ಪಾರ್ಕ್ ಜಿ-ಮಿನ್ BTSನ ಇನ್ನೊಂದು ಕಾಮನಬಿಲ್ಲಿನ ಬಣ್ಣದಂತವನು. ಇವನ ಸ್ಟೇಜ್ ಹೆಸರು ಜಿಮಿನ್.
26 ವರ್ಷ ವಯಸ್ಸಿನ ಜಿಮಿನ ಹುಟ್ಟಿದ್ದು ಅಕ್ಟೋಬರ್ 13, 1995ರಂದು.
ತಂದೆ, ತಾಯಿ ಮತ್ತು ತಮ್ಮನನ್ನು ಒಳಗೊಂಡ ಚಿಕ್ಕ ಕುಟುಂಬ.
ಪುಟ್ಟ ಹುಡುಗನಾಗಿದ್ದಾಗ ಜಿಮಿನ್ ತಾನು ಬೆಳೆದು ದೊಡ್ಡವನಾದ ಮೇಲೆ ಹಾಡುಗಾರನಾಗುವೆ ಇಲ್ಲಾಂದ್ರೆ ಪೋಲೀಸ್ ಆಗುವೆ ಎಂದು ಕನಸು ಕಾಣುತ್ತಿದ್ದ. ವಿಧಿ ಆತನು ಹಾಡುಗಾರನಾಗಬೇಕೆಂದು ಹಾರೈಸಿತು.
ಜಿಮಿನ್ ತನ್ನ ಶಾಲಾ ದಿನಗಳಲ್ಲಿ ಡ್ಯಾನ್ಸ್ ಬಗ್ಗೆ ಅಪಾರ ಒಲವು ಇರಿಸಿಕೊಂಡಿದ್ದನು. ಅವನ ಡ್ಯಾನ್ಸ್ ಟೀಚರ್ ಒಬ್ಬರು ಬ್ಯಾಂಡ್ ಕಂಪನಿಗಳಿಗೆ ಆಡಿಷನ್ ಕೊಡು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ 2012ರಲ್ಲಿ ‘ಬಿಗ್ ಹಿಟ್ ಎಂಟರ್ಟೈನ್ಮೆಂಟ್’ ಗೆ ಆಡಿಷನ್ ಕೊಟ್ಟನು. ಅದರಲ್ಲೆ ಆಯ್ಕೆಯಾದ ನಂತರ 2014ರಲ್ಲಿ ‘ಕೊರಿಯಬ್ ಆರ್ಟ್ಸ್ ಹೈಸ್ಕೂಲ್’ ನಿಂದ ಪದವಿ, 2020 ರಲ್ಲಿ ಮತ್ತೊಂದು ಪದವಿ ಪಡೆದನು.
ಜಿಮಿನ್ ನ ಒಂದು ವಿಶೇಷತೆ ಎಂದರೆ ಅವನು ಅತಿ ಪುಟ್ಟ ಕೈಬೆರಳುಗಳನ್ನು ಹೊಂದಿದ್ದಾನೆ. ಅವನ ಪುಟ್ಟ ಕೈಬೆರಳುಗಳಿಂದಲೇ ಅವನನ್ನು ಗುರುತಿಸಿಕೊಳ್ಳುತ್ತಾನೆ.
ಟಿಕ್ವಾಂಡೊ ಎಂಬ ಮಾರ್ಷಲ್ ಆರ್ಟ್ ನಲ್ಲಿ ಜಿಮಿನ್ ಬ್ಲಾಕ್ಬೆಲ್ಟ್ ಪಡೆದಿದ್ದಾನೆ. ‘ಕೈಲಾದಷ್ಟು ಎಲ್ಲವನ್ನೂ ಮಾಡು’ ಎನ್ನುವುದು ಅವನ ಜೀವನ ಧ್ಯೇಯ. ಕಠಿಣ ಶ್ರಮದಿಂದ ಸತತ ಅಭ್ಯಾಸ ದಿಂದ ಹಾಡುಗಾರನಾಗಿ, ಸಾಹಿತ್ಯ ರಚನಾಕಾರನಾಗಿ, ಒಳ್ಳೆಯ ನೃತ್ಯಕಾರನಾಗಿ BTSನ ಇತರ ಸದಸ್ಯರ ಗೆಳೆಯ, ಬಂಧುವಾಗಿದ್ದಾನೆ.
ಕೆಳಗಿನ ಯು ಟ್ಯೂಬ್ ಲಿಂಕನ್ನು ವೀಕ್ಷಿಸಿ.
ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ವಾಟ್ಸಪ್ ಮೂಲಕ, ಫೇಸ್ಬುಕ್ ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.
ನಿಖಿತಾ ಅಡವೀಶಯ್ಯ