ಈ ಬದುಕು ಬಂದಂತೆ ಸ್ವೀಕರಿಸಿ ಬದುಕಿಬಿಡು
ಬೇಕು ಬೇಡಗಳ ಪಟ್ಟಿ ಬದುಗಿರಿಸು.
ಕೂಡಿಡುವ ಖಾಯಿಲೆಗೆ. ಪ್ರಕೃತಿಯಲಿ ಮದ್ದಿದೆ..
ನಾನೂ, ನನ್ನದೆನುವದ, ಮರೆತು ಜೀವಿಸು.,
ದಯೆಬಯಸಿ, ಸಣ್ಣ ಆಯುಗಾಗೀ..
ಉಳಿಯುವುದು ಜೀವ ಸಣ್ಣ ಉದಾಹರಣೆಯಾಗಿ
ಮೆರೆಯದಿರು, ಇನ್ನಾದರೂ,.. ಹಸಿ ಮಾಂಸವ ಬಯಸಿ.
ಜೀವ ಸಂಕುಲದಲ್ಲಿ ನೀನೂ ಬಾಗವಷ್ಟೇ..
ತೋರದಿರೆ ಸಂಯೋಗ ಬಾವ..
ಕೊಚ್ಚಿ ಹೋಗುವೆ ಒಮ್ಮೆ ತರಗೆಲೆಯಂತೆ ನಿಶ್ಚಿತ.
ಕೆದಕದಿರು, ಹಾಳುಗೆಡುಹದಿರು,
ವಿಕೃತಿಗೆ.. ಕೃತಿಯುಂಟು. ಶಾಸನದಂತೆ ಎಚ್ಚರ.
ಕಾಗದದ ದೋಣಿಯಂತೆ ತೇಲಿಹೋದವು ಮನೆಗಳು
ಕಾಲನ ಹೊಡೆತಕ್ಕೆ ಈಗ ಎಲ್ಲರೂ ಸಮಾನರು.
ಬದುಕಿ ಬಿಡುವ ಬನ್ನಿ. ಬದುಕು ಸಾಗಿಸಿದ ದಿಕ್ಕಿನೆಡೆಗೆ ಸಾಗಿ.
ಪವನ ಕುಮಾರ ಕೆ ವಿ
ಬಳ್ಳಾರಿ