ಬಿಗ್ ಬಾಸ್ (ಸೀಸನ್ -8) – ದಂಡ ಯಾತ್ರೆ

ಈ ವಾರದ ಬಿಗ್ ಬಾಸ್ ಸೀಸನ್ 8 ಎಲ್ಲ ಸ್ಪರ್ದಿಗಳು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗುವ ಮೂಲಕ ಶುರುವಾಯಿತು. ಶಮಂತ್ ಮತ್ತು ಅರವಿಂದ್ ಕೆ ಪಿ ಎಲಿಮಿನೇಷನ್ ನಿಂದ ಇಮ್ಮ್ಯೂನಿಟಿ ಪಡೆದಿದ್ದರು. ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಎರಡು ತಂಡಗಳನ್ನು ತಾವೇ ರಚಿಸಿ ‘ದಂಡ ಯಾತ್ರೆ’ ಎಂಬ ಹೆಸರಿನಲ್ಲಿ ಟಾಸ್ಕ್ ನೀಡಿದ್ದರು. ಮಂಜು ಪಾವಗಡ, ದಿವ್ಯ ಯು, ದಿವ್ಯ ಸುರೇಶ್, ಶಮಂತ್, ಮತ್ತು ಚಕ್ರವರ್ತಿ ಒಂದು ತಂಡವಾಗಿ ತಮ್ಮನ್ನ “ನಿಮಗೈತೆ ಇರು” ಎಂದು ಕರೆದುಕೊಂಡರೆ ಅರವಿಂದ್ ಕೆ ಪಿ, ಶುಭ ಪೂಂಜಾ, ಪ್ರಶಾಂತ್ ಸಂಭರ್ಗಿ, ಪ್ರಿಯಾಂಕಾ ಮತ್ತು ವೈಷ್ಣವಿ ಮತ್ತೊಂದು ತಂಡವಾಗಿ ತಮ್ಮ ತಂಡವನ್ನು “ವಿಜಯಯಾತ್ರೆ” ಎಂದು ಕರೆದುಕೊಂಡರು.

ಮೊದಲನೇ ಟಾಸ್ಕ್ ಆಗಿ ಬಾಣದ ಮೇಲೆ ಚೆಂಡುಗಳನ್ನು ಇಟ್ಟು ಯಾರು ದೀಪವನ್ನು ಹೆಚ್ಚು ಸಮಯ ಚೆಂಡುಗಳು ಬೀಳದಂತೆ ಬಾಣವನ್ನು ಬ್ಯಾಲೆನ್ಸ್ ಮಾಡುತ್ತಾರೋ ಅವರು ಗೆದ್ದು ತಮ್ಮ ತಂಡಕ್ಕೆ ಒಂದು ವಿಜಯ ದಂಡ ಗೆಲ್ಲುತ್ತಾರೆ. ಇದರಲ್ಲಿ ಅರವಿಂದ್ ಕೆ ಪಿ ಮತ್ತು ದಿವ್ಯ ಸುರೇಶ್ ಬಹಳ ಚೆನ್ನಾಗಿ ಆಡಿದರು. ಕೊನೆಗೆ ಅರವಿಂದ್ ಕೆ ಪಿ ಒಂದು ಗಂಟೆಗೂ ಹೆಚ್ಚು ಸಮಯ ಚೆಂಡುಗಳನ್ನು ಬ್ಯಾಲೆನ್ಸ್ ಮಾಡಿ ತಮ್ಮ ತಂಡಕ್ಕೆ ಮೊದಲನೇ ವಿಜಯದಂಡ ಗೆದ್ದು ತಂದರು.

ಎರಡನೇ ಟಾಸ್ಕಿನಲ್ಲಿ ಎದುರಾಳಿ ತಂಡದ ಒಬ್ಬ ಸದಸ್ಯ ಹಾಕಿಕೊಂಡ ವೆಲ್ಕ್ರಾನ್ ಜಾಕೆಟ್ ಗೆ ನಕ್ಷತ್ರವೊಂದನ್ನು ಅಂಟಿಸಬೇಕಿತ್ತು ಮತ್ತು ತಮ್ಮ ತಂಡದಲ್ಲಿ ವೆಲ್ಕ್ರಾನ್ ಜಾಕೆಟ್ ಹಾಕಿರುವ ಸದಸ್ಯರನ್ನು ಎದುರಾಳಿ ತಂಡದಿಂದ ಕಾಪಾಡಬೇಕು. ಈ ಫಿಸಿಕಲ್ ಟಾಸ್ಕಿನಲ್ಲಿ ಎರಡೂ ತಂಡದ ಮದ್ಯೆ ನೂಕು ನುಗ್ಗಲು ನೆಡೆದು ಮೊದಲು ‘ನಿಮಗೈತೆ ಇರು’ ತಂಡ ಅರವಿಂದ್ ಕೆ ಪಿ ಗೆ ನಕ್ಷತ್ರವನ್ನು ಅಂಟಿಸುವಲ್ಲಿ ಯಶಸ್ವಿಯಾದರೆ, ಎರಡನೇ ಸುತ್ತಿನಲ್ಲಿ ಎರಡೂ ತಂಡಗಳು ಏಕಕಾಲಕ್ಕೆ ಸ್ಟಾರ್ ಗಳನ್ನೂ ತಮ್ಮ ಎದುರಾಳಿ ತಂಡದ ಮೇಲೆ ಅಂಟಿಸಿದವು. ಮೂರನೇ ಬಾರಿ ಆಟವನ್ನು ಜೋರು ರಭಸದಿಂದ ಆಡಿ ವಿಜಯಯಾತ್ರೆ ತಂಡ ಸ್ಟಾರ್ ಗಳನ್ನೂ ಅಂಟಿಸುವುದರಲ್ಲಿ ಯಶಸ್ವಿಯಾದರು. ಕೊನೆಯ ಬಾರಿಯ ಸುತ್ತಿನಲ್ಲಿ ಆಡುವ ಬರದಲ್ಲಿ ದಿವ್ಯ ಉರುಡುಗ ಗಾಜಿನ ಕಿಟಕಿಗೆ ಡಿಕ್ಕಿ ಹೊಡೆದು ಗಾಯಗೊಂಡು ನೋವಿನಿಂದ ಕೆಳಗೆ ಉರುಳಿದರು.

ಅವರ ಬೆರಳು ಮತ್ತು ಮೊಣಕೈ ನಿಂದ ರಕ್ತ ಹರಿದು ನೋವಿನಿಂದ ಕೂಗುತ್ತಿದ್ದರು. ಇದನ್ನು ಕಂಡ ಎಲ್ಲಾ ಸ್ಪರ್ದಿಗಳು ಗಾಬರಿಯಾದರು. ಈ ಮದ್ಯೆ ಅರವಿಂದ್ ಕೆ ಪಿ ಗೆ ದಿವ್ಯ ಉರುಡುಗ ಬಗ್ಗೆ ಇರುವ ಕಾಳಜಿ ಎದ್ದು ಕಾಣುತಿತ್ತು. ಕೊನೆಗೆ ‘ನಿಮಗೈತೆ ಇರು’ ತಂಡ ಗೆದ್ದು ವಿಜಯದಂಡವನ್ನು ತಮ್ಮದಾಗಿಸಿಕೊಂಡರು. ಈ ಟಾಸ್ಕಿನಲ್ಲಿ ಸೋತ ‘ವಿಜಯಯಾತ್ರೆ’ ತಂಡಕ್ಕೆ ಶಿಕ್ಷೆಯಾಗಿ ತಂಡದ ಇಬ್ಬರು ಸದಸ್ಯರು ಮನೆಯಲ್ಲಿ ಎಲ್ಲೇ ಹೋದರು ಅವರ ಇಂದೇ ಅಂಬೆಗಾಲಿನಲ್ಲಿ ಹಿಂಬಾಲಿಸುವಂತೆ ಬಿಗ್ ಬಾಸ್ ತಿಳಿಸಿದರು. ಶುಭ ಪೂಂಜಾ ಮತ್ತು ಪ್ರಶಾಂತ್ ಸಂಭರ್ಗಿ ಅವರ ಸ್ಥಿತಿ ಕಂಡು ಎಲ್ಲರು ನಗುವಂತಾಯಿತು.

ಮುಂದಿನ ಟಾಸ್ಕ್ “ಗೆಲುವಿನ ಬುಟ್ಟಿ” ಯಲ್ಲಿ ‘ನಿಮಗೈತೆ ಇರು’ ತಂಡ ಬಾಲನ್ನು ಬಾಸ್ಕೆಟ್ ಬಾಲಿನ ಬುಟ್ಟಿಯಲ್ಲಿ ಹಾಕುವಲ್ಲಿ ಯಶಸ್ವಿಯಾಗಿ ಒಂದು ವಿಜಯ ದಂಡವನ್ನು ಪಡೆಯಿತು. ಇದರಲ್ಲಿ ಸೋತ ‘ನಿಮಗೈತೆ ಇರು’ ತಂಡದ ಇಬ್ಬರು ಸದಸ್ಯರು ಬಾಯಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂಡೆ ಮಾತನಾಡಬೇಕಿತ್ತು, ಮಂಜು ಪಾವಗಡ ಮತ್ತು ಚಕ್ರವರ್ತಿ ಈ ಶಿಕ್ಷೆಯನ್ನು ಅನುಭವಿಸಿದ ಪರಿಗೆ ಮನೆಯಲ್ಲಿ ಎಲ್ಲಾ ಸ್ಪರ್ದಿಗಳು ಬಿದ್ದು ಬಿದ್ದು ನಕ್ಕರು.

‘ಒಂದು ಸುಳ್ಳು ಎರಡು ನಿಜ’ ಟಾಸ್ಕಿನಲ್ಲಿ ಎದುರಾಳಿ ತಂಡದವರು ಹೇಳುವ ಮೂರು ವಿಷಯಗಳಲ್ಲಿ ಯಾವುದು ಸುಳ್ಳು ಎಂದು ಊಹಿಸಬೇಕಿತ್ತು. ಇದರಲ್ಲಿ ವಿಜಯಯಾತ್ರೆ ತಂಡ ಗೆದ್ದು ಮತ್ತೊಂದು ವಿಜಯದಂಡವನ್ನು ತಮ್ಮದಾಗಿಸಿಕೊಂಡರು.

‘ಘಮವನ್ನು ಸೆಳೆಯುತ್ತಾ’ ಟಾಸ್ಕಿನಲ್ಲಿ ಇಟ್ಟಿರುವ ಪದಾರ್ತಗಳನ್ನು ಬರಿ ವಾಸನೆಯಿಂದ ಯಾವುದೆಂದು ಊಹಿಸಿಬೇಕಿತ್ತು. ಇದರಲ್ಲಿ ಪಾಪ್ಕಾರ್ನ್, ಚಾಕಲೇಟ್ ಸಿರಪ್, ಜೇನುತುಪ್ಪ, ಸೊಳ್ಳೆ ಬತ್ತಿ, ಶೂ ಪಾಲಿಶ್ ಮತ್ತು ಸಗಣಿಯನ್ನು ಕೂಡ ಇಡಲಾಗಿತ್ತು. ಈ ಟಾಸ್ಕಿನಲ್ಲಿ ‘ವಿಜಯಯಾತ್ರೆ ತಂಡದವರು ಗೆದ್ದು ಇನ್ನೊಂದು ವಿಜಯದಂಡವನ್ನು ತಮ್ಮದಾಗಿಸಿಕೊಂಡರು.

ಭಾನುವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಸರಣಿ ಟಾಸ್ಕ್ ಗಳನ್ನೂ ಕೊಟ್ಟಿದ್ದರು. ‘ಈ ಉಸಿರ ಕೊಲ್ಲಬೇಡ’ ಟಾಸ್ಕಿನಲ್ಲಿ ಬಲೂನ್ ಗಳಿಗೆ ಶೇವಿಂಗ್ ಕ್ರೀಮ್ ಹಚ್ಚಿ ಶೇವಿಂಗ್ ಮಾಡಬೇಕಿತ್ತು. ಇದರಲ್ಲಿ ಶಮಂತ್ ಚೆನ್ನಾಗಿ ಆಡಿ ಅವರ ತಂಡಕ್ಕೆ ಒಂದು ಅಂಕವನ್ನು ಗೆದ್ದುಕೊಂಡರು. ‘ಹುಳಿ ಇಂಡಿ’ ಟಾಸ್ಕಿನಲ್ಲಿ ನಿಂಬೆ ಹಣ್ಣಿನ ರಸವನ್ನು ಯಾರು ಮೊದಲು ಗಾಜಿನ ಗ್ಲಾಸ್ ಗಳಿಗೆ ತುಂಬುತ್ತಾರೋ ಅವರು ಗೆಲ್ಲುತ್ತಾರೆ. ಇದರಲ್ಲಿ ಅರವಿಂದ್ ಕೆ ಪಿ ಗೆಲುವನ್ನು ಸಾದಿಸಿದರು. ‘ನಾವಡಲು ನೀವು ಹಾಡಬೇಕು’ ಟಾಸ್ಕಿನಲ್ಲಿ ದಿವ್ಯ ಯು ರವರು ಹೆಚ್ಚಿನ ಚಲನಚಿತ್ರ ಹಾಡುಗಳನ್ನು ಹಾಡಿ ಪೂರ್ತಿ ಮಾಡಿ ಗೆದ್ದರು. ‘ಏಳು ಬೀಳು’ ಟಾಸ್ಕಿನಲ್ಲಿ ಕೂಡ ‘ನಿಮಗೈತೆ ಇರು’ ತಂಡ ಗೆದ್ದು ವಿಜಯದಂಡವನ್ನು ಪಡೆಯಿತು. ಇದರಿಂದ ಎರಡೂ ತಂಡದ ಹತ್ತಿರ ತಲಾ 5 ವಿಜಯದಂಡ ಇದ್ದು ಮುಂದಿನ ಟಾಸ್ಕ್ ಎರಡೂ ತಂಡದವರಿಗೆ ಡು ಆರ್ ಡೈ ಹಾಗಿತ್ತು.

ವಾರದ ಕೊನೆಯ ಟಾಸ್ಕ್ ‘ಕಿಡಿ ಕಡ್ಡಿ’ ಯಲ್ಲಿ ಯಾವ ತಂಡ ಸೋಲುತ್ತದೋ ಆ ತಂಡದ ಎಲ್ಲಾ ಸದಸ್ಯರು ಈ ವಾರದ ನಾಮಿನೇಷನ್ ಗೆ ನೇರವಾಗಿ ನೇಮಕವಾಗುತ್ತಾರೆ. ಈ ಟಾಸ್ಕಿನಲ್ಲಿ ಬೆಂಕಿ ಕಡ್ಡಿಗಳನ್ನು ಸಾಲಾಗಿ ಜೋಡಿಸಿ ಒಂದು ಕಡೆ ಹಚ್ಚಿಸಿದ ಬೆಂಕಿ ಕೊನೆಯವರೆಗೂ ಸಾಗಿ ಕೊನೆಯಲ್ಲಿ ಇತ್ತ ಕರ್ಪೂರವನ್ನು ಸುಡಬೇಕು. ಈ ಟಾಸ್ಕ್ ಬಹಳ ಕೊತುಹಲಕಾರಿಯಾಗಿದ್ದು ಮತ್ತು ರೋಚಕವಾಗಿದ್ದು ಎಲ್ಲಾ ಸದಸ್ಯರು ಆತಂಕದಿಂದ ವೀಕ್ಷಿಸುತ್ತಿದ್ದರು. ಕೊನೆಗೆ ಮಂಜು ಮತ್ತು ದಿವ್ಯ ಸುರೇಶ್ ಗೆದ್ದು ತಮ್ಮ ತಂಡವನ್ನು ನಾಮಿನೇಷನ್ ನಿಂದ ಪಾರು ಮಾಡಿದರು.

ಈ ವಾರದ ಕೊನೆಯಲ್ಲಿ ದಿವ್ಯ ಸುರೇಶ್ ಕ್ಯಾಪ್ಟನ್ ಆಗಿ ಆಯ್ಕೆ ಯಾಗಿ ಚಕ್ರವರ್ತಿಯನ್ನು ಕಳಪೆ ಎಂದು ಕರೆದು ಜೈಲಿಗೆ ಕಳುಹಿಸಿದರು. ಈ ವಾರ “ವೈಷ್ಣವಿ, ಶುಭ ಪೂಂಜಾ, ಪ್ರಿಯಾಂಕಾ ಮತ್ತು ಪ್ರಶಾಂತ್ ಸಂಭರ್ಗಿ” ಇವರಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆಂದು ಕಾಡು ನೋಡೋಣ.

ಸುನಿಲ್ ಗುಂಡೂರಾವ್ 

Related post

2 Comments

  • Good one.

  • Very good writing Sunil

Leave a Reply

Your email address will not be published. Required fields are marked *