ಬೆಳಕಿನತ್ತ ಬದುಕು

ಬೆಳಕಿನತ್ತ ಬದುಕು

ನೇಸರನ ಸವಿಬೆಳಕ ಬಿಂಬದಲಿ
ತರುಣಿ ತಾ ಹೊರಟಿಹಳು ಬದುಕಿನತ್ತ!
ಸಾಗಿಹಳು ಕಾನನದ ಕಡುದಾರಿಯಲಿ..
ದೃಷ್ಟಿ ಮಾತ್ರ ಕರದಲಿಹ ಕಂದೀಲಿನತ್ತ!!

ನೆನೆಯುತಾ ಗತಜೀವನದಾನಂದವ
ಮೂಡಿದೆ ಅವಳ ಮನದಲಿ ಸಂತಸ!
ಕಷ್ಟಗಳ ಮೆಟ್ಟಿ ನಡೆಯುತಾ ಬಂದಂತೆ..
ಹೃದಯದಿ ನೇಯ್ದಿಹಳು ಹೊಸ ಕನಸ!!

ಕತ್ತಲದಾರಿಯಲೂ ಆ ಪುಟ್ಟ
ಕಂದೀಲು ತಾ ಬೆಳಕಸೂಸಿ ನಕ್ಕಂತೆ!
ಬೇಗುದಿಯ ಕಾರ್ಮೋಡವದು ಸರಿದು…
ಅವಳ ಬಾಳಲಿ ಮತ್ತೆ ಸಂತಸದ ಕಂತೆ!!

ಬೆಳಕದು ಮೂಡುವ ದಿಗಂತದಿ
ಪಸರಿಸಿಹ ನಿಶೆಗೆ ಕಂದೀಲಿನ ಆಸರೆ!
ಅವಳ ಬದುಕು ಮತ್ತೊಮ್ಮೆ ನಕ್ಕಿತು ಸರಿಸಿ..
ಮನದಾಳದಿ ಕವಿದ ಸಂಕಟದ ತೆರೆ!!

ಸುಮನಾ ರಮಾನಂದ

Related post