ಪಯಣ
ಅರಿವಿರದೆ ಸಾಗುತಿದ್ದ ಬದುಕಿಗೆದುರಾದ
ಅನಿರೀಕ್ಷಿತ ತಿರುವು ನೀನು,
ಆ ತಿರುವಲೇ ಮೈಮರೆತು ನಿಂತ
ಅಭಿಸಾರಿಕೆ ನಾನು..!
ದೀರ್ಘ ಮಾತುಗಳ ಮೇಳ ಬೇಕಿಲ್ಲ
ಭಾವಗಳ ಸೌರಭ ಮನ ತಟ್ಟಿದೆಯಲ್ಲ
ಮಾಂಗಲ್ಯಕ್ಕೆ ತಲೆಬಾಗಿ
ಕಾಲುಂಗುರದ ಹೆಜ್ಜೆಗಳೊಟ್ಟಿಗೆ
ಸಪ್ತಪದಿಗೆ ಜೊತೆಯಾಗಿ
ಅರುಂಧತಿ ನಕ್ಷತ್ರವ ಕಾಣಲು
ನೋಟಗಳೆರಡು ಬೆರೆತು
ಬ್ರಹ್ಮಗಂಟಿನ ಮಹತ್ವವ ಅರಿತು
ಕಿರುಬೆರಳ ಹಿಡಿದು ಬಹುದೂರ ಸಾಗೋಣ
ಉಸಿರ ಹರಿವಲಿ ಜಗವ ಮರೆಯೋಣ..

_ಪಲ್ಲವಿ ಚೆನ್ನಬಸಪ್ಪ