ನಾಲ್ಕು ದಾರಿ ‘ಗುರು’ವೆಂಬ ಹೆದ್ದಾರಿ – ನಾಟಕ

ನಾಲ್ಕು ದಾರಿ ‘ಗುರುವೆಂಬ ಹೆದ್ದಾರಿ

ದೃಶ್ಯ – 1

ರಂಗಸ್ಥಳದ ಮೇಲೆ ನಾಲ್ಕು ನೇಣು ಕುಣಿಕೆಗಳ ಮುಂದೆ ನಾಲ್ಕು ಜನರಾದ ಇಮಾಮ್ ಸಾಬ್ (ವಕೀಲ) ಪರಸಪ್ಪ (ರೈತ) ಅನಂತು (ಕ್ಲರ್ಕ್) ನಿರುದ್ಯೋಗಿ (ಜನಾರ್ಧನ) ಸಾಯಲು ಪ್ರಯತ್ನಿಸುವ ದೃಶ್ಯ…..

ದೃಶ್ಯ -2

ಎಲ್ಲರೂ ಮುಖ ಮುಖ ನೋಡುತ್ತಾ ತಮ್ಮ ತಮ್ಮಲ್ಲಿ ಹೀಗೆ ಹೇಳಿಕೊಂಡು
ಇಮಾಮ್ ಸಾಬ್… ಹಾ ಟೀಕ್ ಹೈ, ಹಮ್ ಮರ್ನಾ ಹೈ.
ರೈತ… ವಿಷಾದದಿಂದ ಹೊಲದ ಕ್ರಿಮಿ ಸತ್ತಾಂಗ ಸಾಯೋಣ, ಬರ್ರಪ್ಪೋ ಬರ್ರಿ….
ಅನಂತು… ಎಂತದ್ದು ಮಾರಾಯರೇ ನನ್ನ ಮಂಡೆ ಬಿಸಿಯಾಗುವುದುಂಟು ಇದು ಎಂಥ ಸಾವು ಮಾರಾಯ
ಜನಾರ್ಧನ… ಛೇ ಈ ನೇಣು ಕುಣಿಕೆ ಕೊರಳ ಮಾಲೆಯಂತೆ ಕಾಣುತ್ತಿದೆ ಇಂದು.

ದೃಶ್ಯ – 3

(ಒನ್ ಮಿನಿಟ್ ಕೃಷ್ಣಸ್ವಾಮಿ ಗುರೂಜಿ ಆಗಮನ)
ಕಕ್ಕಾಬಿಕ್ಕಿಯಿಂದ ಹೇ ತಡೀರೋ ದಡ್ಡ ಮುಂಡೇವೆ, ಯಾಕ್ ಸಾಯಕ್ ಹೊಂಟೀರಿ? ತಡ ಬಡಾಯಿಸುತ್ತಾ ಬಂದು ಅವರನ್ನು ತಡೆಯುತ್ತಾ!
ಇಮಾಮ್ ಸಾಬ್ ವಕೀಲ…. ಅರೇ ನಮ್ದುಕೆ ಜೀವ ನೆಮ್ದಿಲಿ ಸಾಯೋ ಟೈಮ್ ನಲ್ಲಿ ನಿಮ್ದೂಕೆ ಕಿರಕ್ ಮಾಡ್ತದ… ಬುಡ್ಡ ಸಾಬ್, ಕೌನ್ ಹೈ ಆಫ್?
ಒನ್ ಮಿನಿಟ್ ಕೃಷ್ಣಸ್ವಾಮಿ….. ಗುರೂಜಿ, ಹೇ ಬುಡ್ಡಾ ಬುಡ್ಡಾ ತೇರಾ ಬಾಪ್. ಥೂ… ಎಂದು ಉಗುಳುತ್ತಾ, ದ್ವಂದ್ವ ಭಾಷೆಯಲ್ಲಿ, ಮೇರಾ ಬೇಟಾ…
ಇಮಾಮ್ ಸಾಬ್…… ಹೇ ಬುಡ್ಡ ಬುಡ್ಡಾ ಸಾಬ್ ಕ್ಯಾ ತೇರಾ ದಿಮಾಕ್ ದಿಮಾಕ್ ಕರಾಬ್ ಹೋಗಯಾ ಕ್ಯಾ? ಕ್ಯಾ? ಮೈ ತೇರಾ ಬೇಟಾ ಕೈಸಾ? ಅರೇ ಚಲ್!
ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ…. ಅರೇ ನಿಕಲತಾ.. ಮೊದಲು ಸಾಯೋಕೆ ಯಾಕ್ ಹೊಂಟೀ ಸ ಹೇಳಪ್ಪಾ ಸೌದಾಗರ್….
ಇಮಾಮ್ ಸಾಬ್… ನಮ್ದುಕ್ಕೆ ಸ್ಟೋರಿ ಸ್ಟೋರಿ ಕೇಳೋಕೆ ನಿಮ್ದುಕೆ ದಿಲ್ ಮೇ ಪ್ಯಾರ್ ಹೈ… ಅಚ್ಚ ಹೈತೋ ಸುನೋ ಮೆರಾ ಬಾಪ್.

ಒನ್ ಮಿನಿಟ್ ಕೃಷ್ಣಸ್ವಾಮಿ ಗುರೂಜಿ… ಆಕಾಶ ನೋಡುತ್ತಾ
ಅಮ್ಮ ಕನ್ನಡಾಂಬೆ ನಿನ್ನನ್ನು ನೀನೆ ಕಾಪಾಡ್ಕೋಬೇಕು ಕನ್ನಡಾಂಬೆ ಭುವನೇಶ್ವರಿ.

ಇಮಾಮ್ ಸಾಬ್…. ಭುವನೇಶ್ವರಿ ಮೈ ನಹಿ ಜಾನ್ತಾ ಭುವನೇಶ್ವರಿ ನಹೀ ಭಾವನ, ಭಾವನಾ, ಬೋಲೋ..
ಓ ಮೇರಿ ಸಹೇಲಿ ಹೈ ಪ್ಯಾರ್ ಹೈ
ಇಮಾಮ್ ಸಾಬ್…. ಪೆಹಲ ಪ್ಯಾರ್ ಕರ್ತಾತ ಅಬ್ ನಹೀ, ವೋ ಚೋಕ್ರಿ ಮುಜೆ ಚೌಡ್ಕೆ ಚಲೇ ಗಯೇ.. ಒರ್ ದೂಶ್ರೇಸೆ ಶಾದಿ ಶಾದಿ ಹೋಗಯಾ ಮೈ ಇಸ್ ಮಮ್ತಾಜ್ ಸೆ ನಿಕಾ ಹೋಗಯಾ…
ವನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ… ಥೂ ನಿನ್ನ ಲವ್ ಸ್ಟೋರಿ ಯಾವನಿಗೆ ಬೇಕಲೇ…. ಭುವನೇಶ್ವರಿ, ಅಂದ್ರೆ ಕನ್ನಡಾಂಬೆ. ತಾಯಿ ಕನ್ನಡ ಮಾತೆ, ಸ್ಮರಿಸಿದ್ದು ಅರ್ಥವಾಯಿತಾ? (ಈ ನನ್ ಮಗನಿಗೆ ಹಗ್ಗ ಕಡಿಯೋ ಚಾಡಿ ಬಾಳ ಇದ್ದಂಗೆ ಐತೆ, ಮನದಲ್ಲಿ ಗುಣಗಾಡಿಕೊಳ್ಳುತ್ತಾ)
ಇಮಾಮ್ ಸಾಬ್…. ಕ್ಯಾ ಬೋಲಾ… ಒನ್ ಮಿನಿಟ್
ಕೃಷ್ಣಸ್ವಾಮಿ ಗುರೂಜಿ,… ಅರೆ ನಿನ್ನ ಟ್ರ್ಯಾಜಿಡಿ ಕಹಾನಿ ಹೇಳೋ ಗೆಂಡೆತಿಮ್ಮ..
ಇಮಾಮ್ ಸಾಬ್… (ಆವೇಶ ವಿಷಾದಿಂದ) ಸ್ಟೋರಿ ಸೋನೋ ಮೆರಾ ಬಾಪ್.
ಮೇರಾ ಬೀವಿ, ಮುಜೆಕೋ ಬಾಬ್ ಬನ್ಕೆ ಪಡಾ ಹೈ. ಮೈ ಕ್ಯಾ ಕರೂ. (ಸಂಕಟದಿಂದ)
ಒನ್ ಮಿನಿಟ್ ಕೃಷ್ಣಸ್ವಾಮಿ ಗುರೂಜಿ… ಹ್ಮೂ.. ಏನಾಯ್ತೋ
ಇಮಾಮ್ ಸಾಬ್… ಗುರೂಜಿ ನಮ್ದುಕೆ ಬೀವಿ ನನ್ ಮೇಲೆ ಡವ್ರೀ ಹರಸ್ಮೆಂಟ್ ಕೇಸ್ ಹಾಕ್ತಿನಿ ಅಂತ ದಿನಾ ರಕ್ತ ಕುಡಿತಾ ಇದ್ದಾಳೆ. ಮನೆಗೆ ಬನ್ನಿ ಆಕೆದು ನಾಟಕ ಅದು ತೋರಿಸ್ತೀನಿ..
( ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ ಮನದಲ್ಲಿ ಗೊಣಗಾಡಿಕೊಳ್ಳುತ್ತಾ ಥೂ ಇವಂದೆನಪ್ಪ ಕನ್ನಡ ಎಂದು ಅವನ ಮನೆಗೆ ಹೋಗುತ್ತಾನೆ)

ಇಮಾಮ್ ಸಾಬ್ ಮನೆ ಪ್ರವೇಶ ದೃಶ್ಯ……

ಹೆಂಡತಿ ಟಿವಿ ಆನ್ ಮಾಡಿ ಕುಳಿತಿದ್ದಾಳೆ
(ದೊಡ್ಡ ಧ್ವನಿಯಲ್ಲಿ ಟಿವಿಯಲ್ಲಿ ಪುಟ್ಟ ಗೌರಿ ಮದುವೆ ಎನ್ನುವ ಸೀರಿಯಲ್ಲಿನ ಹಾಡು ಹೊರಗಿನ ವರೆಗೂ ಕೇಳಿಸುತ್ತಿದೆ)
ಇಮಾಮ್ ಸಾಬ್… ಮಮ್ತಾಜ್ ಮಮ್ತಾಜ್ ಮೇರಿ ಜಾನ್ ದೇಕೋ ಹಮಾರ ಘರ್ ಕೋ ನಯಾ ಮೆಹಮಾನ್ ಅಯಾ ಹೈ.. ಮಮ್ತಾಜ್ ಳು ಟಿವಿಯನ್ನೇ ದೃಷ್ಟಿಸುತ್ತಾ ಕಣ್ಗಳನ್ನು ಅಲುಗಾಡಿಸದೇ ಕುಳಿತು ಮೈ ಮರೆತಿದ್ದಾಳೆ…
ಮುಮ್ತಾಜ್ ಎಂದು ಆಕೆಯ ಬೆನ್ನು ತಟ್ಟಿ ಎಚ್ಚರಿಸುತ್ತಾನೆ.
ಮಮ್ತಾಜ್…. ಅರೆ ನಮ್ದುಕ್ಕೆ ಟಿವಿ ನೋಡೋ ಸಮಯದಲ್ಲಿ ನಿಮ್ದೂಕೆ ಕ್ ಏನು ಕಿರಿಕಿರಿ ಡಿಸ್ಟರ್ಬ್ ಮಾಡ್ತಾ ಇದ್ದೀರಿ ಎನ್ನತ ಮನೆಯಲ್ಲಿರುವ ಪಾತ್ರೆ ಪಗಡೆ ಮೊಬೈಲು ಎಲ್ಲವನ್ನು ಎಸೆದು ಚೀರಾಡಿ ರಂಪಾಟ ಮಾಡಿ ಹೊರಳಾಡಿ ಕಾಲತಿಕ್ಕಾಡಿ ಅವರನ್ನು ದಿಗ್ಭ್ರಮೆಗೊಳಿಸಿ ಮನೆಯಿಂದ ಓಡಿಸಿಬಿಡುತ್ತಾಳೆ

ಇಮಾಮ್ ಸಾಬ್… (ಜೀವಭಯದಿಂದ ಇಬ್ಬರು ಓಡಿ ಬಂದು ಹೊರಾಂಗಣದಲ್ಲಿ ನಿಲ್ಲುತ್ತಾರೆ) ಇಮಾಮ್ ಸಾಬ್ ಒನ್ ಮಿನಿಟ್ ಕೃಷ್ಣಸ್ವಾಮಿ ಗುರೂಜಿಯನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆನೆ
ಗುರೂಜಿ ದೇಕಾ ಮೇರಾ ಹಾಲತ್… ಆರು ತಿಂಗಳಿಂದ ನಮ್ದೂಕೆ ಬೀವಿನ ಪ್ಯಾರ್ ಸೆ ಮುಟ್ಟಿಲ್ಲ. ಅಬ್ ತಕ್ ಓಬೀ ನಹೀ ಹುವಾ… ತೀನ್ ದಿನ್ ಸೆ ಟೇಟ್ ಬೀ ಬೂಕಾ. ಒರ್ ಎಂದು ನಗಾಡುತ್ತಾನೆ…
ಓನ್ ಮಿನಿಟ್ ಕೃಷ್ಣಸ್ವಾಮಿ ಗುರೂಜಿ…. ಇಮಾಮ್ ಸಾಬ್ ಹೆಗಲ ಮೇಲೆ ಕೈ ಹಾಕುತ್ತಾ… ವಿಷಣ್ಣ ವದನ ದಿಂದ ನಿಟ್ಟುಸಿರು ಬಿಡುತ್ತಾ.. ಹ್ಮೂ! ಅರ್ಥವಾಯಿತು ನಿನ್ನ ಸಮಸ್ಯೆ. ನಿನ್ನ ಹೆಂಡತಿಯನ್ನು ಹೇಗೆ ಸರಿದಾರಿಗೆ ತರುವುದು ಎನ್ನುವುದರ ಬಗ್ಗೆ ನಾನು ಸಹಾಯ ಮಾಡುತ್ತೇನೆ. ಆದರೆ, ನೀನು ನನಗೆ ಒಂದು ಪ್ರಮಾಣ ಮಾಡಬೇಕು, ಇನ್ನೂ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುವುದಿಲ್ಲ, ಮಾಡಿಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿದರೆ ಮಾತ್ರ ನಾನು ಸಹಾಯ ಮಾಡಬಲ್ಲೆ..
(ಇಮಾಮ್ ಸಾಬ್ ತುಂಬಾ ಸಂತೋಷದಿಂದ)
ಆಯ್ತು ಗುರೂಜಿ ನಾನು ಪ್ರಮಾಣ ಮಾಡುತ್ತೇನೆ.( ನನ್ನ ಸಮಸ್ಯೆಯನ್ನು ನೀವೇ ಪರಿಹರಿಸಿ ಕೊಡಿ ಎಂದು ಅವರ ಕಾಲಿಗೆ ಬೀಳುತ್ತಾನೆ)
ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ….. ಹಾಗಾದ್ರೆ ನೀನು ಏನು ಕೆಲಸ ಮಾಡುತ್ತೀಯಾ ಹೇಳಪ್ಪ?
ಇಮಾಮ್ ಸಾಬ್…. ಗುರೂಜಿ ನಾನು ವೃತ್ತಿಯಲ್ಲಿ ಲಾಯರ್.
(ಗುರೂಜಿ ಇವನನ್ನು ನೋಡಿ ದೊಡ್ಡ ನಗು ನಗುತ್ತಾ ಸುಮ್ಮನಾಗುತ್ತಾನೆ)

ದೃಶ್ಯ – 4

ಅನಂತು ವಿನ ದೃಶ್ಯ….( ಅನಂತ್ ಎಂತದ್ದು ಮಾರಾಯರೇ ಮಂಡೆ ಬಿಸಿ) ಎನ್ನುತ್ತಾ ನೇಣುಕುಣಿಕೆಯನ್ನು ಕೊರಳಿಗೆ ಹಾಕಿಕೊಳ್ಳುತ್ತಾನೆ, ನನಗೆ ಒಬ್ಬನೇ ಸಾಯಲು ಭಯ ಉಂಟು ಎಂದು
ಒನ್ ಮಿನಿಟ್ ಕೃಷ್ಣಸ್ವಾಮಿ ಗುರೂಜಿ ….(ಅನಂತವನ್ನು ಕುರಿತು) ಏ ಉಸರವಳ್ಳಿ ಕೆಳಗೆ ಇಳಿದು ಬಾ ನಿನ್ನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಸಾಯಬೇಡ..
ಅನಂತು….(ಒನ್ ಮಿನಿಟ್ ಕೃಷ್ಣಸ್ವಾಮಿ ಗುರೂಜಿಯನ್ನು ಉದ್ದೇಶಿಸಿ…) ಸ್ವಾಮಿ! ನಮ್ಮದು ದೊಡ್ಡ ಹಿಸ್ಟರಿಯೇ ಉಂಟು ಹೇಳುವೆನು. ಕೇಳಿದ ನಂತರ ಮತ್ತ ನೀವು ಸಾಯಬಾರದು ನೋಡಿ ಆಯ್ತಲ್ಲವೇ ಹಾಗಾದರೆ ಈ ನೇಣು ಕುಣಿಕೆ ನಿಮಗೇ ಮೀಸಲು ಎಂದು ಕೆಳಗೆ ಹಾರುತ್ತಾನೆ.
ಕೃಷ್ಣ ಸ್ವಾಮಿ ಗುರೂಜಿ.. ಆಯ್ತು ಹೇಳಪ್ಪ
ಅನಂತು…. ಸರಿ ಹಾಗಾದರೆ ನಮ್ಮ ಆಫೀಸಿಗೆ ಬನ್ನಿ ಎಂದು ಒನ್ ಮಿನಿಟ್ ಕೃಷ್ಣ ಗುರೂಜಿಯನ್ನು ಅವರ ಕಚೇರಿಗೆ ಕರೆದುಕೊಂಡು ಹೋಗಿ, ಇದೇ ನಮ್ಮ ಆಫೀಸ್ ನನ್ನ ಹೀನ ಸ್ಥಿತಿಯನ್ನು ನೀವೇ ಕಣ್ಣಾರೆ ನೋಡಿ ಎಂದು ಅವರಿಗೆ ಆಸನ ನೀಡಿ ಕೊಡಿಸುತ್ತಾನೆ.

ಅನಂತನ ಕಚೇರಿ ದೃಶ್ಯ

ಗೋವಿಂದ ಬಾರ್ಲೆ… ಆನಂತುವಿನ ಅಧಿಕಾರಿ.
ಅಧಿಕಾರಿ.. ಅನಂತು, ಅನಂತು, ನಾಳೆ ಬೆಳಗ್ಗೆ ಎಂಟು ಗಂಟೆಗೆ ನನ್ನ ಮನೆಗೆ ಬರಬೇಕು. ಮನೆ ಕೆಲಸ ಹಾಕಿದ್ದೇನೆ ಆಯ್ತಾ. ಆಫೀಸಿನಲ್ಲಿ ನಿನಗೆ ಕೆಲಸವಿಲ್ಲ
ಅನಂತು.. ಸ್ವಾಮಿ ಅದೆಂತ 8:00ಗೆ. ಕಚೇರಿ ಸಮಯ 10:00ಗೆ ಎಂದೂ ರೂಲ್ಸ ಉಂಟು ಅದಲ್ಲದೆ, ಮನೆಯ ಕೆಲಸ ಮಾಡುವುದು ನನ್ನಿಂದ ಸಾಧ್ಯ ಇಲ್ಲ ಮಾರ್ರೆ.. ಎಂದು ಸಿಡಿ ಮಿಡಿ ಗೊಳ್ಳುತ್ತಾನೆ..
ಅಧಿಕಾರಿ ಗೋವಿಂದ ಬಾರ್ಲೆ… ಕಚೇರಿ ಜವಾನ ರಜ ಹಾಕಿದ್ದಾನೆ ಬಟ್ಟೆ ಇಸ್ತ್ರಿ ಮಾಡಬೇಕಲ್ಲ ಗೊತ್ತಿದೆಯೋ ಇಲ್ಲವೋ?
ಅನಂತು… ತುಂಬಾ ಕೋಪದಿಂದ ಹಾಗೋ ಆಗಲ್ಲ ಸ್ವಾಮಿ ಕ್ಷಮಿಸಿ..
ಗೋವಿಂದ ಬಾರ್ಲೆ ಅನಂತವನ್ನು ಉದ್ದೇಶಿಸಿ..
ಏನಯ್ಯ ನನಗೆ ಎದುರುತ್ತರ ಕೊಡೋ ಧೈರ್ಯ ಬಂದಿದೆಯೋ ಸಸ್ಪೆಂಡ್ ಆಗೋಗ್ತ್ಯಾ.. ಹುಷಾರ್! ಗೊತ್ತಲ್ಲ, ನಾನು ರಿಸರ್ವೇಶನ್ ಕ್ಯಾಂಡಿಡೇಟ್. ಸ್ಪೆಷಲಿ ಇನ್ ಗೋರ್ಮೆಂಟ್ ಅದೇನೋ ನೀವುಗಳು ಅಂತೀರಲ್ಲ ಸರ್ಕಾರದ ಮಕ್ಕಳು ಅಂತ ಅದೇ, ಅದೇ ನಾನು.. ದಿನದ 20 ತಾಸು ಪುಸ್ತಕ ಹಿಡಿದು ಬಂದವನಲ್ಲ. ಡೈರೆಕ್ಟ್, ಡೈರೆಕ್ಟ್ ಎಂಟ್ರಿ ನಂದು. ರಿಸರ್ವೇಶನ್ ಕ್ಯಾಂಡಿಡೇಟ್. ಸರ್ಕಾರದ ಫುಲ್ ಸಪೋರ್ಟ್ ನಮಗೆ ಇರುವುದು. ಸುಮ್ಮನೆ ಹೇಳಿದಷ್ಟು ಕೇಳು ಆಯ್ತಾ? ಹೋಗು ಈಡಿಯಟ್.
ಅನಂತು ಗೊಣಗಿಕೊಳ್ಳುತ್ತಾ …ಇಸ್ತ್ರೀ ಮಾಡುತ್ತಿರುತ್ತಾರನೆ. ಎಂತದ್ದು ಮಾರಾಯರೇ ರಿಸರ್ವೇಶನ್ ಎಂಬುವ ಸವಲತ್ತುಗಳನ್ನು ಕ್ವಾಲಿಫಿಕೇಷನ್ ಅಂದುಕೊಂಡಿದ್ದೆ. ಎಂಥ ವಿಶ್ವದ ದಡ್ಡ ಇವ. ಇವನ ಎಗರಾಟಕ್ಕೆ ಕೊನೆ ಎಂದು ಕೃಷ್ಣ ನೀನೇ ಕಾಪಾಡಬೇಕಪ್ಪ ಎಂದು ಕಂಗಾಲಾಗಿ ಇಸ್ತ್ರಿ ಪೆಟ್ಟಿಗೆಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡುಬಿಡುತ್ತಾರನೆ.
ಗೋವಿಂದ ಬರ್ಲಿ ಅಧಿಕಾರಿ.. ಅನಂತವನ್ನು ಉದ್ದೇಶಿಸಿ ಏ ಇಸ್ತ್ರೀ ಆಯ್ತೇನೋ? ಅಮ್ಮೋರು ಎದ್ದಿದ್ದರೆ ಅವರಿಗೆ ನನಗೆ ಬೂಸ್ಟ್ ಕಲಿಸಿಕೊಂಡು ಬಾ… ಎಂದು ಕುಳಿತಲ್ಲಿಯೇ ಆವಾಜು ಹಾಕುತ್ತಾನೆ.

ಕಛೇರಿ ದೃಶ್ಯ…

ಗೋವಿಂದ ಬಾರ್ಲಿ ಅನಂತವನ್ನು ಕರೆದು… ಏ ಅನಂತು ಒಂದು ಹೇಳಿಕೆ ಇದೆ ಬರೆದುಕೊಳ್ಳು ಬಾ
ಅನಂತು… ಗೋವಿಂದ ಬಾರ್ಲಿಯನ್ನು ಉದ್ದೇಶದಲ್ಲಿ ಸರ್, ಸ್ಟೇಟ್ಮೆಂಟ್ ಅಂದ್ರೆ ಹೇಳಿಕೆ ಎಂದು ಅರ್ಥ ಈಗ ನೀವು ಕೊಡುವುದು ಡಿಕ್ಟೇಶನ್ ಅಥವಾ ಉಕ್ತಬರಹ.
ಗೋವಿಂದ ಬಾರ್ಲೆ ಅಸಹನೆಯಿಂದ ಸಿಡಿಮಡಿಕೊಳ್ಳುತ್ತಾ ಅದೇ ಅದೇ ಡಿಕಾಷನ್ ಬರ್ಕೋ ಬಾರಯ್ಯ .
ಗೋವಿಂದ ಬಾರ್ಲೆ ಉಕ್ತಬರಹ ಶುರು ಮಾಡುತ್ತಾನೆ. ಕಚೇರಿಗೆ ಅಗತ್ಯವಾದ ಕುರ್ಚಿ, ಟೇಬಲ್ ಕಳಿಸಲು ಕೋರುತ್ತೇವೆ.. ಒಂದು ತಿಂಗಳ ಒಳಗೆ ತಲುಪಿಸಲು ಬಾರ್ಡರ್ ಮಾಡಲಾಗಿದೆ.
ಅನಂತು… (ಗೋವಿಂದ ಬಾರ್ಲೆನ್ನು ಉದ್ದೇಶಿಸಿ) ಸರ್ ನಾವು ಆರ್ಡರ್ ಮಾಡಲಾಗುವುದಿಲ್ಲ ರಿಕ್ವೆಸ್ಟ್ ಮಾಡಲು ಮಾತ್ರ ಅಧಿಕಾರ ವ್ಯಾಪ್ತಿ ಇರುವುದು, ಹಾಗೂ ಅಷ್ಟಕ್ಕೂ ಬಾರ್ಡರ್ ಅಲ್ಲ ಅದು ಆರ್ಡರ್ ಆಗಬೇಕು. ನಿಮ್ಮ ಭಕ್ತ ಬರಹ ತುಂಬಾ ಗೊಂದಲಮಯವಾಗಿದೆ ಮತ್ತೊಮ್ಮೆ ಡಿಸ್ಟೆನ್ಸ್ ಮಾಡಿ ಎನ್ನುತ್ತಾನೆ.
ಗೋವಿಂದ ಬಾರ್ಲೆ ತುಂಬಾ ಕೋಪದಿಂದ
ಏ ಅದೇ ಕಂಪಸ್ ಮಾಡ್ಕೋ. ಮತ್ತೊಮ್ಮೆ ಡಿಕಾಷನ್ ಮಾಡುವುದಿಲ್ಲ.ನೀನೇ ಡಿಕಾಷನ್ ಸೇರಿಸ್ಕೊ. ನನ್ನನ್ನು ಡಿಸ್ಟರ್ಬ್ ಮಾಡಬೇಡ ನನಗೆ ಮೊಬೈಲ್ ನಲ್ಲಿ ರಮ್ಮೀ ಗೇಮ್ ಆಡಬೇಕು ಮತ್ತೊಮ್ಮೆ ಡಿಸ್ಟರ್ಬ್ ಮಾಡಬೇಡ.
ಅನಂತು.. ಸರ್, ಅದು ಅದೂ ಎಂದು ಪೇಚಾಡುತ್ತಾನೆ.
ಗೋವಿಂದ ಬಾರ್ಲೆ.. ಏನೋ ಹೇಳಿದಷ್ಟು ಕೇಳೋಕಾಗಲ್ವೆ ಸಸ್ಪೆಂಡ್ ಸಸ್ಪೆಂಡ್ ಆಗೋಗ್ತೀಯ ನಾನು ರಿಸರ್ವೇಶನ್ ಕ್ಯಾಂಡಿಡೇಟ್ ಗೊತ್ತಲ್ವೇ
ಇಸ್ತ್ರಿ ಹೀಗಾ ಮಾಡೋದು ಸರ್ಕಾರಿ ಕೆಲಸಕ್ಕೆ ನೀನು ನಾಲಾಯಕ್ ಹೋಗೋ ಮುಖ ತೋರಿಸಬೇಡ.
ಅನಂತು ಗೋವಿಂದ ಬಾರ್ಲೆಯನ್ನು ಉದ್ದೇಶಿಸಿ
ಸರ್ ಸಸ್ಪೆನ್ಸನ್ಗೆ ರೀಸನ್ ಕೊಡಿ ಎಂದು ಕಡು ಕೋಪದಿಂದ ಕೇಳುತ್ತಾನೆ.
ಗೋವಿಂದ ಬಾರ್ಲಿ … ನೀನು ಇಸ್ತ್ರೀ ಸರಿ ಮಾಡಿರುವುದಿಲ್ಲ ಹೀಗಾಗಿಯೇ ನಿನ್ನನ್ನು ಸಸ್ಪಂಡ್ ಮಾಡಲಾಗಿದೆ ಎಂದು ಬರೆದು ಅವನ ಮುಖಕ್ಕೆ ಎಸೆಯುತ್ತಾನೆ.
ಅನಂತು ಪೆಚ್ಚುಮೋರೆ ಹಾಕಿಕೊಳ್ಳುತ್ತಾ ಸಸ್ಪೆಂಡ್ ಲೆಟರ್ ಹಿಡಿದು ಕೊಂಡು ಹೊರ ಬರುತ್ತಾನೆ.
ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ ( ಅನಂತವನ್ನು ಉದ್ದೇಶಿಸಿ) ನಿನ್ನ ಕಚೇರಿ ಸಮಸ್ಯೆಯನ್ನು ನಾನು ಬಗೆಹರಿಸಿಕೊಡುತ್ತೇನೆ. ಅಲ್ಲಿಯವರೆಗೂ ನೀನು ಸಾಯುವುದಿಲ್ಲವೆಂದು ನನಗೆ ಭಾಷೆ ಕೊಡು ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾನೆ.
ಅನಂತು ಗುರೂಜಿಯನ್ನು ಉದ್ದೇಶಿಸಿ,…. ಸರಿ ಆ ದೇವರು ನೀವು ನನಗೆ ಸಾಕ್ಷಾತ್ ಕೃಷ್ಣ ಪರಮಾತ್ಮನನ್ನು ಕಳಿಸಿಕೊಟ್ಟಿದ್ದಾನೆ ಎಂದು ನಾನು ಭಾವಿಸುತ್ತೇವೆ. ಸ್ವಾಮಿ ನಿಮ್ಮ ಮಾತು ನನಗೆ ಗೀತೆಯಂತೆ. ಪಾಲಿಸುವೆ ನನ್ನ ಸಮಸ್ಯೆಯನ್ನು ಪರಿಹರಿಸಿ ಎಂದು ಗುರೂಜಿ ಕಾಲಿಗೆ ಬೀಳುತ್ತಾನೆ.

ದೃಶ್ಯ 5

ಜನಾರ್ದನ (ವಿದ್ಯಾರ್ಥಿ) ನೇಣು ಕುಣಿಕೆಗೆ ಕೊರಳೊಡ್ಡುತ್ತಿರುವ ಪ್ರಯತ್ನದಲ್ಲಿರುತ್ತಾನೆ.
ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ… (ಜನಾರ್ದನನ್ನು ಉದ್ದೇಶಿಸಿ..)
ಏ ತಮ್ಮಾ ಯಾಕೋ ಸಾಯೋಕೆ ಹೊಂಟಿ. ನಿನಗೇನಾಗ್ಯಾದ ಈ ವಯಸ್ಸಿನಾಗ ಸಾಯೋವಂತಾದ್ದು..
ಜನಾರ್ದನ.. ಸ್ವಾಮಿ ನಾನೊಬ್ಬ ಪದವೀಧರ ವಿದ್ಯಾರ್ಥಿ.
ನನ್ನ ಸಾವಿನ ವಿಚಾರ ನಿಮ್ಮ ರೇಂಜಿಗೆ ಅರ್ಥವಾಗೊಲ್ಲ ಬಿಡಿ.. ನೀವೋ ನೋಡೋಕೆ ದೊಡ್ಡ ಸಂತರಂತೆ ಕಾಣ್ತೀರೀ ಈ ಲೌಖಿಕ ನಿಮಗೆ ಅರ್ಥ ಆಗಲ್ಲ..
ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ… ಹೇ ಸರಸ್ವತಿ ಪುತ್ರ, ನಿನ್ನ ಲೌಕಿಕನೂ ನನಗೆ ಅರ್ಥವಾಗುತ್ತೆ ನಿನ್ನ ಲೌ ಸಹ ಅರಿವಾಗುತ್ತೆ.. ನಿನ್ನ ಸಮಸ್ಯೆ ನಾ ಪರಿಹರಿಸುವೆ ಕೆಳಗೆ ಇಳಿದು ಬಾ…
ಜನಾರ್ದನ ಕೆಳಗಿಳಿದು ಬರುತ್ತಾನೆ ಸಪ್ಪಗೆ ಮೊರೆ ಹಾಕಿ ತಲೆಬಗ್ಗಿಸಿ

ಜನಾರ್ದನನ ಮನೆಯ ದೃಶ್ಯ

ಮನೆಯಲ್ಲಿ ರಿಟೈರ್ಡ ಆದ ಅಪ್ಪ ಗಂಗಾಧರ….. ಕಾಫೀ ಕುಡಿಯುತ್ತಾ ಕುಳಿತು ತನ್ನಲ್ಲಿ ತಾನು ಸಿಟ್ಟಿನಿಂದ ಹೀಗೆ ಹೇಳಿ ಕೊಳ್ಳುತ್ತಿದಾನೆ… ನೂರೆಂಟು ದೇವರ ಹರಕೆ ಹೊತ್ತು ಈ ನನ್ ಮಗನನ್ನು ಪಡೆದೆ. ಈಗ ಅದೇ ನೂರೆಂಟು ದೇವರಿಗೆ ಹರಕೆ ಹೊತ್ತು ಈ ನನ್ ಮಗನನ್ನು ಪ್ರಯೋಜಕನ ಮಾಡು ಎಂದು ಹರಕೆ ಹೊರಬೇಕು ಇಲ್ಲಾ ಸಾವಾದರೂ ಬೇಗ ಕೊಡು ಎನ್ನ ಬೇಕು.. ಛೇ ಎಂದು ಕೆಮ್ಮುತ್ತಾನೆ.
ಎದುರಿಗೆ ಅನಿತಾ (ಜನಾರ್ದನನ ಹೆಂಡತಿ) ಸ್ಮಾರ್ಟ್ ಫೋನ್ ಜಬರ್ದಸ್ಥ ನೋಡುತ್ತಾ ಗಹ ಗಹಿಸಿ ಜಗದ ಪರಿವಿಲ್ಲದಂತೆ ವರ್ತಿಸುತ್ತಿರುತ್ತಾಳೆ.
ಅನಿತಾ… ಮಾವ ಈ ದಿನ ಅಡುಗೆ ಮಾಡಲು ಆಗುವುದಿಲ್ಲ.
ಗಂಗಾಧರ.. ಯಾಕಮ್ಮಾ ನಿನ ಗಂಡ ಅಯೋಗ್ಯ ನ ಪರಮೀಷನ್ ಇದ್ರನಾ ಬ್ಯಾಳೀ ಕುದೀತದ ಅಂದದೇನು
ಮದುವೀ ಆಗದ ಅಕ್ಕ ಇನ್ನೂ ಮೂಲಿಗೆ ಬಿದ್ದಾಳ.. ಆ ಅರಿವಿಲ್ದ ನಿನ್ನ ಕಟ್ಕೋಂಡು ಬಂದಾನ ಅದೇನು ಧರಿದ್ರ ಲೌ ಎಂತದ್ದೋ ಎಂದು ಕಾಪೀ ಲೋಟ ಬೀಸಿ ಒಗೆಯುತ್ತಾನೆ.
ಅನಿತಾ…. ಮಾವಾ ಯಾವಾಗ್ಲೂ ಅದನ್ನೇ ಒದ್ರಬ್ಯಾಡ್ರೀ ವಯಸ್ಸಾಗ್ಯಾದ ಮೂಲ್ಯಾಗ ಮಕ್ಕೋಳ್ರೀ.. ಈ ಧರಿದ್ರ ಮನ್ಯಾಗ ಗ್ಯಾಸ್ ಖಾಲೀ ಆಗ್ಯಾದ ಅಡುಗೀ ಹ್ಯಾಂಗ ಮಾಡ್ಲೀ.. ಎಂದು ಕನ್ನಡಿ ಮುಂದೆ ಕೂದಲು ನೇವರಿಸುತ್ತಾ ನನ್ನ ಅಂದ ಚಂದಕ್ಕ ಬಾಲೀವುಡ್ ಹಾಲಿವುಡ್ ಕ್ಯೂ ನಿಂತ್ಕೋತಿದ್ರು ನನ್ನ ಹಣೇಬರಹ ನಿಮ್ಮಗನ ಮುಸಡೀ ನೋಡಿ ಬಿದ್ದೀನಿ ಎಂದು ಕಾಪೀ ಲೋಟ ತೆಗೆದು ಮಾರೀ ಸೆಟಕೊಂಡು ಒಳಹೋಗುತ್ತಾಳೆ.
(ಜನಾರ್ದನ ಮನೆ ಒಳಗಡೆ ಬರುತ್ತಿದ್ದಾನೆ) ಗಂಗಾಧರ… ಜನಾರ್ದನನ್ನು ಉದ್ದೇಶಿಸಿ.
ಬಾರಪ್ಪಾ ಬಾ ನಿನ್ನ ಹೇಂಡ್ತೀ ಕೊಪ್ಪರಿಗೆ ಅನ್ನ ಮಾಡ್ಯಾಳ ತಿಂದು ಚಕ್ಕಂದ ಆಡ್ವಂತೀ ನಾವ್ ನೋಡ್ಕೋತ ಕೂತ್ಕಂತೀವಿ.. ನಾಚಿಕೆ ನಾಚಿಕೆ ಆಗಬೇಕು ನಿನಗೆ ಹತ್ತು ಪೈಸೆ ದುಡಿಯೋ ತಾಕತ್ ಇಲ್ಲ ಚಕ್ಕಂದಕ್ಕೆ ಹೆಂಡ್ತೀ ಬೇಕು ನನ್ನ ಕರ್ಮ… ಕೂಲೀ ನಾಲೀ ಮಾಡೀ ಕೂಡಿಟ್ಟ ದುಡ್ಡೆಲ್ಲ ನಿನ್ನ ಶೋಕಿಗೇ ಖರ್ಚು ಮಾಡಿದೆ… ಮದುವೆ ಆಗೋ ಅಕ್ಕ ನನಗಿಂತ ಮೊದಲು ಮದುವೀ ಮಾಡಬೇಕು… ಅರಿವಿಲ್ದೇ ತಮ್ಮ ಆದೋನು ಈ ಹಾಲಿವುಡ್ ಕ್ವೀನ್ನ ಕಟ್ಟ್ಕಂಡ್ ಬಂದೀ.. ಚಕ್ಕಂದ ಆಡ್ತಾಕೂಡು ನಾ ದುಡುಕ್ಕೊಂಡು ಬರ್ತಿನಿ ಎಂದು (ಸಿಟ್ಟಿನ ಭರದಲ್ಲಿ ಕುಳಿತ ಚೇರ್ ಎತ್ತಿ ಹಾಕುತ್ತಾನೆ)
ಜನಾರ್ದನ… ಅಪ್ಪಾ ಪದೇ ಪದೇ ಅದೇ ಹೇಳ್ಬೇಡ.. ನನ್ನಿಂದ ತಪ್ಪಾಗಿದೆ ಒಪ್ಕೋತೀನಿ ಕೆಲಸ ಕೇಳೋಕೆ ಹೋದರೆ ಎಕ್ಸಪೀರಿಯನ್ಸ ಕೇಳ್ತಾರೆ.. ಯಾರಾದೃ ಕೆಲಸ ಕೊಟ್ರೆ ತಾನೆ ಎಕ್ಸಪೀರಿಯನ್ಸ ಆಗೋದು..( ಹತಾಶೆ ಯಿಂದ ನೆಲಕ್ಕೆ ಒರಗುತ್ತಾನೆ)
ಗಂಗಾಧರ… ಮತ್ತ ನಿನ್ನ ಸಾಕೋದಲ್ದೇ ನಿನ್ನ ಹೇಂಡ್ತೀನೂ ಸಾಕ್ಬೇಕೇನು? ಬೆಳೆದು ನಿಂತ ಅಕ್ಕ ಅದಾಳ ಅನ್ನೋ ಖಬರ್ ಇರದ ಈಕೀನ ಕಟ್ಕಂಡ ಬಂದು ಮನ್ಯಾಗಿಟ್ಟೀ. ತಂದೀ, ತಾಯೀ ಅನ್ನೋ ಗೌರವ ಇದ್ದಿದ್ರೆ ಹೀಂಗಾ ಮಾಡ್ತಿದ್ದಿ. ಅದಲ್ದೇ ರಿಜಿಸ್ಟ್ರಾರ್ ಮದುವೆ ಮಾಡ್ಕೋಂಡು ಬಂದೆ. ಎಲ್ಲಾದೃ ಹೋಗಿ ಸಾಯಿ.. ಇನ್ನು ಯಾಕ ನಿಂತೀ… ಎಂದು ಕಿರುಚಾಡುತ್ತಾನೆ.
ಜನಾರ್ದನ… ಅಪ್ಪ ತಾಳ್ಮೆ ಇರಲಿ ಕೆಲಸ ಹುಡುಕ್ತಿದ್ದೀನಿ.. ಅಕ್ಕನ ಮದುವೆನೂ ಮಾಡ್ತೀನಿ.
ಗಂಗಾಧರ… ಏಯ್ ಹೋಗೋ ಹೋಗು ತೊಲಗಾಚೆ ನನ್ ಕಣ್ ಮುಂದೆ ನಿಲ್ಲಬೇಡ. ಇನ್ನೊಂದು ನಿಮಿಷ ನನ್ ಕಣ್ಣಿಗೆ ಕಂಡಿದ್ದೆ ಆದರೆ ನಾ ಉರ್ಲು ಹಾಕೋತೀನಿ
ಮನಿಗೆ ಒಳ್ಳೆ ಮಗಾ ಆಗಲಿಲ್ಲ. ಸುಡುಗಾಡಿಗೆ ಹೆಣಾ ಆಗ್ಲಿಲ್ಲ ಭೂಮಿಗೆ ಭಾರ ಕೂಳಿಗೆ ಧಂಡ . ಎಂದು ಬಾಗಿಲು ದಡಾರನೆ ಹಾಕೀ ಹೊರಗೆ ಹೋಗುತ್ತಾನೆ
ಜನಾರ್ದನ ಬೇಸರದಿಂದ ಹೆಂಡತಿಯ ತಲೆ ನೇವರಿಸಿ ಹೊರಟು ಹೋಗುತ್ತಾನೆ.

ದೃಶ್ಯ 6

ರೈತ ಪರಸಪ್ಪ ನೇಣಿಗೆ ಕೊರಳೊಡ್ಡುತ್ತಿರುವ ದೃಶ್ಯ..
ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ.. (ಪರಸಪ್ಪನನ್ನು ಉದ್ದೇಶಿಸಿ.) ಯಜಮಾನ್ರೇ ಕೆಳಗಿಳಿದು ಬನ್ನಿ ಯಾಕೆ ಸಾಯೋದು..
ಪರಸಪ್ಪ.. ಸ್ವಾಮಿ ನಾವು ರೈತರು ಬದುಕಿದ್ದೂ ಸತ್ತಂತೆ. ನಮ್ ಉಸಾಬರಿ ನಿಮಗ್ಯಾಕರೀ
ಒನ್ ಮಿನಿಟ್ ಕೃಷ್ಣ ಸ್ವಾಮಿ ಗುರೂಜಿ… ಹ್ಮೂಂ. ನಿನ್ನ ದುಃಖ ನನಗೆ ಅರ್ಥವಾಗುತ್ತೆ ನೀ ಸಾಯ್ಬೇಡ ರೈತ ದೇಶದ ಕಣ್ಣು ಇದ್ದಂಗೆ.. ಭಾಷೆ ಕೊಡುಸಾಯೊಲ್ಲ ಅಂತ. ನಿನ್ನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ..
ರೈತ ಪರಸಪ್ಪ.. ಹ್ಮೂಂ ಎಂದು ನಿಟ್ಟುಸಿರು ಬಿಟ್ಟು ಕೆಳಗಿಳಿಯುತ್ತಾನೆ.. ಸ್ವಾಮೀ ನಾನು ಒಬ್ಬ ಬಡ ರೈತ ಕೆಲವು ದಿನಗಳ ಹಿಂದೆ ನಡೆದ ಘಟನೆ
ಕಮಿಷನ್ ಏಜೆಂಟ್ ಗುಣವಂತ… ಪರಸಪ್ಪ ಪರಸಪ್ಪಾ ಎಲ್ಲಿದ್ದೀಯೋ ಗೆಳೆಯಾ..
ಪರಸಪ್ಪ… ಏ ಯಾರ್ರೀ ನೀವು ಮೊದಲನೇ ಸಲ ನೋಡ್ತಿರೋದು ನಮ್ಮನ್ನ ಗೆಳೆಯಾ ಅಂತೀರ ನೀವ್ಯಾರೋ ಅಂತ ಗೊತ್ತಾಗುತ್ತಿಲ್ಲ.
ಗುಣವಂತ… ನಾವು ರೈತರ ಪರ ಕೆಲ್ಸ ಮಾಡೋ ಕಮಿಷನ್ ಏಜೆಂಟ್ ಹಾಗಾಗೀ ನೀವು ಗೆಳೆಯರೇ.
ರೈತ ಪರಸಪ್ಪ.. ಹ್ಮೂಂ ಸರಿ ನನ್ನಿಂದೇನಾಗಬೇಕಿದೆ ಹೇಳಿ..
ಗುಣವಂತ… ಏನಿಲ್ಲ ಪರಸಪ್ಪಾ ನಮ್ ಸಾಹೇಬರು ನಿನ್ ಹೊಲದಾಗಿನ ಬೆಳೀ ನೋಡಿದರು ಬಾಳ ಚಂದ ಬೆಳೆ ಬಂದಾದ ಅದಕ್ಕ ಮುಂಗಡ ಹಣ ಕೊಟ್ಟು ಕೊಂಡು ಕೊಳ್ಳುವಂತೆ ನನ್ನ ಕಳಿಸ್ಯಾರ.
ರೈತ.. ಹೌದಾ ಒಳ್ಳೇದು ಇನ್ನೂ ಕಟಾವಿಗೆ ಬಂದಿಲ್ಲ ಆದೃ..
ಗುಣವಂತ.. ಹ್ಮೂಂ ಪರಸಪ್ಪಾ ನಿನ್ನ ಅದೃಷ್ಟ ಚೆನ್ನಾಗಿದೆ. ತೊಗೋ ಈ ಎರಡು ಲಕ್ಷ ಈ ಅಗ್ರಿಮೆಂಟ್ಗೆ ಸಹಿ ಹಾಕು.
ಪರಸಪ್ಪ.. ಸ್ವಾಮಿ ನೀವು ದೇವರು ಬಂದ ಹಾಗೆ ಬಂದೀರೀ ಆ ಬೀರಪ್ಪಾನ ಈ ರೂಪದಾಗ ಕಳಿಸ್ಯಾನ ಅಂತೂ ನಂಬಿದ ದ್ಯಾವೃ ಕೈ ಬಿಡಲಿಲ್ಲ.. ಆದ್ರ ನಾ ಹೆಬ್ಬೆಟ್ಟು.
ಗುಣವಂತ.. ಹಾಗಾದ್ರ ಇನ್ನೂ ಚಲೋ ಆತು ನೋಡು ಈಗ ಟೈಮು ಚಲೋ ಅದ ಈ ಅಗ್ರಿಮೆಂಟ್ಗೆ ಹೆಬ್ಬೆಟ್ಟು ಒತ್ತು. ಬೆಳೆ ಹರಾಜು ದಿನಾಂಕ ತಿಳಿಸ್ತೇನೆ ಉಳಿದಿದ್ದು ಏಪಿ ಎಂಸೀ ಹತ್ರ ಕೊಡ್ತಾರ ಅಲ್ಲೇ ಬಂದುಬಿಡಪ್ಪಾ ನಮಸ್ಕಾರ ಎಂದು ಹೊರಟು ಹೋಗುತ್ತಾನೆ..

ಏಪಿಎಂಸಿ ದೃಶ್ಯ..

ದಲ್ಲಾಳಿಗಳು.. ಕ್ವಿಂಟಲ್ಗೆ ಸಾವಿರ. ಒಂದು ಸಾವಿರದ ನೂರು, ಒಂದ ಸಲ, ಎರಡು ಸಲ, ಮೂರು ಸಲ,
ಪರಪ್ಪನ ಬೆಳೆ ಅತಿ ಹೆಚ್ಚು ಹರಾಜಾಗೈತೀ ಎಂದು ಹರ್ಷ ವ್ಯಕ್ತಪಡಿಸುತ್ತಾರೆ
ಗುಣವಂತ.. ನೋಡೋ ಗೆಳೆಯಾ ನೀ ಬೆಳೆದ ಬೆಳೆಗೆ ಆಗ ಚಲೋ ಇತ್ತು ಈಗ ಗುಣಮಟ್ಟ ಕಡಿಮೆ ಆಗ್ಯಾದ. ಹಾಗಾಗಿ ಈ ರೇಟು ಸಿಕ್ಯಾದ.. ಈಗ ಸಿಕ್ಕಿರೋ ಬೆಲೆ ಉಳಿದವ್ರಿಗೆ ಹೋಲಿಸಿದರೆ ನಿನಗೆ ಹೆಚ್ಚು. ಆದ್ರ ನೀನೇ 50 ಸಾವಿರ ಮರಳಿ ಕೊಡಬೇಕಾಗುತ್ತದೆ.. ಯಾಕ ಅಂದ್ರೆ ಮುಂಗಡ ಹಣ ತುಸು ಹೆಚ್ಚೇ ಕೊಟ್ಟೀವಿ ನಿನ್ಗ.. ಹಾಗೂ ಕೊಡೋಕೆ ಆಗೊಲ್ಲ ಅಂದ್ರ ಎರಡು ವರುಷ ಈ ಹೊಲದ ಮ್ಯಾಲಿನ ಹಕ್ಕು ನಮ್ದಾಗುತ್ತದೆ.. ನೀ ಉಳಿಮೆ ಮಾಡೋಕೆ ಆಗೊಲ್ಲ… ಎರಡು ವರ್ಷಗಳ ನಂತರ ಬಡ್ಡೀ ಅಸಲು ಮುಟ್ಟಿದ ಮ್ಯಾಲೆ ಈ ಹೊಲ ನಿನ್ನದಾಗುತ್ತದೆ. ತಿಳೀತೇನು.. ಹಾಗಂತ ನೀ ಅಗ್ರಿಮೆಂಟ್ಗೆ ಸಹಿ ಹಾಕೀ ಒಪ್ಪಿಗೆ ಪತ್ರ ಬರೆದು ಕೊಟ್ಟೀ ನೋಡು ಎಂದು ಅವನ ಕೈಲಿರಿಸಿ ಹೊರಟು ಹೋಗುತ್ತಾರೆ.

ದೃಶ್ಯ 7

ಕೃಷ್ಣ ಸ್ವಾಮಿ ಗುರೂಜಿ ಎಲ್ಲರಿಗೂ ದೊಡ್ಡ ಆಲದ ಮರದ ಕೆಳಗೆ ಸೇರಲು ಹೇಳಿದ್ದು ನೆನಪಾಗಿ ಮುಂಜಾನೆ 6 ಘಂಟೆಗೆ ಸೇರಿರುತ್ತಾರೆ.

ಎಲ್ಲರೂ ಒಬ್ಬರೊನೊಬ್ಬರು ಮುಖ ಮುಖ ನೋಡಿಕೊಳ್ಳ್ಳುತ್ತಿದ್ದಾರೆ. ಎಲ್ಲರೂ ನಾಚಿಕೆಯಿಂದ ತಲೆ ತಗ್ಗಿಸಿದ್ದಾರೆ. ಅಷ್ಟರಲ್ಲಿ ಬಾನಲ್ಲಿ ಸೂರ್ಯ ಉದಯಿಸುವ ದೃಶ್ಯ ಕಾಣಿಸುತ್ತದೆ. ಸೂರ್ಯನ ಸೊಬಗು ಪ್ರಕೃತಿಯ ವಾತಾವರಣ ಅವರಿಗೆ ಹೊಸ ಆಹ್ಲಾದವನ್ನುಂಟು ಮಾಡುತ್ತಿದೆ ಎಲ್ಲರ ಮೊಗದಲ್ಲೂ ಒಂದು ರೀತಿಯ ಮಂದಹಾಸ..

ಅಷ್ಟರಲ್ಲಿ ಅವರಿಗೊಂದು ಅಶರೀರ ವಾಣಿ ಕೇಳಿಸುತ್ತದೆ…

ಗೆಳೆಯರೇ

ನೀವೆಲ್ಲ ಒಂದು ಕಡೆ ಸೇರಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿದ್ದೀರಿ. ಈ ಪ್ರಪಂಚದಲ್ಲಿ ಸಮಸ್ಯೆಗಳಿಲ್ಲದ ಜನರಿಲ್ಲ. ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂಬುದಿದೆ. ಆತ್ಮಹತ್ಯೆಯೊಂದೇ ಸಮಸ್ಯೆಗೆ ಪರಿಹಾರವಲ್ಲ.. ಈವರೆಗೂ ಪ್ರಕೃತಿಯಲ್ಲಿ ಯಾವ ಪ್ರಾಣಿಯು ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದು ಪ್ರಕೃತಿ ಸತ್ಯ.. ಸಮಸ್ಯೆ ಹುಟ್ಟಿದಲ್ಲಿಯೇ ಪರಿಹಾರವು ಹುಟ್ಟಿರುತ್ತದೆ.. ಆತ್ಮಹತ್ಯೆಗೆ ತೊಡಗುವ ಮುನ್ನ ಒಂದು ನಿಮಿಷ ಆಲೋಚಿಸಬೇಕು. ನೀವು ಒನ್ ಮಿನಿಟ್ ಆಲೋಚಿಸಿದಿರಿ.. ನಾನು ನಿಮಗೆ ಕೃಷ್ಣ ಸ್ವಾಮಿ ಗುರೂಜಿಯಾಗಿ ಕಾಣಿಸಿಕೊಂಡೆ. ನಾನು ಬೇರೆಯಲ್ಲ ಅರಿವೇ ಗುರು.. ಇನ್ನು ನಿಮ್ಮ ನಿಮ್ಮ ಮನೆಗಳಿಗೆ ಹೋಗುವಂತವರಾಗಿ ನಿಮಗಾಗಿ ಒಳ್ಳೆಯ ಶುಭ ಬಾಗಿಲಲ್ಲಿ ಕಾಯುತ್ತಿರುತ್ತದೆ...” ಎಂದು ಅಶರೀರ ವಾಣಿ ನಿಲ್ಲುತ್ತದೆ..

ಎಲ್ಲರೂ ತಮ್ಮ ತಮ್ಮ ಕಾಯಕ ಮನೆ ಹೆಂಡತಿ ನೆನಪಿಸಿಕೊಂಡು ಹೊರಡುತ್ತಾರೆ.. ನಾಟಕಕ್ಕೆ ತೆರೆಬೀಳುತ್ತದೆ…

ಕೆ. ವಿ. ಪವನ್ ಕುಮಾರ್

Related post

Leave a Reply

Your email address will not be published. Required fields are marked *