ಬದುಕಿನ ಸುಂಕ

ಬದುಕಿನ ಸುಂಕ

ಸುಮ್ಮನೆ ರೂಪಗೊಳ್ಳದೀ ಬದುಕು
ಸುಂಕ ಕಟ್ಟಲೇಬೇಕು ಪ್ರತೀ ಹೊತ್ತು
ನಮ್ಮ ನಮ್ಮ ವ್ಯವಹಾರಕ್ಕೆ ನಾವೇ ಹೊಣೆಗಾರರು
ದೂಷಿಸುವಂತಿಲ್ಲ ಯಾರಿಗೂ

ತಪ್ಪಿಸಿಕೊಳ್ಳುವಂತಿಲ್ಲ ಸುಂಕದ ಬಾಬ್ತು
ಇಂದಿಲ್ಲ ನಾಳೆಯಾದರೂ ಕಟ್ಟಲೇಬೇಕು ದುಪ್ಪಟ್ಟು,
ಜಾಣ್ಮೆಯ ನಡೆಗೆ ವಿನಾಯಿತಿ
ಘೋಷಿಸಿದರು ಪರಿಶೀಲನೆಗೊಬ್ಬ ಲೆಕ್ಕಿಗನಿರುವ,
ಬರೆದಿಟ್ಟುಕೊಂಡಿರುವ ಎಲ್ಲದರ ಎಲ್ಲರ ಲೆಕ್ಕಾಚಾರವ

ಬದುಕೊಂದ ಬದುಕೋಣು ಬಾರ
ಹೇಗಾದರೂ ಸರಿಯೇ ಬದುಕಿಬಿಡುವ ಎನ್ನುವಂತಿಲ್ಲ,
ಗಮನಿಸುತಲೇ ಇದ್ದಾನೆ ಓರ್ವ ತೀರ್ಪುಗಾರ

ಸುಂಕಕಂಜದಿರು ಮನವೇ
ಸರಿಯಾದ ಸಮಯಕ್ಕೆ ಪಾವತಿಸಿದರೆ
ಅದುವೇ ಪುರಸ್ಕಾರ…

ಪವನ ಕುಮಾರ ಕೆ. ವಿ.
ಬಳ್ಳಾರಿ

Related post