ನೀ ನನ್ನ ಕಡಲು
ನೀ ಸನಿಹವಿರಲು ನಾ ತುಂಬಿ ಹರಿವ ಹೊನಲು
ಇನ್ನೆಷ್ಟು ಜನುಮ ಕಳೆದರು ನೀ ನನ್ನ ಕಡಲು
ಬೀಳೋ ಮಳೆಹನಿಯ ಮಾಲೆ
ನೀ ಕಳಿಸೋ ಒಲವ ಕರೆಯೋಲೆ
ನಿಯತಿಯ ಆಣತಿಯಂತೆ ಜೊತೆಯಾದವ
ಈ ಬದುಕಿಗೊಲಿದುಬಂದು ಬಣ್ಣ ತುಂಬಿದವ
ನಿನ್ನಿರುವೆ ಉಸಿರನು ಜೀಕುವ ಜೋಗುಳ
ನೀನಿರುವ ಎಲ್ಲ ಕ್ಷಣಗಳೆನಗೆ ಶುಭ ಮಂಗಳ

ಪಲ್ಲವಿ ಚೆನ್ನಬಸಪ್ಪ