ರೈತರ ಮಕ್ಕಳು ನಾವೆಲ್ಲ
ಹಳ್ಳಿಯ ಸೊಬಗಿನ ಒಳ್ಳೆಯ ಮನಸಿನ
ರೈತರ ಮಕ್ಕಳು ನಾವೆಲ್ಲ ,,
ನಮ್ಮನು ಒಪ್ಪದೆ ಬೇಡ ಎನ್ನಲು
ಕಾರಣ ಏನು ಗೊತ್ತಿಲ್ಲ.
ರೈತರ ಮಕ್ಕಳು ನಾವೆಲ್ಲ,,,
ನಾವು ಬೆಳೆದರೆ ಇರುವುದು ಜಗವೆಲ್ಲ.!!೧!!
ಬರಡು ಭೂಮಿಯನು ಹಸನು ಮಾಡುತ
ಬೆಳೆಯುವೆವು,,,ಬೆಳೆಯನ್ನ,,,
ಬೆಳೆಗೆ ಹಬ್ಬಿರುವ ಕಳೆಯ ಕೀಳುತ
ರಾಶಿ ಹಾಕುವೆವು ಫಸಲನ್ನ,,,
ರೈತರ ಮಕ್ಕಳು ನಾವೆಲ್ಲ ,,,
ನಾವು ಬೆಳೆದರೆ ಇರುವುದು ಜಗವೆಲ್ಲ.!!೨!!
ಬಿಸಿಲಿಗಂಜದೆ ಚಳಿಗೆ ನಡುಗದೆ
ಬೆವರ ಹರಿಸುವುದು ನಮ್ಮ ಗುಣ.
ತುತ್ತು ತಿನ್ನದೆ ಹೊತ್ತು ನೊಡದೆ
ಕಾಯ ಮಾಡುವುದು ನಮ್ಮ ಮನ.
ರೈತರ ಮಕ್ಕಳು ನಾವೆಲ್ಲ,,
ನಾವು ಬೆಳೆದರೆ ಇರುವುದು ಜಗವೆಲ್ಲ !೩!!
ಕೊಚ್ಚಿ ಹೋದರು, ನಷ್ಟವಾದರು
ಕುಗ್ಗದ ಮನಸು ನಮಗಿಹುದು.
ಕೋಟಿ ಬಂದರು , ಕೋಟೆ ಕಟ್ಟಿದರು
ಹಿಗ್ಗದ ತನವು ತುಂಬಿಹುದು.
ರೈತರ ಮಕ್ಕಳು ನಾವೆಲ್ಲ,,,
ನಾವು ಬೆಳೆದರೆ ಇರುವುದು ಜಗವೆಲ್ಲ.!!೪!!
ಮೋಸ ಮಾಡುವ ನಂಬಿ ವಂಚಿಸುವ
ಯಾವ ಗುಣಗಳು ಗೊತ್ತಿಲ್ಲ
ಪ್ರೀತಿ ಮಮತೆಯಲಿ ದಾನ ಧರ್ಮವ
ಮಾಡುವ ಕಾರ್ಯವು ತಪ್ಪಿಲ್ಲ.
ರೈತರ ಮಕ್ಕಳು ನಾವೆಲ್ಲ,,,
ನಾವು ಬೆಳೆದರೆ ಇರುವುದು ಜಗವೆಲ್ಲ .!!೫!!
ಮನಸು ಒಪ್ಪಿದರೆ ಪ್ರೀತಿ ಮಾಡುವೆವು
ಅವರು ಒಪ್ಪಿದರೆ ಜೊತೆಗೆ ಬಾಳುವೆವು
ಯಾರೆ ಬಂದರು ಅಂಜಲ್ಲ,,,
ಜೀವ ಹೋದರು ಮರೆಯಲ್ಲ
ರೈತರ ಮಕ್ಕಳು ನಾವೆಲ್ಲ,,,
ನಾವು ಬೆಳೆದರೆ ಇರುವುದು ಜಗವೆಲ್ಲ.!!೬!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ