ಪ್ರೇಮ ಕಾವ್ಯ
ನಿನಗಾಗಿ ಬರೆದ ಎರಡಕ್ಷರದ ಕಾವ್ಯ ಮಹಾಕಾವ್ಯವಾಗಿದೆ ಪ್ರಿಯೆ
ಭಗ್ನ ಪ್ರೇಮಿಗಳಿಗೆ ಅದೊಂದೇ ಪ್ರೇಮ ಮಾರ್ಗವಾಯಿತು ಪ್ರಿಯೆ
ಗುಲಾಬಿ ತೋಟದಲ್ಲಿ ನಿಂತ ಮೇಣದ ಪ್ರತಿಮೆಯೊಂದು
ನಮ್ಮಂತೆ ದುಃಖದಿಂದ ಅಪ್ಪಿಕೊಂಡಂತೆ ಅಚ್ಚೊತ್ತಿರುವೆ ಪ್ರಿಯೆ
ಹತ್ತಾರು ಅಧ್ಯಾಯ ನೂರಾರು ನೆನಪುಗಳನ್ನು ತುಂಬಿಕೊಂಡು
ಪ್ರೇಮ ಕಾವ್ಯದ ವಿರಹ ಗೀತೆಗಳ ಧ್ವನಿ ಕೇಳಿಸುತ್ತಿದ್ದವು ಪ್ರಿಯೆ
ದಟ್ಟ ಕಾಡಿನಲ್ಲಿ ಒಬ್ಬಂಟಿಯಾಗಿ ಅಲೆಯುತ್ತಿರುವ ಅಂಗನೆಯ
ನೋವುಗಳ ಪ್ರೇಮಿಗಳ ನೆರಳನ್ನಾಗಿ ಬಿಂಬಿಸಿ ಬರೆದಿರುವೆ ಪ್ರಿಯೆ
ಲೋಕವೆಂಬುದು ಪ್ರೇಮಿಗಳಿಗೆ ವಿಷ ಅನ್ನದ ತುತ್ತಿಡುವ
ಕಾಮ ಪಿಶಾಚಿಗಳ ದೊಡ್ಡ ಬ್ರಹ್ಮಾಂಡ ಬಲಿಯಾಗಬೇಡ ಪ್ರಿಯೆ
ಶ್ರೀ ಹನಮಂತ ಸೋಮನಕಟ್ಟಿ