ಬಾ ಗೆಳತಿ

ಬಾ ಗೆಳತಿ

ಹೃದಯದ ಕವಾಟು ತೆರೆದಿದೆ ಗೆಳತಿ
ನೀ ನಿಲ್ಲದೆ ಗಾಳಿ ಬೆಳಕಿಲ್ಲ ಮನೆಯಲ್ಲಿ

ತಾಂಬೂಲ ಅಗೆಯುತ್ತಾ
ಕಂಗಳಲಿ ಆಸೆಯನೊಸುರುತ್ತಾ
ಕಾಯುತ್ತಿದೆ ಜೀವ, ನಿರೀಕ್ಷೆ ಹುಸಿಯಾಗದಿರಲಿ

ಕೈಯೊಳಗಿನ ಪುಸ್ತಕ
ಕಂಗಳ ಮೇಲಿನ ಕನ್ನಡಕ
ಹುಡುಕುತ್ತಿದೆ ನಿನ್ನನ್ನೇ ಎಲ್ಲಾ ಪುಟಗಳ ತಿರುಗಿಸಿ
ಬಾವ ಬರಿದಾಗದಿರಲಿ

ಅದೆಷ್ಟು ಹಣತೆಗಳ ಬೆಳಗಬೇಕಿದೆ ಮನದಲ್ಲಿ
ಆರದ ಬೆಳಕಾಗಿ ಒಮ್ಮೆ ಬಾ ಸಂತಸದಿ
ಈ ಹೃದಯದ ಕವಾಟು ತೆರದಿದೆ ನಿನಗಾಗಿ

ಪವನ ಕುಮಾರ ಕೆ. ವಿ.
ಬಳ್ಳಾರಿ
ಮೊಬೈಲ್ : 9663346949

Related post