ನಕ್ಷತ್ರ ಪುಂಜ
ವಿಶ್ವದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200 – 2000 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ಇತ್ತೀಚಿನ ಸಂಶೋಧನೆಗಳ ನಂತರ ವಿಶ್ವದ ವಿಕಾಸದ ಆರಂಭ 1375 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ಮರುತರ್ಕಿಸಿದ್ದಾರೆ.
ವಿಶ್ವದ ಆರಂಭದ ಕ್ಷಣಗಳನ್ನು ಮಹಾಸ್ಫೋಟವೆಂದು ಕರೆದಿದ್ದಾರೆ. ಒಂದು ಸೂಕ್ಶ್ಮಾತಿ ಉಪಕರಣ ಪ್ರಭಾಣು ಪ್ರೋಟಾನ್ ಸ್ಪೋಟಗೊಂಡು ಕೆಲವೇ ಸೆಕೆಂಡುಗಳಲ್ಲಿ ಅಗಾಧ ಶಾಖದಿಂದ ಕುದ್ದು 30 ನಿಮಿಷಗಳಲ್ಲಿ ಕುದಿಯುತ್ತಿರುವ ದೊಡ್ಡ ಪ್ಲಾಸ್ಮಾದ ಉಂಡೆಯಾಗಿ ಕ್ರಮೇಣ ಶಾಖವನ್ನು ಕಡಿಮೆ ಮಾಡಿಕೊಳ್ಳುತ್ತಾ ಈ ವಿಶಾಲ ವಿಶ್ವದ ಮತ್ತು ಅದರಲ್ಲಿ ತುಂಬಿರುವ ಕೋಟಿ ಕೋಟಿ ಬ್ರಹ್ಮಾಂಡದಲ್ಲಿಯೂ ಕೋಟಿ ಕೋಟಿ ನಕ್ಷತ್ರಗಳಿವೆ.
ನಾವಿರುವ ಗ್ರಹ ನಮ್ಮ ಸೂರ್ಯ ಅಥವಾ ಸೌರಮಂಡಲವಿರುವ ಈ ಬ್ರಹ್ಮಾಂಡಕ್ಕೆ ಆಕಾಶಗಂಗೆ ಅಥವಾ ಕ್ಷೀರಪಥವೆಂದು ಕರೆಯುವವರು. ಈ ನಮ್ಮ ಕ್ಷೀರಪಥವೆಂಬ (milkyway) ಬ್ರಹ್ಮಾಂಡದಲ್ಲಿ ಸುಮಾರು 200 ರಿಂದ 400 ಶತಕೋಟಿಗಳ ನಡುವಿನ ಸಂಖ್ಯೆಯ ನಕ್ಷತ್ರಗಳು ಇವೆ ಮತ್ತು ಕನಿಷ್ಠ 100 ಶತಕೋಟಿ ಗ್ರಹಗಳಿಂದ ಕೂಡಿದೆ. ಇವುಗಳಲ್ಲಿ ಒಂದಾದ ‘ಸೂರ್ಯ’ ಒಂದು ಮಧ್ಯಮ ಗಾತ್ರದ ಮಧ್ಯವಯಸ್ಸಿನ ನಕ್ಷತ್ರ. ಸೂರ್ಯನ ಜ್ಞಾನವು ಮಹಾಸ್ಫೋಟದ ನಂತರ ಸುಮಾರು 850 ಕೋಟಿ ವರ್ಷಗಳ ನಂತರ ಆದದ್ದು. ನಕ್ಷತ್ರವೊಂದರ ಹುಟ್ಟು ಅನೇಕ ಸಹಸ್ರ ಸಂವತ್ಸರಗಳ ಕ್ರಿಯೆ!
ನಕ್ಷತ್ರಗಳ ಜನನ ಹಾಗು ಮರಣ
ನಕ್ಷತ್ರಗಳು ಧೂಳಿನ ಮೋಡಗಳೊಳಗೆ ಜನಿಸುತ್ತವೆ ಒಂದು ಭ್ರೂಣ ನಕ್ಷತ್ರ ಒಂದು ಚಿಕ್ಕ ನಕ್ಷತ್ರ ಪೋಷಕ ಆಣ್ವಿಕ ಮೋಡವನ್ನು (molecular cloud) ಒಟ್ಟಾಗಿ ಜೋಡಿಸಲು ಆರಂಭಿಸಿರುತ್ತದೆ. ಈ ಭ್ರೂಣ ತಾರೆ ಒಳಬೀಳುವ ಅನಿಲವನ್ನು ಮತ್ತೆ ಹೊರ ಚಿಮ್ಮಿಸಿ ನಂತರ ಕಣ್ಣಿಗೆ ಕಾಣುವ ಪೂರ್ವ ಮುಖ್ಯ ಅನುಕ್ರಮ ತಾರೆಯಾಗುವುದು.
ನಕ್ಷತ್ರ ಹಿಗ್ಗಿದಂತೆ ತನ್ನ ಕೆಲ ಭಾಗ ದ್ರವ್ಯರಾಶಿಯ ಅಂಶಗಳನ್ನು ಅಂತರತಾರ ಪರಿಸರಕ್ಕೆ ಎಸೆಯುತ್ತದೆ. ಅದು ನಂತರ ಮರುಬಳಕೆಯ ಪ್ರಕ್ರಿಯೆಯಿಂದ ಹೊಸ ನಕ್ಷತ್ರಗಳ ಉಗಮಕ್ಕೆ ಕಾರಣವಾಗುತ್ತಿದೆ. ಅದು ಒಂದು ವೈಟ್ ಡ್ವಾರ್ಫ್ ಆಗಬಹುದು, ಇಲ್ಲವೇ ನ್ಯೂಟ್ರಾನ್ ನಕ್ಷತ್ರವಾಗಬಹುದು, ಅಥವಾ ಸಾಕಷ್ಟು ಅಗಾಧ ಪ್ರಮಾಣದಲ್ಲಿ ದ್ರವ್ಯರಾಶಿ ಇದ್ದಲ್ಲಿ ಒಂದು ಕಪ್ಪು ಕುಳಿಯಾಗಬಹುದು.
ಹಲವು ಜ್ಯೋತಿವರ್ಶಗಳಷ್ಟು ದೂರದಲ್ಲಿ ನೆಡೆಯುತ್ತಿರುವ ಈ ವಿದ್ಯಮಾನವನ್ನು ಭಾರತದ ಬ್ರಹ್ಮಾಂಡದ ಕಣ್ಣು ಎಂದೇ ಖ್ಯಾತಿ ಪಡೆದಿರುವ ಇಸ್ರೋ ದ ಆಸ್ಟ್ರೋಸ್ಯಾಟ್ ಖಗೋಳ ವೀಕ್ಷಕ ಟೆಲಿಸ್ಕೋಪ್ ನಿಂದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಚಿಕ್ಕ ನಕ್ಷತ್ರಕ್ಕೆ ಆಹಾರವಾಗುತ್ತಿರುವ ದೊಡ್ಡ ನಕ್ಷತ್ರದ ಇರುವಿಕೆಯನ್ನು ಮೊದಲ ಬಾರಿಗೆ ಪತ್ತೆ ಮಾಡಿದ ಕೀರ್ತಿ ನಮ್ಮ ಬೆಂಗಳೂರಿನ ವಿಜ್ಞಾನಿಗಳಿಗೆ ಸಲ್ಲುತ್ತದೆ. ಪರಸ್ಪರ ಗುರುತ್ವಾಕರ್ಷಣ ಬಲದಿಂದ ಪರಿಭ್ರಮಣ ನೆಡೆಸುತ್ತಿರುವ ಈ ಅವಳಿ ನಕ್ಷತ್ರಗಳು ತಾರಾ ಪುಂಜ ಎನ್ ಜಿ ಸಿ 188 ಸಮೀಪದಲ್ಲಿವೆ ಎಂದು ಭಾರತೀಯ ಖಭೌತ ಸಂಸ್ಥೆಯ ವಿಜ್ಞಾನಿ ಪ್ರೊ. ಅನ್ನಪೂರ್ಣ ಸುಬ್ರಹ್ಮಣ್ಯಂ ಹೇಳಿದ್ದಾರೆ.
ಅವಳಿ ನಕ್ಷತ್ರಗಳಿರುವುದು ಸಾಮಾನ್ಯ ಸಂಗತಿ. ಬ್ಲೂ ಸ್ಟ್ರಾಗ್ಲರ್ ಅಥವಾ ವಾಂಪೈರ್ ಸ್ಟಾರ್ ಎಂದು ಕರೆಯಲಾಗುವ ಸಣ್ಣ ನಕ್ಷತ್ರವು ತನ್ನ ಗಾತ್ರವನ್ನು ಹಿಗ್ಗಿಸುತ್ತ ದೊಡ್ಡ ನಕ್ಷತ್ರವನ್ನು ನುಂಗುವುದು. ಇದರಿಂದ ಸಣ್ಣ ನಕ್ಷತ್ರವು ತಾರುಣ್ಯಾವಸ್ಥೆಯಲ್ಲಿರುವಂತೆ ತೋರಿಬರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ದೊಡ್ಡ ನಕ್ಷತ್ರವು ಸುಡುತ್ತಾ ನಾಶಕ್ಕೆ ಒಳಗಾಗುತ್ತ ಅವಶೇಷವಾಗಿ ಉಳಿದುಬಿಡುತ್ತದೆ. ಇದುವೇ ನಕ್ಷತ್ರಗಳ ಜನನ ಮತ್ತು ಮರಣಗಳ ಪ್ರಕ್ರಿಯೆ.
ಮುಂದಿನ ವಾರ ಇನ್ನಷ್ಟ್ಟು ವಿಸ್ಮಯ ಮಾಹಿತಿಯೊಂದಿಗೆ
ಕನಸು