಂಶೋಧನೆಗೆ ಆತ 1876 ರಲ್ಲಿ “ವಿಶಿಷ್ಟಾಧಿಕಾರಿ ಪತ್ರ’ (ಪೇಟೆಂಟ್) ನ್ನು ಸಹ ಪಡೆದುಕೊಂಡನು. ಇದಾದ ನಂತರವೂ ಆತ ಸಂವಹನದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದನು. ಇವು ಇಂದಿನ ‘ಆಪ್ಟಿಕಲ್ ಫೈಬರ್’ ಕಂಡು ಹಿಡಿಯಲು ನಾಂದಿ ಹಾಡಿತು. ಗ್ರಾಹಂಬೆಲ್ ನ ಅನೇಕ ಸಂಶೋಧನೆಗಳಲ್ಲಿ ಹಲವಕ್ಕೆ ಪೇಟೆಂಟ್ ಸಿಕ್ಕಿದೆ. ಅದರಲ್ಲಿ 14 ಪೆಟೆಂಟ್ಗಳು ‘ದೂರವಾಣಿ’ ಹಾಗೂ ‘ತಾರಾಯಂತ್ರ’ ಹಾಗು ನಾಲ್ಲು ಪೇಟೆಂಟ್ಗಳು ‘ಫೋಟೋಫೋನ್’ ಗೆ ದೊರಕಿದೆ.
ಗ್ರಾಹಂಬೆಲ್ ದೂರಶ್ರವಣಯಂತ್ರ. ಅಥವಾ ದೂರವಾಣಿಯನ್ನು ಕಂಡುಹಿಡಿಯದೇ ಇದ್ದರೆ ಇಂದು ಪ್ರಪಂಚದಲ್ಲಿ ಇಷ್ಟೊಂದು ಮೊಬೈಲ್ ಕ್ರಾಂತಿಯಾಗುತ್ತಿರಲಿಲ್ಲ.! ಕಿವುಡರು ಇಂದು ಉಪಯೋಗಿಸುವ ‘ಹಿಯರಿಂಗ್ ಏರ್’ ಹುಟ್ಟಲಿಕ್ಕೆ ‘ಗ್ರಾಹಂಬೆಲ್’ ಕಾರಣ ಎಂದರೆ ತಪ್ಪಾಗಲಾರದು. ಆದರೆ ಗ್ರಾಹಂಬೆಲ್ ಕಂಡು ಹಿಡಿದ ದೂರಶ್ರವಣಯಂತ್ರದಲ್ಲಿ ತನ್ನ ತಾಯಿ ಹಾಗೂ ಹೆಂಡತಿಯೊಡನೆ ಎಂದೂ ಮಾತನಾಡಲಿಲ್ಲ ಎಂಬುದು ವಿಪರ್ಯಾಸ! 1922 ರಲ್ಲಿ ತನ್ನ 80ನೇ ವಯಸ್ಸಿನಲ್ಲಿ ಗ್ರಾಹಂಬೆಲ್ ನಿಧನಹೊಂದಿದನು.
ಮೇ 17 ರಂದು ‘ವಿಶ್ವ ದೂರಸಂಪರ್ಕ ದಿನ’ ಗ್ರಹಾಂಬೆಲ್ ನನ್ನ ನೆನೆಯೋಣ
ಡಾ|| ಪ್ರಕಾಶ್ ಕೆ.ನಾಡಿಗ್
ಶಿವಮೊಗ್ಗ