ಬೊಗಸೆಯಲ್ಲಿ ಕಥೆಗಳು – ಅತೀ ಸಣ್ಣ ಕಥೆಗಳು
ಪುಸ್ತಕದ ಹೆಸರು: ಬೊಗಸೆಯಲ್ಲಿ ಕಥೆಗಳು
ಪ್ರಕಾರ: ಅತಿಸಣ್ಣ ಕಥೆಗಳ ಸಂಕಲನ
ಲೇಖಕರು: ಆಶಾ ರಘು
ಮುದ್ರಣ: 2
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 196
ಬೆಲೆ: 270/-
ಮೊಬೈಲ್: 9008122991
ನ್ಯಾನೋ ಕಥೆಗಳೆಂದೇ ಹೆಚ್ಚು ಜನಪ್ರಿಯವಾಗಿರುವ ಅತಿಸಣ್ಣ ಕಥೆಗಳ ಸಂಕಲನವಿದು.

ಇಲ್ಲಿನ ಕಥೆಗಳು ಸುಮಾರು ಮೂರ್ನಾಲ್ಕು ಸಾಲುಗಳಲ್ಲಿ ಅಥವಾ ಕೆಲವೊಂದು ಒಂದರ್ಧ ಪುಟದಲ್ಲಿ ಮುಗಿದುಬಿಡುತ್ತವೆ. ರಚನೆಯ ಕುರಿತು ಅರಿಕೆಯಲ್ಲಿ ಬರೆಯುತ್ತಾ ಲೇಖಕಿಯು ‘ನನ್ನ ಮಗಳನ್ನು ಮುದ್ದು ಮಾಡುವಾಗಿನ ಖುಷಿಯನ್ನೇ ಇವುಗಳ ರಚನೆಯಲ್ಲಿ ಕಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಸಂಕಲನಕ್ಕೆ ‘ಬೊಗಸೆಯಲ್ಲಿ ಕಥೆಗಳು’ ಎಂಬ ಹೆಸರಿಡಲು ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ ಕೃತಿಯೇ ಪ್ರೇರಣೆ ಎನ್ನುತ್ತಾರೆ ಲೇಖಕಿ. ಈ ಸಂಕಲನದಲ್ಲಿ ಸುಮಾರು 160 ಅತಿಸಣ್ಣ ಕಥೆಗಳಿವೆ.
ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.
ಸಾಹಿತ್ಯಮೈತ್ರಿ