ಮುಗ್ಧ ಮಾನವ
ನಮ್ಮೊಳಗೂ ಇರುವನೊಬ್ಬ ಮಾನವ
ಮರೆತರೆ ಅವನಾಗುವ ದಾನವ
ಸದಾ ಇರುವನು ಜಾಗೃತ ಅವ
ನೀನೇ ನೀನೇ ಕೇಳು ಮಾನವ
ಸಕಲ ಜೀವರಾಶಿಗಳಲ್ಲಿ ಮುಖ್ಯ ನೀನೇ
ಜೀವಸಂಕುಲದ ಆಧಾರವೂ ನೀನೇ
ಪ್ರಕೃತಿ ಮಾತೆಯ ಸುಂದರ ಸೃಷ್ಟಿ ನೀನೇ
ಮಾತೆಯ ಮರೆತ ಮೂಢನೂ ನೀನೇ
ಮರೆಯದಿರು ನೀ ಅಮೋದ ಭಾವವಾ
ಉಸಿರಾಗಿಸು ನೀ ಇಳೆಯ ಜೀವವಾ
ಹೆಚ್ಚೆಚ್ಚು ಬೆಳಸು ನೀ ಗಿಡಮರವಾ
ಪ್ರಕೃತಿಯೂ ನಮ್ಮೆಲ್ಲರ ನಿಜ ಮಾತೆಯಲ್ಲವಾ…
ಮಹೇಶ್ ಸಿ.ಎನ್.