ಭಾರತದ ಭಾಗ್ಯವಿಧಾತ
ಬೆಳೆದಿರಿ ದೂರ ತಳ್ಳಿದವರೆ ಅಪ್ಪಿಕೊಳ್ಳುವಂತೆ
ಇಡೀ ಮನುಕುಲವೇ ಪ್ರೀತಿಯಿಂದ ಒಪ್ಪಿಕೊಳ್ಳುವಂತೆ
ಬೆಳಗಿದಿರಿ ಸದಾ ಕಾಲ ಸೂರ್ಯ ಚಂದ್ರರಂತೆ
ನೆನಪಾಗುತ್ತೀರಿ ನಿತ್ಯ ಹೃದಯ ಬಡಿತದಂತೆ
ಭೂಮಿಯ ಮೇಲೆ ಬಾಬಾಸಾಹೇಬ್ ಜನನ
ಭಾರತವೇ ಆಯಿತು ದಿವ್ಯ ಪಾವನ
ಬಾಲ್ಯದಲ್ಲಿ ಪಟ್ಟರು ಬಹಳ ಕಷ್ಟವನ
ಎಂದಿಗೂ ಬಿಡಲಿಲ್ಲ ಅಕ್ಷರ ಕಲಿಯುವ ಆಸೆಯನ
ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನ
ಕಾಣಲಿಲ್ಲ ಎಂದಿಗೂ ಬದುಕಿನಲ್ಲಿ ಸಿರಿತನ
ದೊರಕಿತು ಗುರುಗಳ ಮಾರ್ಗದರ್ಶನ
ಪಡೆದರು ತಂದೆ ತಾಯಿಯರ ಪ್ರೀತಿನ
ಹಿಂದೆ ಇಡಲಿಲ್ಲ ತಾವು ಇಟ್ಟ ಹೆಜ್ಜೆನ
ಬದಲಾಯಿಸಿದರು ದೃಷ್ಟಿಯಿಂದ ಭಾರತದ ಸೃಷ್ಟಿನ
ರಚಿಸಿದರು ಸಂವಿಧಾನದ ಕರುಡು ಸಮಿತಿನ
ಮಾಡಿದರು ಅಧ್ಯಕ್ಷರನ್ನಾಗಿ ಸಲಹಾ ಸಮಿತಿ ಇವರನ
ಬರೆದರು ಸಂವಿಧಾನದ ಹಲವಾರು ಕಲಂಗಳನ
ನೀಡಿದರು ಅವಕಾಶ ಪ್ರತಿ ಜಾತಿಗಳಿಗೂ ಸಮಾನ
ಕಾನೂನಿನ ಮುಂದೆ ಎಲ್ಲರೂ ಸಮಾನ
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅನುದಿನ
ಶ್ರೀ ಮುತ್ತು.ಯ.ವಡ್ಡರ
ಶಿಕ್ಷಕರು
ಬಾಗಲಕೋಟ
Mob-9845568484