ಭಾವಾಂತರಂಗ
ತಂಗಾಳಿಯು ಕೆನ್ನೆಯ
ಮೊದಮೊದಲು ಸೋಕಿ
ನಂತರ ರಾಚಿ ಕೆಂಪಾಗಿಸಿದಾಗ
ನಿನ್ನ ಬೆಚ್ಚನೆ ಬೊಗಸೆಯಲ್ಲಿ
ಮುಖವಿಟ್ಟು ಮುದಗೊಳ್ಳಬೇಕೆನಿಸುವುದು
ಆಗಾಗ……
ತಣ್ಣನೆಯ ನಿನ್ನ ನೆನಪೊಂದು
ಎದೆಗೂಡನ್ನು ಬೆಚ್ಚಗಾಗಿಸಿ
ಮತ್ತೆ ನಿನ್ನ ಮಡಿಲ ಆಸರೆಯಲ್ಲಿ
ನನ್ನ ನಾನು ಬಚ್ಚಿಟ್ಟು ನಿನ್ನದೇ
ನಾಡಲ್ಲಿ ನಿನ್ನವಳೇ ಆಗಬೇಕೆನಿಸುವುದು!!!???
ಇವೆಲ್ಲವೂ……
ಪ್ರೀತಿಯೋ ಪ್ರೇಮವೋ
ಎರಡೂ ಇರದ ಕಾಮವೋ
ಭಾವ ಬಯಕೆಗಳ ಬಲೆಯೋ
ನಿನ್ನೊಂದಿಗೆ ಸೇರುವುದೇ
ಜೀವನದ ಹಿರಿ ಸಾಧನೆಯೋ!!!???
ಅಥವಾ……
ಇದೊಂದು ಪರಿಯ ಪರೀಕ್ಷೆಯೋ
ಆಧಾರವಿರದ ನಿರೀಕ್ಷೆಯೋ
ಭಾವ ಬಕಾಸುರನ ಸಮೀಕ್ಷೆಯೋ
ಲೋಕ ರೂಢಿಯ ಸರ್ವೇಕ್ಷಣೆಯೋ!!!???
ಹಾಗೂ ಇರದೇ……..
ಇವೆಲ್ಲವೂ ನನ್ನದೇ
ಭಾವಪರವಶತೆಯ ಲೋಲುಪ್ತಿಯೋ!!!???
ಸೌಜನ್ಯ ದತ್ತರಾಜ