ಜುಲೈ ೧ ರಾಷ್ಟ್ರೀಯ ವೈದ್ಯರ ದಿವಸ. ಕುಮಾರಿ ನಿಧಿ ನಿಶ್ಚಲ್ ರವರು ತಮ್ಮ ಬಾವುಕ ಮನಸ್ಸಿನಿಂದ ಕವಿತೆಯ ಮೂಲಕ ಧನ್ಯವಾದಗಳನ್ನು ತಿಳಿಸಿರುತ್ತಾರೆ.
ನಿಸ್ವಾರ್ಥ ಜೀವ
ಎಂದಾದರೂ ಈ ರೀತಿಯ ದಿನವೂ ಬರುತ್ತದೆ
ಎಂದು ನೀವು ಯೋಚಿಸಿದ್ದೀರಾ ?
ಇಲ್ಲ ಯಾರು ಯೋಚಿಸಲಿಲ್ಲ!
ಹಿಪೊಕ್ರೇಟಿಸ್ ಯಾವುದೇ ದೈವಿಕನಾಗಿರಲಿಲ್ಲ
ಅಥವಾ ಫ್ಲಾರೆನ್ಸ್ ನೈಟಿಂಗೇಲ್ ಕೂಡ ಅಲ್ಲ…
ನಿಮಗೆ ತಿಳಿಸಿದ್ದು ಇಷ್ಟೆ
ಜೀವನ ಪವಿತ್ರ – ಜೀವನ ಅಮೂಲ್ಯ
ಅದನ್ನು ಸಂರಕ್ಷಿಸಿ, ಗೌರವಿಸಿ, ಆಚರಿಸಿ
ಇಂದು ನೀವು ನಿಮ್ಮ ಕೈಯಲ್ಲಿ ಇಡಿದಿರುವುದು
ಇದನ್ನೇ…
ಆದರೆ ಉಪದ್ರವವು ಎಲ್ಲೆಲ್ಲೂ ಇದೆ
ಅದು ಇಲ್ಲಿದೆ ಅದು ಅಲ್ಲಿಯೂ ಇದೆ
ಅದು ಎಲ್ಲೆಡೆ ಸ್ಪೋಟಗೊಂಡಿದೆ.
ಇಂದು, ನೀವು ಬರಿ ವೈದ್ಯರಲ್ಲ
ಅಥವಾ ನರ್ಸ್ ಮಾತ್ರ ಅಲ್ಲ …
ನೀವು ಜೀವನಕ್ಕೆ ಜೀವನ,
ಅಮೂಲ್ಯ ಜೀವನ
ಅಮೂಲ್ಯ ಜೀವನಕ್ಕೆ
ನಿಮ್ಮ ಪ್ರಮುಖ ಪಾತ್ರವು ಅದರ
ಅಮೂಲ್ಯ ಆತ್ಮದೊಂದಿಗೆ ಕರುಗುತ್ತದೆ.
ನೀವು ಇಂದು ಒಳಗೆ ಹೋದಾಗ
ನಿಮ್ಮನ್ನು ಬಹು-ಲೇಯರ್ಡ್ ಪಿಪಿಇ ನಲ್ಲಿ ಸುತ್ತಿಡಲಾಗಿದೆ
ತಲೆಯಿಂದ ಕಾಲಿನವರೆಗೆ ಬಿಗಿಯಾಗಿದ್ದರೂ
ಒಂದೇ ಆಲೋಚನೆಯು ಮನಸಿನಲ್ಲಿ
ಸರ್ವೋಚ್ಚವಾಗುವುದು
‘ಈ ಜೀವ ನನ್ನ ಕೈಯಲ್ಲಿದೆ’
ಇದನ್ನು ಮೀರಿ ಏನೇ ಆದರೂ ಮುಖ್ಯವಲ್ಲ
ನೀವು ಪ್ರತಿದಿನ ಉಳಿಸುವ ಅಮೂಲ್ಯ ಜೀವಗಳಿಗೆ
ಧನ್ಯವಾದಗಳು.
ನಿಸ್ವಾರ್ಥ ಸೇವೆಯನ್ನು ನಿಮ್ಮ ಸ್ವಂತ ಆತ್ಮದ
ಮುಂದೆ ಇಡುವುದರಿಂದ,
ಹಸಿವು ಬಾಯಾರಿಕೆ ಚಿಂತೆಗಳನ್ನು ದೂರವಿಟ್ಟು
ಸೇವೆ ಸಲ್ಲಿಸುವುದಕ್ಕೆ ಧನ್ಯವಾದಗಳು
ನಿಮ್ಮ ಹೋರಾಟವನ್ನು ನೀವು ಕೊನೆಯವರೆಗು
ತಗೆದುಕೊಳ್ಳುವುದನ್ನು ನಾವು ನೋಡುತ್ತೇವೆ,
ನಿಮಗೆ ತಿಳಿದಿರುವವೆರೆಗೂ ನೀವು ಅದನ್ನು
ಸಹಿಸಲಾರಿರಿ ಎಂಬುವುದನ್ನು ತಿಳಿದಿದ್ದೇವೆ,
ಶಾಶ್ವತವಾಗಿ ಕಳೆದುಹೋದ ಯುದ್ಧಗಳಿಗೆ
ನಿಮ್ಮೊಂದಿಗೆ ಅಳುತ್ತೇವೆ,
ಏನಾಗಲಿ ನಾವು ನಿಮ್ಮೊಂದಿಗೆ ಇರುತ್ತೇವೆ.
ಈ ಯುದ್ಧವನ್ನು ಹೋರಾಡಿ ಗೆಲ್ಲಬೇಕು
ಮತ್ತು ಜೀವನದ ಜೊತೆಗೆ ಮುಂದುವರಿಯಬೇಕು.
ನಿಧಿ ನಿಶ್ಚಲ್
1 Comment
Great work Nidhi!