ಮಂಗಳದ ಅಂಗಳ
ಬೆಂಕಿಯ ಕೆನ್ನಾಲಿಗೆಗೆ ಕಾಡು ಹೊತ್ತಿ ಉರಿದಿದೆ
ಅದ್ಯಾವ ಎದೆಯ ಬೆಂಕಿ ಸುಟ್ಟು ಹೋಗಿದೆಯೋ
ಅದೆಷ್ಟು ಜೀವ ರಾಶಿ ಆರ್ದತೆಯೊಳು ಚೀತ್ಕರಿಸಿವೆಯೋ.?
ನಭವ ಸುಡುತ್ತಿದೆ ಸಣ್ಣ ಕಿಡಿ
ನಿರ್ಲಜ್ಜ ಜೀವದ ಸ್ವಾರ್ಥದ ಕಿಡಿಯಾಗಿರಬಹುದೇ?
ಕಿಡಿಗೇಡಿಯೆಂದರು ಹಿರಿಯರು ಇರಬಹುದು.
ಮನುಜನಾಸೆಗೆ ಬೆಂಕಿ ಬೀಳುವುದ್ಯಾವಾಗ?
ಕಾಡು ಉಳಿದರೆ ನಾಡು ಉಳಿಯುವುದು
ಪುಸ್ತಕಗಳ ಪೀಠಿಕೆಗೆ ಕಡಿವಾಣ ಎಂದು?
ಪ್ರಕೃತಿಯ ಮುನಿಸಿಗೆ ಧರೆಯ ಜೀವಿಗಳು ಧಗ ಧಗ.
ಮನುಜನಿಲ್ಲದ ಭೂಮಿ ಮತ್ತೊಂದು ಮಂಗಳದ ಅಂಗಳ…
ಪವನ ಕುಮಾರ್ ಕೆ ವಿ
ಬಳ್ಳಾರಿ