ಭಾರತದ ಮೊಲಗಳು

ಭಾರತದ ಮೊಲಗಳು

ನಮ್ಮ ಕಾಡುಗಳಲ್ಲಿ ಕಂಡುಬರುವ ಮೊಲಗಳಿಗೆ ನಾವು ಸಾಮಾನ್ಯವಾಗಿ Rabbits ಎನ್ನುತ್ತೇವೆ, ಆದರೆ ನಿಜ ಸಂಗತಿ ಎಂದರೆ Rabbits ಗಳು ನಮ್ಮ ದೇಶದಲ್ಲಿ ಇಲ್ಲ!!!

ನಮ್ಮಲ್ಲಿ ಕಂಡುಬರುವ ಮೊಲಗಳೆಂದರೆ ಹೇರ್ (Hare)

ಬ್ಲಾಕ್ ನಾಪ್ಪೆಡ್ ಹೇರ್ ಇದು ನಮ್ಮ ರಾಜ್ಯದಲ್ಲಿ ಕಂಡು ಬರುವ ಮೊಲ.

HARE’S ಹಾಗು RABBITS ಗಳು Leporidae ಕುಟುಂಬಕ್ಕೆ ಸೇರಿವೆ. ಇವೆರಡೂ ವಿಪುಲ ಸಂತಾನಿಗಳು.

ಹಾಗಾದರೆ HARE’S ಹಾಗು Rabbits ನಡುವಿನ ವ್ಯತ್ಯಾಸಗಳೇನು?

ಮೇಲ್ನೋಟಕ್ಕೆ ಇವೆರಡರ ನಡುವೆ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟವಾದರೂ ಹುಟ್ಟುವ ಮರಿಗಳಿಂದ ಸುಲಭವಾಗಿ ಗುರುತಿಸಬಹುದು.

HARE’S: ಇವು ನೆಲದ ಮೇಲೆ ಮರಿ ಹಾಕುತ್ತವೆ, ಹುಟ್ಟಿದಾಗ ಮೈ ಮೇಲೆ ಕೂದಲು ಇರುತ್ತವೆ, ಕಣ್ಣು ತೆರೆದಿರುತ್ತವೆ, ಹುಟ್ಟಿದ ಒಂದೆರಡು ಗಂಟೆಗಳಲ್ಲಿ ಮರಿ ಓಡಾಡುತ್ತವೆ. ಸಾಮಾನ್ಯವಾಗಿ ಏಕಾಂಗಿಗಳು, Rabbits ಗಳಿಗಿಂತ ವೇಗವಾಗಿ ಓಡಬಲ್ಲವು. ನಮ್ಮ ದೇಶದಲ್ಲಿ ಇವೆ.

RABBITS: ನೆಲದ ಒಳಗೆ ಬಿಲ ತೋಡಿ ಮರಿ ಹಾಕುತ್ತವೆ, ಮರಿಗಳ ಕಣ್ಣು ತೆರೆದಿರುವುದಿಲ್ಲ ಹಾಗು ಮೈಮೇಲೆ ಕೂದಲು ಇರುವುದಿಲ್ಲ, ಬಿಲ ಬಿಟ್ಟು ಮರಿಗಳು ಮೂರು ವಾರಗಳವರೆಗೂ ಹೊರ ಬರುವುದಿಲ್ಲ. ಗುಂಪು ಜೀವಿಗಳು, ಓಡುವುದರಲ್ಲಿ HARE’S ಗಿಂತ ನಿಧಾನ. ಇವು ನಮ್ಮ ದೇಶದಲ್ಲಿ ಇಲ್ಲ.

ಮೊಲಗಳು ದಂಶಕ(Rodents) ಪ್ರಾಣಿಗಳ ಗುಂಪಿಗೆ ಸೇರುತ್ತವೆ, ಇವುಗಳ ಬಾಚಿ ಹಲ್ಲುಗಳು ನಿರಂತರವಾಗಿ ಬೆಳೆಯುತ್ತಿರುವುದರಿಂದ ಈ ಹಲ್ಲುಗಳನ್ನು ನಿಯಮಿತವಾಗಿ ಸವೆಸುವ ಅಗತ್ಯವಿರುತ್ತದೆ ಹಾಗಾಗಿ ಕೆಲವು ಸಲ ಬೆಳೆಗಳನ್ನು ತಿನ್ನುವುದರ ಜೊತೆಗೆ ಕತ್ತರಿಸಿ ಹಾಕುವುದನ್ನೂ ನೋಡಬಹುದು, ಫಾರ್ಮ್ ಗಳಲ್ಲಿ ಸಾಕುವ ಉದ್ದೇಶದಿಂದ ಮಾಡಿದ Rabbits breed ನಮ್ಮಲ್ಲಿ ನೋಡಬಹುದು.

ನಾಗರಾಜ್ ಬೆಳ್ಳೂರ್
Nisarga Conservation Trust

Related post