ಪೊಸೈಡನ್-8ಐ ಹದ್ದಿನ ಕಣ್ಣಿನ ಚಾಣಾಕ್ಷ
“ಪೊಸೈಡೆನ್” ಹೆಸರೇ ಏನೋ ಒಂಥರಾ ವಿಚಿತ್ರ ಅಲ್ಲವೇ? ಹೌದು ಹೆಸರೇನೋ ವಿಚಿತ್ರ ಹೌದು ಆದರೆ ಈತ ಬಹು ವಿಶಿಷ್ಟ ಶತ್ರು ಸಂಹಾರಿಯೂ ಹೌದು. ಹೆಸರೇ ಹೇಳುವಂತೆ ಇದೊಂದು ಭಾರತೀಯ ಸೈನ್ಯದ ಬತ್ತಳಿಕೆಗೆ ಸೇರಿದ ಬಹುಪಯೋಗಿ ಹಾಗೂ ವಿಭಿನ್ನ ಯುದ್ಧ ಸಾಮಥ್ರ್ಯ ಹೊಂದಿದ ಪೊಸೈಡೆನ್-8ಐ ಎಂಬ ಯುದ್ಧ ವಿಮಾನ. ಈ ಯುದ್ಧ ವಿಮಾನ ತಯಾರಕ ಅಮೇರಿಕಾದ ಬೋಯಿಂಗ್ ಡಿಫೆನ್ಸ್. ಸದ್ಯಕ್ಕೆ ಈ ಯುದ್ಧ ವಿಮಾನ ಪ್ರಪಂಚದ ಅಮೇರಿಕಾ ಬಿಟ್ಟರೆ ಇರುವುದು ಭಾರತದಲ್ಲಿ ಮಾತ್ರ.!!! ಹೌದು, ಭಾರತ ಬದಲಾಗಿದೆ ಅಲ್ಲವೇ? ಹಿಂದೆ ಭಾರತವು ರಕ್ಷಣಾ ವಿಚಾರದಲ್ಲಿ ಪ್ರಾಪಂಚಿಕ ಮಟ್ಟದಲ್ಲಿ 6-7 ಅಥವಾ 8 ನೇ ಸ್ಥಾನದಲ್ಲಿತ್ತು. ಆದರೆ ಈಗ ನಮ್ಮ ಸೇನೆ ಪ್ರಾಪಂಚಿಕವಾಗಿ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ ಇದಕ್ಕೆ ಬಹುಮುಖ್ಯ ಕಾರಣವಾಗಿರುವುದು ಪೊಸೈಡೆನ್ 8ಐ ಎಂಬ ವಿಶಿಷ್ಟ ಯುದ್ಧ ವಿಮಾನ. ಹಾಗಾದರೆ ಪೊಸೈಡೆನ್-8ಐ ಇದರ ವೈಶಿಷ್ಟತೆಗಳನ್ನು ತಿಳಿದುಕೊಳ್ಳೊಣ.
• ತಯಾರಕ ಸಂಸ್ಥೆ – ಅಮೇರಿಕಾದ ಬೋಯಿಂಗ್ ಡಿಫೆನ್ಸ್, ಸ್ಪೇನ್ & ಸೆಕ್ಯುರಿಟಿ.
• ಗರಿಷ್ಟ ಹಾರಟದ ವೇಗ – 908 ಕಿಮೀ/ಗಂಟೆಗೆ• ಕಾರ್ಯಾಚರಣೆಯ ವ್ಯಾಪ್ತಿ – 2222ಏm (1,200 ನಾಟಿಕಲ್ ಮೈಲ್)
• ಒಟ್ಟು ತೂಕ – 62,730 ಞiಟo• ಬೆಲೆ- 220 ಮಿಲಿಯನ್ ಡಾಲರ್
• ಪ್ರಥಮ ಪ್ರಯೋಗಾರ್ಥ ಹಾರಾಟ- 2009 ರಲ್ಲಿ
• ಭಾರ ಒಯ್ಯುವ ಸಾಮಥ್ರ್ಯ- 9000eg
• ಸೇನಾ ಬಳಕೆ ಪ್ರಾರಂಭ – 2013 ನವೆಂಬರ್
• ಸದ್ಯದ ಬಳಕೆ – ಅಮೇರಿಕಾ ಮತ್ತು ಭಾರತೀಯ ನೌಕಾ ಸೇನೆ.
ಭಾರತೀಯ ಬತ್ತಳಿಕೆಯಲ್ಲಿ ಪೊಸೈಡೆನ್-8ಐ ಎಂಬ ಶತ್ರು ಸಂಹಾರಿ
ಪ್ರಪಂಚದ ಅತ್ಯಂತ ಪ್ರಬಲ ಮಿಲಿಟರಿ ಎಂದರೆ ಅಮೇರಿಕ, ಚೀನಾ, ಇಸ್ರೇಲ್ ಎಂಬ ಮಾತೇ ಪ್ರಚಲಿತದಲ್ಲಿತ್ತು. ಆದರೆ ಈಗ ಕಾಲ ಬದಲಾಗಿದೆ. ಭಾರತದ ಆಂತರಿಕ ಭಧ್ರತೆಗೆ ಯಾವಾಗಲೂ ಚೀನಾ ಮತ್ತು ಪಾಕಿಸ್ಥಾನಗಳ ಮಗ್ಗುಲಿನ ಮುಳ್ಳಾಗಿ ಕಾಡುತ್ತಿದ್ದವು. ಭಾರತ, ಚೀನಾ ಹಾಗೂ ಪಾಕಿಸ್ಥಾನ ದೆಶಗಳಿಗೆ ಹಿಂದು ಮಹಾಸಾಗರವೇ ವಾಣಿಜ್ಯ ಹಾಗೂ ಇತರ ಉದ್ದೇಶಗಳಿಗೆ ಪ್ರಮುಖ ಜಲ ಮಾರ್ಗವಾಗಿದೆ. ಚೀನಾವು ಇಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಅಲ್ಲಿ ತನ್ನ ಶಕ್ತಿಶಾಲಿ ಮತ್ತು ಆಧುನಿಕ ಯುದ್ಧ ನೌಕೆಗಳನ್ನು ನಿಯೋಜಿಸುವ ಮೂಲಕ ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರಗಳ ಪೈಕಿ ವಿಶೇಷವಾಗಿ ಭಾರತವನ್ನು ನಿರಂತರವಾಗಿ ಬೆದರಿಸುವ ಪ್ರಯತ್ನ ಮಾಡುತ್ತಲೇ ಬಂದಿತ್ತು. ಆದರೆ ಇದೀಗ ಚೀನಾದ ಈ ಬೆದರಿಕೆಯನ್ನು ಎದುರಿಸಲು ಭಾರತ ಸಮರ್ಥವಾಗಿ ಶಕ್ತವಾಗಿದ್ದು ಚೀನಾದ ಅತ್ಯಂತ ಶಕ್ತಿಶಾಲಿಯಾದ ನೌಕಾಪಡೆಯನ್ನೇ ನಡುಗಿಸುವ ಬ್ರಹ್ಮಾಸ್ತ್ರವೊಂದನ್ನು ಭಾರತ ತನ್ನ ಪಡೆಗೆ ಸೇರಿಸಿಕೊಂಡಿದೆ. ಆ ಬ್ರಹ್ಮಾಸ್ತ್ರದ ಹೆಸರೇ ಪೊಸೈಡೆನ್-8ಐ.
ಈ ವಿಶಿಷ್ಟ ಹಾಗೂ ವಿನಾಶಕಾರಿ ಕಣ್ಗಾವಲು ವಿಮಾನ ಅಮೇರಿಕಾವನ್ನು ಬಿಟ್ಟರೆ ಇರುವುದು ಕೇವಲ ಭಾರತದ ನೌಕೆಪಡೆಯಲ್ಲಿ ಮಾತ್ರ. ಈ ವಿಮಾನದಲ್ಲಿರುವ ಅತ್ಯಾಧುನಿಕವಾದ ತಾಂತ್ರಿಕತೆಯು ಯಾವುದೇ ಶತ್ರು ದೇಶಕ್ಕೆ ಸಂಬಂಧಪಟ್ಟ ನೀರಿನೊಳಗೆ ಚಲಿಸುವ ಎಂತಹದೇ “ಸಬ್‍ಮೆರೈನ್ (Submarine)” ಗಳು ತನ್ನ ಗಡಿ ಪ್ರದೇಶಕ್ಕೆ ಸಮೀಪಿಸುತ್ತಿದ್ದಂತೆಯೇ ಅವುಗಳನ್ನು ಗುರುತಿಸಿ ನಿಖರವಾಗಿ ಗುರಿಯಿಟ್ಟು ಕ್ಷಣಮಾತ್ರದಲ್ಲಿ ಧ್ವಂಸ ಮಾಡಬಲ್ಲದು. ಭಾರತೀಯ ಸಾಗರ ವ್ಯಾಪ್ತಿಯ “ಚಾಣಾಕ್ಷ ಹದ್ದಿನ ಕಣ್ಣು” ಎಂದೂ ಇದನ್ನು ಕರೆಯಲಾಗುತ್ತದೆ.
ಈ ವಿಮಾನದ ವಿಶೇಷತೆ ಎಂದರೆ ಇದರಲ್ಲಿ ಅಳವಡಿಸಲಾಗಿರುವ ಅತ್ಯಾಥುನಿಕ ಸಾಮಥ್ರ್ಯದ ರಾಡರ್ ವ್ಯವಸ್ಥೆ. ಇದು ಶತ್ರು ರಾಷ್ಟ್ರದ ಯಾವುದೇ ಸಾಮಥ್ರ್ಯದ ಸಬ್ ಮೆರೈನ್‍ಗಳ ತನ್ನ ಗಡಿ ಪ್ರದೇಶವನ್ನು ಪ್ರವೇಶವನ್ನು ಮಾಡುತ್ತಿದ್ದಂತೆ ಇತರ ರಾಡರ್‍ಗಳು ಅವುಗಳನ್ನು ಗುರುತಿಸಿ ಈ ವಿಮಾನದ ನಿಯಂತ್ರಣ ಕೊಠಡಿಗೆ ಸಂದೇಶವನ್ನು ನೀಡುತ್ತದೆ. ಆ ಕ್ಷಣದಿಂದಲೇ ಈ ಕಣ್ಗಾವಲು ವಿಮಾನ ರಹಸ್ಯ ಸಬ್‍ಮೆರೈನ್ ಮೇಲೆ ನಿಗಾವಹಿಸಿ ಅವುಗಳು ಅಪಾಯಕಾರಿ ಹಂತ ದಾಟುತ್ತಿದ್ದಂತೆಯೇ ತನ್ನಲ್ಲಿರುವ ಅತ್ಯಾಧುನಿಕ ಕ್ಷಿಪಣಿಗಳನ್ನು ಉಪಯೋಗಿಸಿ ಕ್ಷಣ ಮಾತ್ರದಲ್ಲಿ ಆ ಸಬ್‍ಮೆರೈನ್‍ನನ್ನು ಸಮುದ್ರದಲ್ಲೇ ನೆಲಕ್ಕಚ್ಚುವಂತೆ ಮಾಡುತ್ತದೆ. ಇದರಲ್ಲಿ ಆಕಾಶದಿಂದ ಭೂಮಿಗೆ, ಆಕಾಶದಿಂದ ಸಮುದ್ರಕ್ಕೆ ಹಾಗೂ ಆಕಾಶದಿಂದ ಆಕಾಶಕ್ಕೆ ಕ್ಷಿಪಣಿಗಳನ್ನು ಉಡಾಯಿಸುವ ಮೂರೂ ವಿಧದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ರಾತ್ರಿ ವೇಳೆಯಲ್ಲೂ ಇದರ ಬಲಿಷ್ಟ ಇನ್ಫ್ರಾರೆಡ್ ಕ್ಯಾಮಾರಗಳು ಪರಿಣಾಮಕಾರಿಯಾಗಿ ಕಾರ್ಯಚರಣೆ ಮಾಡಬಲ್ಲವು. ಈ ವಿಮಾನವು ಬಹುಪಯೋಗಿ ವಿಮಾನವಾಗಿದ್ದು ಒಂದಡೆ ಕಣ್ಗಾವಲು ವಿಮಾನವಾಗಿ ಕಾರ್ಯ ನಿರ್ವಹಿಸಿದರೆ ತುರ್ತು ಹಾಗೂ ಅಗತ್ಯ ಸಂಧರ್ಭಗಳಲ್ಲಿ ಇದರಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ ಇದು ಯುದ್ಧ ವಿಮಾನವಾಗಿಯೂ ಮಾರ್ಪಾಡಾಗಬಲ್ಲುದು.
ಭಾರತದ ದಕ್ಷಿಣದಲ್ಲಿರುವ ಹಿಂದೂ ಮಹಾಸಾಗರ ಕೇವಲ ಸಮುದ್ರ ಅಥವಾ ಜಲಮಾರ್ಗವಾಗಿ ಉಳಿದಿಲ್ಲ. ಬದಲಾಗಿ ವಿಶ್ವದ ಅತಿ ದೊಡ್ಡ ವ್ಯಾಪಾರ ಕೇಂದ್ರಕ್ಕೆ ಇದು ಪ್ರಮುಖ ರಹದಾರಿಯೂ ಹೌದು. ಈ ಕಾರಣಕ್ಕಾಗಿಯೇ ಚೀನಾ ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಚಕ್ರ್ರಾಧಿಪತ್ಯ ಸಾಧಿಸುವಂತಹ ದೇಶಕ್ಕೆ ಇಲ್ಲಿ ಬಲಿಷ್ಠ ವ್ಯಾಪಾರವೂ ಕಟ್ಟಿಟ್ಟ ಬುತ್ತಿ ಎಂದೇ ಮನೆ ಮಾತಾಗಿದೆ. ಆದರೆ ಭಾರತ ತನ್ನ ಗಡಿ ಪ್ರದೇಶವನ್ನು ಮತ್ತೊಂದು ರಾಷ್ಟ್ರ ಕಬಳಿಸುವುದನ್ನು ನೋಡುತ್ತಾ ಸುಮ್ಮನೆ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಹಾಗಂತ ಚೀನಾದ ಬಲಿಷ್ಟ ಡ್ರ್ಯಾಗನ್ ಸೇನೆಯನ್ನು ಎದುರು ಹಾಕಿಕೊಂಡು ಯುದ್ಧ ಮಾಡುವ ಸಾಮಥ್ರ್ಯವೂ ಭಾರತಕ್ಕಿರಲಿಲ್ಲ. ಆದರೆ ಇಂದು ಕಾಲಚಕ್ರ ಬದಲಾಗಿದೆ. ಭಾರತದ ಬಳಿಯೂ ಬಲಿಷ್ಟವಾದ ಸೇನೆ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರದಿಂದ ವಿವಾದಿತ ಪ್ರದೇಶದಲ್ಲಿ ತನ್ನ ಸೇನೆಯನ್ನು ನಿಯೋಜಿಸುವ ಮೂಲಕ ದೇಶ ರಕ್ಷಣೆಗೆ ಕಠಿಣ ನಿರ್ಧಾರವನ್ನು ಕೈಗೊಂಡಿದೆ.
ಹವಳ ದ್ವೀಪಗಳಾದ ಅಂಡಮಾನ್ ಮತ್ತು ನಿಕೋಬಾರ್‍ಗಳಲ್ಲಿ ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕ ಸೇನೆಗಳನ್ನು ನಿಯೋಜಿಸಲಾಗಿದ್ದು, ಈ ಮೂರು ಸೇನೆಗಳು ಒಂದಕ್ಕೊಂದು ಬೆಂಗಾವಲಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಭಾಗದಲ್ಲಿ ಒಟ್ಟು 3000 ಮಂದಿ ಸೈನಿಕರು ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ಇದೇ ರೀತಿ ದೇಶದೆಲ್ಲೆಡೆ ನಮ್ಮ ಸೇನೆ ಕಾರ್ಯ ನಿರ್ವಹಿಸಬೇಕೆಂಬುದು ಕೇಂದ್ರ ಸರ್ಕಾರದ ಆಶಯವೂ ಹೌದು. ಆದ್ದರಿಂದ ಸೇನೆಯಲ್ಲಿ ಸಾಕಷ್ಟು ಬದಲಾವಣೆಗಳು ಹಾಗೂ ಆಧುನಿಕ ತಂತ್ರಜ್ಞಾನಗಳ ಪರಿಚಯವೂ ನಡೆದಿದ್ದು ಅದರ ಒಂದು ಭಾಗವೇ “ಪೊಸೈಡೆನ್-8ಐ”. ಈ ವಿಮಾನದ ಶಕ್ತಿ ಬಲಿಷ್ಠ ಚೀನಾಗೆ ಚೆನ್ನಾಗಿ ತಿಳಿದಿದೆ. ಈ ಒಂದು ವಿಮಾನದ ಸಾಮಥ್ರ್ಯವು ಹತ್ತು ನೌಕಾ ಹಡಗುಗಳ ಸಾಮಥ್ರ್ಯಕ್ಕೆ ಸಮಾನ. ಇದು ಆಕಾಶದಲ್ಲಿ ಅತ್ಯಂತ ವೇಗವಾಗಿ ಚಲಿಸುವುದರಿಂದ ಇದನ್ನು ಹೊಡೆದುರುಳಿಸುವುದು ಅಷ್ಟು ಸುಲಭದ ಮಾತಲ್ಲ. ಇದರ ಗುರಿ ಅತ್ಯಂತ ನಿಖರವಾಗಿದ್ದು ಯಾವುದೇ ಕಾರಣಕ್ಕೂ ಇದು ಇಟ್ಟ ಗುರಿ ತಪ್ಪಲು ಸಾಧ್ಯವೇ ಇಲ್ಲ. ಇದು ಗುರಿಯನ್ನು ಕ್ಷಣ ಮಾತ್ರದಲ್ಲಿ ತಲುಪುತ್ತದೆ ಹಾಗೂ ಇದು ಚೀನಾದ ಎಲ್ಲಾ ಅತ್ಯಾಧುನಿಕ ಯುದ್ಧ ವಿಮಾನಗಳಿಗಿಂತ ಇದರ ಸಾಮಥ್ರ್ಯ ಹೆಚ್ಚು. ಜಲಾಂತರ್ಗಾಮಿಗಳನ್ನು ಹೊಡೆದುರುಳಿಸುವ ಸಾಮಥ್ರ್ಯ ಜಗತ್ತಿನ ಸೂಪರ್ ಪವರ್ ದೇಶಗಳ ಬಳಿ ಮಾತ್ರ ಇದ್ದು ಇದೀಗ ಭಾರತದ ಬತ್ತಳಿಕೆಯಲ್ಲೂ ಈ ಶತ್ರು ಸಂಹಾರಿಯು ಸೇರಿಕೊಂಡಿದ್ದು ಅದನ್ನು ಭಾರತದ ಹಿಂದು ಮಹಾಸಾಗರದಲ್ಲಿ ನಿಯೋಜಿಸಲಾಗಿದೆ.
ಸ್ವಯಂ ಚಾಲಿತ ಕಾಂತೀಯ ಪತ್ತೇದಾರಿಕೆಗಾಗಿ ಇದರಲ್ಲಿ ಅತ್ಯಂತ ಗುಣಮಟ್ಟದ ರಾತ್ರಿ ವೇಳೆಯಲ್ಲೂ ಗುರುತಿಸಬಲ್ಲ ಕ್ಯಾಮರಗಳನ್ನು ಅಳವಡಿಸಲಾಗಿದ್ದು ಭೂಮಿಯಿಂದ ಅತ್ಯಂತ ಎತ್ತರದಿಂದಲೇ ಉತ್ತಮ ದರ್ಜೆಯ ಚಿತ್ರಣವನ್ನು ಇವುಗಳು ನೀಡುವ ಮೂಲಕ ಯಶಸ್ವಿಯಾಗಿ ಕಾರ್ಯಚರಣೆಯನ್ನು ನಡೆಸಬಲ್ಲದು.
ಈ ವಿಮಾನದಲ್ಲಿ ಒಟ್ಟು 5 ಮಂದಿ ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. (2 ಮಂದಿ ಯುದ್ಧ ವಿಭಾಗ ಹಾಗೂ ಮೂರು ಮಂದಿ ಚಾಲನೆ ಹಾಗೂ ಪತ್ತೇದಾರಿಕೆ ವಿಭಾಗದ ಅಧಿಕಾರಿಗಳು)
ಈ ವಿಮಾನವು ಏಕ ಕಾಲಕ್ಕೆ ವಿವಿಧ ರೀತಿಯ ಶಸ್ತ್ರಾಸ್ತ್ರಗಳಾದ ಹಾರ್ಪೂನ್ ಬ್ಲಾಕ್-II ಕ್ಷಿಪಣಿ ಉಡಾವಣೆ ಹಾಗೂ ಟಾರ್ಪೆಡೂ ಫೈರಿಂಗ್ ಮೂಲಕ ವಿವಿಧ ಗುರಿಗಳಾದ ಭೂಮಿ, ಸಾಗರ ಹಾಗೂ ಆಕಾಶಕ್ಕೆ ಏಕ ಕಾಲದಲ್ಲಿ ಪ್ರಯೋಗಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. (ಹೆಚ್ಚಿನೆಲ್ಲಾ ಯುದ್ಧ ವಿಮಾನಗಳು ಏಕ ಪ್ರಕಾರದ ಶಸ್ತ್ರಾಸ್ತ್ರಗಳನ್ನು ಬಳಸುತ್ತವೆ.)
ಶತ್ರುಗಳ ಪತ್ತೇದಾರಿಕೆಗಾಗಿ ಏಳು ವಿಧದ ಸೆನ್ಸಾರ್‍ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು ವಿವಿಧ ಕೋನಗಳಲ್ಲಿ ಭೂಮಿಯ ಚಿತ್ರಣವನ್ನು ಸ್ಪಷ್ಟವಾಗಿ ಕ್ಷಣ ಮಾತ್ರದಲ್ಲಿ ನೀಡುವ ಮೂಲಕ ಸರ್ವೆಕ್ಷಣಾ ವಿಮಾನವಾಗಿಯೂ (ಯುದ್ಧ ಹಾನಿ ಪರಿಶೀಲನೆ) ಬಳಸಲಾಗುತ್ತದೆ..
ಶತ್ರುಗಳ ಅತ್ಯುನ್ನತ ಗುಣಮಟ್ಟದ ಕ್ಯಾಮರಾಗಳು ತನ್ನನ್ನು ವೀಕ್ಷಿಸುತ್ತಿರುವ ಮತ್ತು ರಾಡಾರ್‍ಗಳು ತನ್ನನ್ನು ಗುರುತಿಸುತ್ತಿರುವ ವಿಚಾರವನ್ನು ಇದು ಮೊದಲಾಗಿ ಪತ್ತೆಹಚ್ಚಿ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವ ಮೂಲಕ ಭಾರತೀಯ ಜಲ ವ್ಯಾಪ್ತಿಗೆ ಬಂದೊದಗಬಹುದಾದ ಅಪಾಯವನ್ನು ಮುಂದಾಗಿ ಪತ್ತೆಹಚ್ಚಿ ಅವಶ್ಯವಿದ್ದಲ್ಲಿ ಅವುಗಳನ್ನು ನಿಷ್ಕ್ರೀಯಗೊಳಿಸುವ ಸಾಮಥ್ರ್ಯವನ್ನು ಹೊಂದಿದೆ.
ಇದು ಸಣ್ಣ ಮತ್ತು ದೊಡ್ಡ ಗಾತ್ರದ ಯುದ್ಧ ಹಡಗುಗಳು ಮತ್ತು ತನ್ನತ್ತ ನುಗ್ಗಿ ಬರುವ ವಿವಿಧ ರೀತಿಯ ಕ್ಷಿಪಣಿಗಳು ಮತ್ತು ಕ್ಷಿಪಣಿ ಉಡಾವಕಗಳನ್ನು ಗುರುತಿಸಿ ಧ್ವಂಸ ಮಾಡಬಲ್ಲ ಶಕ್ತಿಯನ್ನು ಹೊಂದಿದೆ.
ಈ ವಿಮಾನವು ಆಕಾಶದಲ್ಲಿ ಗಂಟೆಗೆ 926 ಕಿ.ಮೀ ವೇಗದಲ್ಲಿ ಸಂಚರಿಸುತ್ತಿರುವಾಗಲೂ ನಿಖರವಾಗಿ ಗುರಿಯನ್ನು ಇಟ್ಟು ದಾಳಿ ಮಾಡಬಲ್ಲ ಸಾಮಥ್ರ್ಯವನ್ನು ಹೊಂದಿದ್ದು, 6 ವಿಭಿನ್ನ ರೀತಿಯ ಶಸ್ತ್ರಾಸ್ತ್ರ ಉಡಾವಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ಯುದ್ಧ ವಿಮಾನವು ನಿರಂತರವಾಗಿ 1000 ಗಂಟೆಗಳ ಕಾಲ ಆಕಾಶದಲ್ಲಿ ಹಾರಡಬಲ್ಲ ಸಾಮಥ್ರ್ಯ ಹೊಂದಿರುವುದು ಇದರ ಬಹು ದೊಡ್ಡ ವಿಶೇಷತೆ. ಹಾಗೂ ಹೆಚ್ಚುವರಿಯಾಗಿ 34,096ಏg ಯಷ್ಟು ಇಂಧನವನ್ನು ಶೇಖರಿಸಿಟ್ಟುಕೊಂಡು ಬಳಸುವ ಸ್ವಯಂ ಚಾಲಿತ ವ್ಯವಸ್ಥೆಯನ್ನು ಹೊಂದಿದೆ.
ಇದೇ ಯುದ್ಧ ವಿಮಾನವನ್ನು ಮಲೇಷಿಯಾದಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಒಊ-370 ಪ್ರಯಾಣಿಕ ವಿಮಾನವನ್ನು ಹುಡುಕಾಡುವುದರಲ್ಲಿಯೂ ಬಳಸಲಾಗಿತ್ತು.
ಈ ಮೂಲಕ ಭಾರತವು ತನ್ನ ಮಿಲಿಟರಿ ಸಕ್ತಿಯನ್ನು ಇನ್ನಷ್ಟು ಪ್ರಭಲಗೊಳಿಸುವಲ್ಲಿ ಯಶಸ್ವಿಯಾಗಿ ಹೆಜ್ಜೆ ಇಟ್ಟಿದ್ದು ಈ ಮೂಲಕ ಪೊಸೈಡೆನ್ 8ಐ ಎಂಬ ಬಲಿಷ್ಟ ಅಸ್ತ್ರವನ್ನು ಖರೀದಿಸಿದೆ. ಈ ಮೂಲಕ ದಿನಾಂಕ 09.01.2009 ರಂದು ಒಟ್ಟು ಎಂಟು ಈ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಅಮೇರಿಕಾದ ಬೋಯಿಂಗ್ ಡಿಫೆನ್ಸ್, ಸ್ಪೇನ್ & ಸೆಕ್ಯುರಿಟಿ ಸಂಸ್ಥೆಯೊಂದಿಗೆ ಸುಮಾರು 2.1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದು, ಪ್ರಥಮ ಹಂತದಲ್ಲಿ 15.052013 ರಂದು ಒಂದು ವಿಮಾನವನ್ನು ಭಾರತೀಯ ನೌಕಾ ಸೇನೆಯ ಬತ್ತಳಿಕೆಗೆ ಸೇರಿಸಲಾಗಿದೆ. ಈ ಯುದ್ಧ ವಿಮಾನವು ಭಾರತೀಯ ನೇವಲ್ ಸ್ಕ್ವಾಡ್ರನ್-312ಂ ಸುಪರ್ದಿಯಲ್ಲಿದ್ದು, ಕಮಾಂಡರ್ ವೆಂಕಟೇಶ್ವರನ್ ರಂಗನಾಥನ್‍ರವರ ನೇತೃತ್ವದಲ್ಲಿ ತಮಿಳುನಾಡಿನ ಅರಕ್ಕೋಣಂನ ರಾಜಾಲಿ ನೌಕಾ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಮೂಲಕ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಈ ವಿಶೇಷ ಸಾಮಥ್ರ್ಯದ ಯುದ್ಧ ವಿಮಾನ ಖರೀದಿಯ ಮೂಲಕ ಇತರ ದೇಶಗಳ ಸೈನ್ಯ ಶಕ್ತಿಯೆದುರು ಬಲಿಷ್ಟವಾಗಿ ಬೆಳೆದಿರುವುದು ಸುಳ್ಳಲ್ಲ. ಹೌದು ನಮ್ಮ ದೇಶ ಬದಲಾಗುತ್ತಿದೆ……
ಸಂತೋಷ್ ರಾವ್ ಪೆರ್ಮುಡ
ಪಟ್ರಮೆ, ಬೆಳ್ತಂಗಡಿ ತಾಲೂಕು ದ.ಕ.ಜಿಲ್ಲೆ
ದೂ:9742884160,