1968 ರಲ್ಲಿ ಮೈಸೂರು ಮೈತ್ರಿ ಫಿಲಂಸ್ ಲಾಂಛನದಲ್ಲಿ ಡಾ. ಡಿ. ಬಿ. ಬಸವೇಗೌಡರು ಪುಟ್ಟಣ್ಣನವರ ನಿರ್ದೇಶನದಲ್ಲಿ “ಸಾವಿರ ಮೆಟ್ಟಲು” ಚಿತ್ರದ ತಯಾರಿಕೆ ಪ್ರಾರಂಭಿಸಿದರು. ಕಲ್ಯಾಣ್ಕುಮಾರ್, ಅಶ್ವಥ್, ಪಂಡರೀಭಾಯಿ, ಜಯಂತಿ ಹಾಗು ವಜ್ರಮುನಿ,ಸುಂದರ ಕೃಷ್ಣ ಅರಸ್ (ಇಬ್ಬರದೂ ಮೊದಲ ಪರಿಚಯ) ಮುಂತಾದವರೊಂದಿಗೆ ಚಾಮುಂಡಿ ಬೆಟ್ಟದ ಪರಿಸರದಲ್ಲಿ ಚಿತ್ರೀಕರಣ ನೆಡೆಯುತಿದ್ದು, ಕ್ರಮೇಣ ನಿರ್ಮಾಪಕ ಮತ್ತು ನಿರ್ದೇಶಕರ ನಡುವೆ ಉಂಟಾಗಿ ಗಂಭೀರ ಪರಿಸ್ಥಿತಿಯಿಂದ ಸ್ಥಗಿತವಾಯಿತು. ಆ ವೇಳೆಗಾಗಲೇ ಪುಟ್ಟಣ್ಣನವರು ಖ್ಯಾತರೆನಿಸಿ ಸಮಯವೇ ಸಿಗದಷ್ಟು ಬ್ಯುಸಿಯಾಗಿದ್ದರು. ಹಾಗಾಗಿ ಚಿತ್ರ ಮುಂದೆ ಹೋಗದೆ ನಿಂತೇ ಹೋಯಿತು.
ಆದರೆ 38 ವರ್ಷದ ನಂತರ ಅರ್ಧಕ್ಕೆ ನಿಂತು ಹೋದ ಅದೇ ಚಿತ್ರವನ್ನು ಪುಟ್ಟಣ್ಣನವರ ಶಿಷ್ಯರಾದ ಕೆ ಎಸ್ ಎಲ್ ಸ್ವಾಮೀ (ರವಿ) ಯವರು ಮುಂದುವರೆಸಿ ಅರ್ಧ ವೈಟ್ ಅಂಡ್ ಬ್ಲಾಕ್ ಹಾಗು ಇನ್ನರ್ದ ಕಲರ್ ನಲ್ಲಿ ಚಿತ್ರೀಕರಿಸಿ 2003 ರಲ್ಲಿ ಬಿಡುಗಡೆ ಮಾಡಿದರು.
1971 ರಲ್ಲಿ ಬಿಡುಗಡೆಯಾದ “ಸಾಕ್ಷಾತ್ಕಾರ” ಚಿತ್ರ ಬಹುಪಾಲು ಸ್ತೂಲ ಕಥಾಹಂದರ ಹೊಂದಿದ್ದು ಅದು “ಸಾವಿರ ಮೆಟ್ಟಿಲ” ಪ್ರತಿರೂಪವೇ ಆಗಿತ್ತು. ಅಲ್ಲಿ ನಾಯಕಿ ದುರಂತ ಕಂಡರೆ “ಸಾಕ್ಷಾತ್ಕಾರ” ದಲ್ಲಿ ನಾಯಕನ ಸಾವಿನೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ. ಈ ಎರಡೂ ಚಿತ್ರಗಳಲ್ಲಿ ನಾಯಕಿಯು ಅಂಗಾರಕ ದೋಷದ ಜಾತಕವುಳ್ಳವಳಾಗಿರುತ್ತಾಳೆ. ಅಚ್ಚರಿ ಎಂದರೆ 38 ವರ್ಷಗಳಾದಮೇಲೆ “ಸಾವಿರ ಮೆಟ್ಟಿಲು” ಚಿತ್ರ ಬಿಡುಗೋಡೆಗೊಂಡಾಗ ಪುಟ್ಟಣ್ಣ, ವಜ್ರಮುನಿ, ಡಿಕ್ಕಿ ಮಾಧವರಾವ್, ಕಲ್ಯಾಣ್ಕುಮಾರ್, ಪಂಡರೀಭಾಯಿ ಇವರೆಲ್ಲ ಇಹ ಲೋಕ ತ್ಯಜಿಸಿದ್ದರು. ದುರಂತವೆಂದರೆ ಇದೇನಾ…
ಡಿ ಎನ್ ಸುರೇಶ್
ಹವ್ಯಾಸಿ ಪತ್ರಕರ್ತರು
1 Comment
ಅದ್ಭುತವಾಗಿ ಮೂಡಿ ಬರುತ್ತಿದೆ ಪುಟ್ಟಣ್ಣ ಅವರ ಬಗೆಗಿನಈ ಲೇಖನ ಮಾಲೆ…