ಮೌನ ಕಲಹ

ಮೌನ ಕಲಹ

ಮನೆಯೊಳಗೆ
ಸದ್ದು ಗದ್ದಲಗಳಿಲ್ಲ,
ಮನದಿ ಮುಗಿಯದ
ಶಂಕೆ, ಕೋಲಾಹಲ.

ಕದ ತಟ್ಟಿದರೆ
ಮರುತ್ತರವಿಲ್ಲ,
ಬೀಗ ಬಿಗಿದ ಮನೆ
ಎಲ್ಲರ ಮನವೀಗ.

ಕತ್ತಿಯಂಚಿನ,
ಬಂದೂಕದ ಸದ್ದಿನ
ಯುದ್ಧವೊಂದನ್ನೇ
ಯುದ್ದವೆನ್ನಲಾಗದು.

ದುಃಖ ಹೆಪ್ಪುಗಟ್ಟಿ
ಸದ್ದಿಲ್ಲದೆಯೂ
ನಡೆಯುತ್ತಲಿದೆ
ಎಲ್ಲೆಡೆ ಮೌನಕಲಹ !

ಶ್ರೀವಲ್ಲಿ ಮಂಜುನಾಥ

Related post