ಪ್ರಕೃತಿ ಪುರುಷ
ಸ್ತ್ರೀ ಪುರುಷರ ಸಮಾಜದಲಿ,
ಪುರುಷರೇ ಮೇಲುಗೈ ಒಂದು ಹಂತದಲಿ |
ಸ್ತ್ರೀ ಕೆಲಸ ಮಾಡುತ್ತಿರೆ ತನ್ನ ಗೃಹದಲಿ
ಪುರುಷ ನಿಪುಣ, ಹೊರಗೆ ದುಡಿವಲ್ಲಿ ||
“ಉದ್ಯೋಗಂ ಪುರುಷ ಲಕ್ಷಣಂ”
ಎನ್ನುತಿದ್ದರು ಪುರಾತನ ಕಾಲದಲ್ಲಿ |
“ಲಜ್ಜಾ ವಿನಯಂ ಸ್ತ್ರೀ ಲಕ್ಷಣಂ”
ಎನ್ನುವರು ಸ್ತ್ರೀಗೆ ಸದಾ ಕಾಲದಲ್ಲಿ ||
ಬೇಕು ಶಕ್ತಿ ಸೃಷ್ಟಿಕರ್ತನ ಕಾರ್ಯಕೆ
ಸ್ತ್ರೀ ಬೇಕು ಪುರುಷನ ಅಸ್ತಿತ್ವಕೆ |
ಮಹಾಪುರುಷನೆನಿಸಿಕೊಳ್ಳುವುದಕೆ
ಪುರುಷನ ಹಿಂದೇ ಇರುವಳು ಆಕೆ ||
ಸ್ತ್ರೀಯು ತಾಳಿ ಕಟ್ಟಿಸಿಕೊಳ್ಳುವಳು
ಪುರುಷನ ಕೈಯಲ್ಲಿ, ತಲೆ ಬಾಗಿಸಿರುವಳು |
ಪುರುಷನ ಪುರುಷ ಸಿಂಹ ಎನ್ನುವರು
ಲಗ್ನ ಕಾಲದಿ ಸ್ತ್ರೀಯ ಧಾರೆ ಎರೆಯುವರು ||
ಸದಾ ಕಾಲದಲೂ ಸ್ತ್ರೀ ಜತೆಗೆ ಪುರುಷ
ಇದ್ದರೇ ಚೆಂದ ಸಂಸಾರಕ್ಕೆ ಸಂತೋಷ |
ನಮ್ಮ ನಾಗಶಯನ ಆಗಿಹನು ಪುರುಷ
ಮಹಾಲಕ್ಷ್ಮಿ ಸ್ತ್ರೀ, ಪ್ರಕೃತಿ ಆಗಿ ವರುಷ ||
ನಾಗರಾಜು. ಹ
ಬೆಂಗಳೂರು