ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು
ಪುಸ್ತಕದ ಹೆಸರು: ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು
ಪ್ರಕಾರ: ನಾಟಕಗಳ ಸಂಕಲನ
ಲೇಖಕರು: ಆಶಾ ರಘು
ಮುದ್ರಣ: 2
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 108
ಬೆಲೆ: 150/-
ಮೊಬೈಲ್: 9008122991
ಈ ಸಂಕಲನದಲ್ಲಿ ಮಕ್ಕಳ ನಾಲ್ಕು ನಾಟಕಗಳಿವೆ. ‘ಬಂಗಾರದ ಪಂಜರ’ ಪ್ರಸ್ತುತದ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವ ನಾಟಕವಾದರೆ, ‘ಎಣ್ಣೆಗಾಯ್’ ಅತ್ತೆಸೊಸೆಯರ ಜಗಳದ ಹಾಸ್ಯಪ್ರಧಾನ ನಾಟಕವಾಗಿದೆ.

‘ಕೃಷ್ಣ ಸುಧಾಮ’ ಗೆಳೆತನದ ಪರಾಕಾಷ್ಠೆಯನ್ನೂ, ಕೃಷ್ಣ ಮಹಿಮೆಯನ್ನೂ ಸಾರುವ ನಾಟಕವಾದರೆ, ‘ಒನಕೆ ಪೂಜೆ’ ಅತಿಥಿ ಪುರಸ್ಕಾರ ಮಾಡುತ್ತಾ ಹೆಂಡತಿ ಮಕ್ಕಳನ್ನು ಉಪವಾಸ ಕೆಡವುತ್ತಿದ್ದ ಗಂಡನಿಗೆ ಪಾಠ ಕಲಿಸುವ ಜಾಣ ಹೆಂಡತಿಯ ಹಾಸ್ಯಭರಿತ ನಾಟಕವಾಗಿದೆ. ಎರಡನೆಯ ಮುದ್ರಣದಲ್ಲಿ ‘ಚಿನ್ನದ ಮಾವಿನಹಣ್ಣು’ ಎಂಬ ಇನ್ನೊಂದು ಕಿರುನಾಟಕವನ್ನು ಸೇರಿಸಲಾಗಿದ್ದು, ಇದು ತೆನಾಲಿ ರಾಮಕೃಷ್ಣನ ಹಾಸ್ಯಭರಿತ ನಾಟಕವಾಗಿದೆ.
ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.
ಸಾಹಿತ್ಯಮೈತ್ರಿ